ಜಗತ್ತಿನಲ್ಲಿ ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗಳನ್ನೇ ಅಮಾನವೀಯವಾಗಿ ಕೊಲೆ ಮಾಡುವ ತಾಯಂದಿರು ಇದ್ದಾರೆಯೇ? ಅಂತವರು ಇದ್ದಾರೆ ಎಂದು ಹೇಳುತ್ತದೆ ಈ ಸ್ಟೋರಿ.
ಹೌದು ನಾಗಪುರದ ವಾಡಿ ಎಂಬ ಗ್ರಾಮದಲ್ಲಿ ಇಂತಹದೊಂದು ಮರ್ಯಾದೆ ಗೇಡಿ ಘಟನೆ ನಡೆದಿದ್ದು ತನ್ನ ಸ್ವಂತ ಮಗಳನ್ನೆ ಆಕೆಯ ದುಪ್ಪಟ್ಟದಿಂದ ಕತ್ತು ಹಿಸುಕಿ ಬರ್ಬರವಾಗಿ ಹತ್ಯೆ ಮಾಡಿದ್ದಾಳೆ ಆ ಮಹಾ ತಾಯಿ.
ಶಾಲೆ ಬಿಟ್ಟು ಮನೆಯಲ್ಲೇ ಇದ್ದ ಯುವತಿಗೆ ಅದೇ ಗ್ರಾಮದ ಯುವಕನೊಂದಿಗೆ ಪ್ರೇಮ ಸಂಭಂದವಿತ್ತು ಎನ್ನಲಾಗಿದೆ. ಇವನಿಂದ ಯುವತಿ ಮೂರು ತಿಂಗಳ ಗರ್ಭಿಣಿಯೂ ಆಗಿದ್ದಳು. ಈ ವಿಷಯ ತಿಳಿದ ತಾಯಿ ಮುಕ್ತಾಬಾಯಿ ಗಾಬರಿಗೊಂಡು ಕೂಡಲೇ ಗರ್ಭಪಾತ ಮಾಡಿಸುವಂತೆ ಮಗಳಿಗೆ ಒತ್ತಾಯಿಸಿದ್ದಾಳೆ. ಆದರೆ ತಾಯಿಯ ಮಾತಿಗೆ ನಿರಾಕರಿಸಿದಾಗ, ಎಲ್ಲಿ ಮಗಳಿಂದ ಕುಟುಂಬ ಗೌರವ ಬೀದಿ ಪಾಲಾಗುತ್ತದೆಯೋ ಎಂದು ಹೆದರಿ ತಾಯಿ ಮತ್ತು ಕುಟುಂಬಸ್ಥರ ನೆರವಿನಿಂದ ಮಗಳನ್ನು ಆಕೆಯ ದುಪ್ಪಟ್ಟದಿಂದಲೇ ಕತ್ತು ಹಿಸುಕಿ ಹತ್ಯೆ ಮಾಡಿದ್ದಾರೆ.
ಈ ವಿಷಯ ಊರಿನ ಕೆಲವು ವ್ಯಕ್ತಿಗಳಿಗೆ ತಿಳಿದುಬಂದಿದ್ದು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೀಪಿಗಳು ಈಗ ಪೊಲೀಸರ ವಶದಲ್ಲಿದ್ದಾರೆ.
POPULAR STORIES :
ಅವನನ್ನು ಅವಮಾನಿಸಿದ ಅವಳೆಲ್ಲಿದ್ದಾಳೆ..! ಅವಳು, ಅವನು ಮತ್ತು ಆ ಉಪನ್ಯಾಸಕ..!
ಅವನು ಅವರ ತಂದೆಗೆ ರಕ್ತ ಕೊಡಲಿಲ್ಲ..ಆಮೇಲೇನಾಯ್ತು? ರಕ್ತದಾನ ಮಹಾದಾನ
ಅವನು ಖಂಡೀಲ್ ಬಲೋಚ್‍ನ ಕೊಲ್ಲಲು ಈ ವಿಡಿಯೋ ಕಾರಣವಂತೆ..!! ಈ ವಿಡಿಯೋದಲ್ಲಿ ಅಂತದ್ದೇನಿದೆ..?
ಸಿಲಿಕಾನ್ ಸಿಟಿ ಯಲ್ಲಿದೆ ಬಾಲ್ಯವಿವಾಹ ಪದ್ದತಿ… ಅಚ್ಚರಿಯಾದ್ರೂ ಇದೇ ಸತ್ಯ…
ಸಾಹಸ ಸಿಂಹನ 201 ನೇ ಚಿತ್ರ- ಆಗಸ್ಟ್ 15 ಕ್ಕೆ ಆಡಿಯೋ ರಿಲೀಸ್