ನೀವು ನಿಮ್ಮ ಮನಸ್ಸಿನ ಭಾವನೆಗಳನ್ನು ಹೇಳಿಕೊಳ್ಳೋದ್ರಲ್ಲಿ ಟೈಮ್ ವೇಸ್ಟ್ ಮಾಡ್ತಿದ್ದೀರ? ನಿಮ್ಮ ಭಾವನೆ ಹೇಳಿಕೊಳ್ಳುವುದು ಬೇಕಾ..? ಬೇಡ? ಅಂತ ಯೋಚ್ನೆ ಮಾಡ್ತಿದ್ದೀರ? ಹಾಗಾದ್ರೆ ಈ ಕಿರುಚಿತ್ರವನ್ನು ನೋಡಿ, ನೀವು ಖಂಡಿತಾ ಬದಲಾಗ್ತೀರಿ….ನಿಮ್ಮ ಮನಸ್ಸಿನ ಭಾವನೆಗಳನ್ನು ಕೂಡಲೇ ಹೇಳಿಕೊಳ್ಳುತ್ತೀರಿ…!
ನಮ್ ಟಾ-ಕೀಸ್ , ದೊಡ್ಮನೆ ಕಂಬೈನ್ಸ್ ನವರ ನಿರ್ಮಾಣದ ‘ ಮರೆಯದೆ ಕ್ಷಮಿಸು-ಮರೆಯಾದರೆ’ ಕಿರುಚಿತ್ರವಿದು.
ದರ್ಶನ್ ನಿರ್ದೇಶಿಸಿದ್ದಾರೆ. ಸುಪ್ರೀತ್ ದೊಡ್ಮನೆ, ಪ್ರಜ್ಞಾಭಟ್, ಅಂಕಿತ ರಾಜ್ ಅಭಿನಯಿಸಿದ್ದಾರೆ.
‘ಮನಸ್ಸಿನ ಭಾವನೆಗಳನ್ನ ಹೇಳ್ಕೊಳೋದ್ರಲ್ಲಿ ಟೈಮ್ ವೇಸ್ಟ್ ಮಾಡ್ಕೋಬೇಡಿ, ಮುಂದೊಂದು ದಿನ ನಾವು ಟೈಮ್ ಕೊಟ್ರು, ಆ ದೇವ್ರು ನಮಗೆ ಟೈಮ್ ಕೊಡಲ್ಲ, ಬಯಸಿ ಬಂದದ್ದನ್ನ ತಿರಸ್ಕರಿಸ್ತೀವಿ, ಕಳೆದುಕೊಂಡ ಮೇಲೆ ಪರಿತಪಿಸ್ತೀವಿ ಎಂಬ ಸಂದೇಶ ನೀಡುವ ಈ ಕಿರುಚಿತ್ರವನ್ನು ಪ್ರತಿಯೊಬ್ಬರೂ ನೋಡಲೇ ಬೇಕು. ನೋಡಿ…ಇಷ್ಟವಾಗುತ್ತೆ.