ಬಿಗ್‍ಬಾಸ್ ಮನೆಗೆ ಈಗ ಮತ್ತೆ ಮೂವರು ಗೃಹ ಪ್ರವೇಶ ಮಾಡಿದ್ದಾರೆ. ಈ ಮೂವರಲ್ಲಿ ಓರ್ವ ವ್ಯಕ್ತಿ ಮನೆಗೆ ಬಂದು ಇನ್ನು ಒಂದು ದಿನ ಕಳೆದಿಲ್ಲ ಅದಾಗ್ಲೆ ಬಿಗ್ ಬಾಸ್ ಸ್ಪಾರ್ಧಾಳುಗಳ ಎದೆ ಬಡಿತ ಹೆಚ್ಚಿಸಿದ್ದಾನೆ..! ಭಾಯ್ ಭಾಯ್ ಅಂತ ತನಗೆ ಕನ್ನಾಡಾನೆ ಬರಲ್ವೇನ್ನೋ ರೀತಿಯಲ್ಲಿ ಸಖತ್ ಡ್ರಾಮಾ ಮಾಡ್ತಾ ಇರೋ ಬಿಗ್‍ಬಾಸ್‍ನ ಹೊಸ ಅಥಿತಿ ಮಸ್ತಾನ್ ಭಾಯ್..! ಈತ ಯಾರು..? ಈ ಹಿಂದೆ ಈತ ಎಲ್ಲಿದ್ದ ಎಂಬ ಪ್ರಶ್ನೆಗೆ ನಮ್ಮಲ್ಲಿದೆ ನೋಡಿ ಉತ್ತರ.
ಮಸ್ತಾನ್ ಭಾಯ್ ಬೆಂಗಳೂರಿನ ಸಂಜಯ್ ನಗರದ ನಿವಾಸಿಯಂತೆ..! ಶಿವಾಜಿನಗರದಲ್ಲಿ ಸೆಕೆಂಡ್ ಹ್ಯಾಂಡ್ ಕಾರ್ ಡೀಲರ್ ಅಂತ ಬಿಗ್‍ಬಾಸ್ ಸ್ಪರ್ಧಾಳುಗಳ ಬಳಿ ಹೇಳಿಕೊಂಡಿರೋದಂತೂ ಅಪ್ಪಟ ಸುಳ್ಳು..! ಇನ್ನು ತನಗೆ ಕನ್ನಡ ಬಾಷೇನೆ ಸರಿಯಾಗಿ ಗೊತ್ತಿಲ್ಲದ ಹಾಗೆ ಡ್ರಾಮಾ ಮಾಡ್ತಾ ಇರೋ ಈತನಿಗೆ ಕನ್ನಡಾನೆ ಬರಲ್ವೆನೋ ಅಂತ ಅನ್ಕೊಂಡ್ರೆ ಖಂಡಿತ ಸುಳ್ಳು..! ಮಸ್ತಾನ್ ಭಾಯ್‍ಗೆ ಕನ್ನಡ ಚೆನ್ನಾಗಿಯೇ ಗೊತ್ತಂತೆ..! ಆದ್ರೆ ಬಿಗ್‍ಬಾಸ್ ಮನೇಲಿ ಮಾತ್ರ ಆತ ಡ್ರಾಮಾ ಮಾಡ್ತಾ ಇದಾನೆ ಅಷ್ಟೆ..! ಅರೆ ಡ್ರಾಮಾ ಯಾಕೆ ಅಂತ ಕೇಳ್ತೀರಾ..? ಅದು ಬಿಗ್‍ಬಾಸ್ ಕಟ್ಟಪ್ಪಣೆ..! ಇನ್ನು ಬಿಗ್‍ಬಾಸ್ ಕಂಟಸ್ಟೆಂಟ್ ಕಿರಿಕ್ ಕೀರ್ತಿ ಅವರು ಸಿನಮಾ ವಿಷಯ ಕುರಿತು ಒಂದೆರಡು ಬಾರಿ ಭೇಟಿಯಾಗಿದ್ದಾರೆ ಬಿಟ್ರೆ, ಅವರನ್ನೊರತುಪಡಿಸಿದಂತೆ ಇನ್ಯಾರಿಗೂ ಈತನ ಪರಿಚಯವಿಲ್ಲ..! ಆದ್ದರಿಂದಲೇ ಕಿರಿಕ್ ಕೀರ್ತಿಯವರಿಗೆ ಇವರ ಬಗ್ಗೆ ಯಾರಿಗೂ ಹೇಳಬೇಡಿ ಎಂದು ಸೀಕ್ರೆಟ್ ಟಾಸ್ಕ್ ಕೊಟ್ಟಿದ್ದಾರಂತೆ.! ಸಿನಿಮಾ ರಂಗದ ಪ್ರಖ್ಯಾತ ನಿರ್ದೇಶಕರು ಆದ ರಾಜೇಂದ್ರ ಸಿಂಗ್ ಬಾಬು ಅವರ ಆಪ್ತರೂ ಅಂತೆ..! ಈಗಾಗ್ಲೆ ಕನ್ನಡದ ಬಹು ನಿರೀಕ್ಷಿತ ಸಿನಿಮಾ ದೇವಯಾನಿ ಸಿನಿಮಾದ ಪೊಸ್ಟರ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ, ಈ ಸಿನಿಮಾ ಪ್ರೊಡ್ಯೂಸರ್ ಕೂಡ ಅಂತಿದೆ ಗಾಂಧಿನಗರ..! ಇನ್ನೂ ಇದೆ ಕೇಳಿ.. ಇವರು ಸ್ಯಾಂಡಲ್‍ವುಡ್‍ಗಳಲ್ಲಿ ಮಾತ್ರ ಅಲ್ಲ ಮಾಡಲಿಂಗ್, ಪ್ಯಾಷನ್ ಷೋ ನಡೆಸಿಕೊಡ್ತಾರಂತೆ..! ನೋಡೋಕೆ ಸ್ಮಾರ್ಟಿ ಬಾಯ್ ಆದ್ರೂ ಸಖತ್ ಶಾರ್ಟ್ ಟೆಂಪರ್ ಅಂತೆ. ಸಣ್ಣ ಸಣ್ಣ ವಿಷಯಕ್ಕೂ ಜಗಳ ಮಾಡೋ ಸ್ವಭಾವ ಅವನದ್ದು.. ಈ ಎಲ್ಲಾ ಲಕ್ಷಣಗಳನ್ನು ಅರಿತ ಕಲರ್ಸ್ ವಾಹಿನಿ ಈತನಿಗೆ ಬಿಗ್‍ಬಾಸ್ ಮನೆಗೆ ಎಂಟ್ರಿ ನೀಡಿದೆ. ಮೊದಲ ದಿನವೇ ಹವಾ ಎಬ್ಬಿಸಿದ ಈತ ಮುಂದೆ ದೊಡ್ಮನೆಯಲ್ಲಿ ಇನ್ನೆನೆಲ್ಲಾ ಕಾದಿದೆಯೋ.. ಮುಂದೆ ಗೊತ್ತಾಗುತ್ತೆ..!
Like us on Facebook The New India Times
POPULAR STORIES :
ವೆಬ್ ಹುಡುಕಾಟದಲ್ಲಿ ಜನರು ಯಾರ ಹೆಸರನ್ನು ಅತೀ ಹೆಚ್ಚಾಗಿ ಬಳಸಿದ್ದಾರೆ ಗೊತ್ತಾ..?