‘ವಿಕ್ಕಿ’ ಕೇವಲ ಹತ್ತು ನಿಮಿಷಗಳ ಒಂದು ಅದ್ಭುತ ಕಥೆ.

1
41

ಮನು ಆಂಟೋನಿ ನಿರ್ದೆಶನದ ಕಿರು ಚಿತ್ರವಾದ ‘ವಿಕ್ಕಿ’ ಕೇವಲ ಹತ್ತು ನಿಮಿಷಗಳ ಒಂದು ಅದ್ಭುತ ಕಥೆ. ಮನುಷ್ಯ ಹಾಗೂ ಪ್ರಾಣಿ, ಇವರಿಬ್ಬರ ನಡುವೆ ಯಾರು ಉತ್ತಮರು ಎಂಬುದಕ್ಕೆ ನಿದರ್ಶನವಾಗಿ ರಚಿಸಲಾದ ಚಿತ್ರ ವಿಕ್ಕಿ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಕೆಲವೊಂದು ಪ್ರಾಣಿಗಳನ್ನು ಸ್ವತಂತ್ರವಾಗಿ ಬಿಟ್ಟರುತ್ತಾನೆ ಅದರಲ್ಲಿ ಮುಖ್ಯವಾಗಿ ಶ್ವಾನವನ್ನು. ಒಂದತ್ತೂಟ ಹಾಕಿದ ದಣಿಗಾಗಿ ನಿಸ್ವಾರ್ಥ ಸೇವೆ ಮಾಡುವ ಪ್ರಾಣಿ ಅಂದ್ರೆ ಅದು ನಾಯಿ. ಅದೇ ರೀತಿಯಾಗಿ ಮನು ಅವರು ರಚಿಸಿರುವ ಚಿತ್ರದಲ್ಲಿ ಹೀರೋ ಬೇರೆ ಯಾರೂ ಅಲ್ಲ ವಿಕ್ಕಿ ಎಂಬೆಸರಿನ ನಾಯಿ.
ಮನೆಯ ಯಜಮಾನ ತಾನು ಮನೆಯಲ್ಲಿಲ್ಲದಿದ್ದಾಗ ಮನೆಯನ್ನು ನೋಡಿಕೊಳ್ಳಲು ನಾಯಿಯನ್ನು ಇಟ್ಟುಕೊಂಡಿರುತ್ತಾನೆ ಮನೆಯ ಒಡೆಯ ವಿಕ್ಕಿ ಎಂದ ಕೂಡಲೇ ಬಾಲ ಅಲ್ಲಾಡಿಸುತ್ತಾ ತನ್ನ ದೊರೆಯ ಬಳಿ ಬಂದು ಆತನಿಗೆ ದಾರಿ ಮಧ್ಯೆ ಬಿಟ್ಟು ಬಂದು ಮನೆಯ ಮುಂದೆ ತನ್ನ ದೊರೆಯ ಬರುವಿಕೆಗಾಗಿ ಕಾಯುತ್ತಾ ಅಲ್ಲಿ ಇಲ್ಲಿ ಅಡ್ಡಾಡುತ್ತಾ, ನನ್ನ ದೊರೆ ವಾಪಾಸ್ಸಾಗುವಾಗ ತನಗಾಗಿ ನನ್ನ ಇಷ್ಟದ ಆಹಾರವನ್ನು ತರಬಹುದು ಎಂದು ಬಾಯಲ್ಲಿ ನೀರಿಳಿಸುತ್ತಾ ಕನಸು ಕಾಣುತ್ತಾ ಯಜಮಾನ ಬರುವ ದಾರಿಯನ್ನೇ ಕಾದು ಕುಳಿತಿರುತ್ತಾನೆ ವಿಕ್ಕಿ.. ಆದರೆ ಯಜಮಾನ ಮರಳುವ ವೇಳೆ ಕೈನಲ್ಲಿ ಮೀನೋ ಅಥವಾ ಮಾಂಸವೊ ತರುವ ಬದಲಿಗೆ ಪಂಜರದಲ್ಲಿ ಬಂಧಿಸಲ್ಪಟ್ಟಿದ್ದ ಎರಡು ಪಕ್ಷಿಗಳನ್ನು ತಂದಿರುತ್ತಾನೆ. ನಿರಾಸೆಯಿಂದಲೇ ಬಾಯಿ ಚಪ್ಪರಿಸಿಕೊಂಡು ಪ್ರತಿ ನಿತ್ಯದ ಅದೇ ಆಹಾರಕ್ಕೆ ಬಾಯಿ ಹಾಕುತ್ತಾನೆ ವಿಕ್ಕಿ. ಆದರೆ ಮನೆಗೆ ಬಂದಿರುವ ಎರಡು ಅಥಿತಿಗಳನ್ನು ಕಾಪಾಡುವ ಜವಾಬ್ದಾರಿ ವಿಕ್ಕಿಯದ್ದಲ್ಲವೇ..? ಪ್ರತೀ ದಿನವೂ ಆ ಪಂಜರದ ಬಳಿ ಹೋಗಿ ಆ ಎರಡು ಪಕ್ಷಿಗಳ ಆಟವನ್ನು ಗಮನಿಸುತ್ತಾ ಕಾಲ ಕಳೆಯುತ್ತಿರುವಾಗ ಒಂದು ದಿನ ತಮ್ಮ ಒಡೆಯನ ತೋಟದಲ್ಲಿ ದೊಡ್ಡದೊಂದು ಶಬ್ದ ಕೇಳಿ ಗಾಬರಿಗೊಂಡು ವಿಕ್ಕಿ ಅದರ ದಾರಿಯಲ್ಲೇ ಓಡಿ ಹೋಗುತ್ತಾನೆ. ಮುಂದೆ ಒಂದು ದೊಡ್ಡ ಗುಂಡಿ ಇರುವುದೂ ಕಾಣದೇ ಅದರೊಳಗೆ ಬಿದ್ದು ಬಿಡುತ್ತಾನೆ.. ಸಹಾಯಕ್ಕಾಗಿ ಎಷ್ಟೇ ಅರಚಿಕೊಂಡರೂ ಯಾವೊಬ್ಬರೂ ಬರೋದಿಲ್ಲಾ.. ಕಾದೂ ಕಾದೂ ಕೊನೆಗೆ ಮೂರ್ಚೆ ತಪ್ಪಿದ ವಿಕ್ಕಿ ಮತ್ತೆ ಎಚ್ಚರಗೊಂಡದ್ದು ತನ್ನ ಅಂಗಳ ಮನೆಯ ಬಾಗಿಲ ಬಳಿ.. ಮೆಲ್ಲನೇ ಕಣ್ಣ ಬಿಡುತ್ತಾ ಆ ಪಂಜರದಲ್ಲಿರುವ ಪಕ್ಷಿಯನ್ನು ಗಮನಿಸಿದ ವಿಕ್ಕಿ ತಾನು ಕೇಲವೇ ಗಂಟೆಯವರೆಗೆ ಆ ಗುಂಡಿಯಲ್ಲಿ ಇರಲು ಒದ್ದಾಡಿರುವಾಗ ಈ ಪಕ್ಷಿಗಳು ಜೀವನ ಪರಿಯಂತ ಬಂಧನಕ್ಕೋಳಟ್ಟುತ್ತದೆಯಲ್ಲಾ ಎಂದು ಒಂದು ಮೂಕ ನಾಯಿಗೆ ಅರಿವಾಗುತ್ತೆ.. ಕೂಡಲೇ ಆ ಎರಡೂ ಪಕ್ಷಿಗಳಿಗೆ ಬಿಡುಗಡೆÀ ಭಾಗ್ಯವನ್ನು ನೀಡುವುದಲ್ಲದೇ ಆ ಪಂಜರವನ್ನು ದೂರದ ನದಿಗೆ ಹೋಗಿ ಬಿಸಾಡಿ ಬಂದು ಏನೂ ಗೊತ್ತಿಲ್ಲದ ಹಾಗೆ ಮನೆ ಮುಂದೆ ಮಲಗಿರುವಾದ ಯಜಮಾನ ಮರಳಿ ಬರುವಾಗ ಕೈನಲ್ಲಿ ಮೀನು ಇರುವುದನ್ನು ನೋಡಿದ ವಿಕ್ಕಿ ಒಮ್ಮೆ ತಿರುಗಿ ಆ ಖಾಲಿಯಾದ ಪಕ್ಷಿಯ ಸ್ಥಳವನ್ನು ನೋಡುತ್ತಾನೆ. ಇದರಲ್ಲಿ ಮಾನವೀಯತೆಯ ಪಾಠ ಒಂದು ಮೂಖ ಪ್ರಾಣಿಗಳಿಗೆ ಅರಿವಾಗುತ್ತೆ ಆದ್ರೆ ಮಾನವರಿಗೆ ಯಾಕೆ ಆಗೊಲ್ಲ. ಮಾನವನಿಗೂ ಒಂದು ಬೋನಿನಲ್ಲಿ ಬಂಧಿಸಿದರೆ ಆಗಲಾದರೂ ಅವನು ಬದಲಾಗುತ್ತಾನೆಯೇ ಎಂಬದು ಈ ಚಿತ್ರದದಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಮನು ಆಂಟೋಣಿ. ಅಂತಹ ಒಂದು ಅದ್ಭುತ ಕಿರು ಚಿತ್ರದ ವಿಡಿಯೋ ಇಲ್ಲಿದೆ ನೋಡಿ..

  • ಪ್ರಮೋದ್ ಲಕ್ಕವಳ್ಳಿ

POPULAR  STORIES :

ಗಾಳಿಯಲ್ಲಿ ಕುಡಿಯುವ ನೀರು ಕಂಡು ಹಿಡಿದ ಮೊದಲ ಭಾರತೀಯ ಯುವಕ…!

ಪ್ರಾಣದ ಹಂಗು ತೊರೆದು ಪಾಕ್ ಧ್ವಜ ಕಿತ್ತೆಸೆದು ತ್ರಿವರ್ಣ ಧ್ವಜ ಹಾರಿಸಿದ ಧೀರ ಯೋಧ.

ಆಸ್ತಿಗಾಗಿ ಐಸಿಯುನಲ್ಲಿದ್ದ ತಂದೆಯ ಆಕ್ಸಿಜನ್ ಪೈಪ್ ಕಿತ್ತು ಹಾಕಿದ ಪುತ್ರಿ..!

ರೈಲು ನಿಲ್ದಾಣದಲ್ಲಿ ಸೆಲ್ಫಿ ತೆಗೆದರೆ ಐದು ವರ್ಷ ಜೈಲು..!

ಕಿಂಗ್ ಖಾನ್‍ಗೆ ಅಮೇರಿಕಾ ವಿಮಾನ ನಿಲ್ದಾಣದಲ್ಲಿ ಮತ್ತೊಮ್ಮೆ ಪಪ್ಪಿ ಶೇಮ್…!

ಸೈಕಲ್ ಕದಿಯಲು ಇಡೀ ಮರವನ್ನೇ ಕತ್ತರಿಸಿದ ಕತರ್ನಾಕ್ ಕಳ್ಳ…!

1 COMMENT

LEAVE A REPLY

Please enter your comment!
Please enter your name here