ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾದಲ್ಲಿ ಡಿಫ್ರೆಂಟ್ ರೋಲ್ನಲ್ಲಿ ಮಾಸ್ಟರ್ ಓಂ!!!!

Date:

ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾದಲ್ಲಿ ಮಾಸ್ಟರ್ ಓಂ
ಕರ್ನಾಟಕದ ಕಿಡ್ಸ್ ಫ್ಯಾಷನ್ ಜಗತ್ತಿನಲ್ಲಿ ಮೊದಲ ಸ್ಥಾನದಲ್ಲಿರುವ ಸೌತ್ ಇಂಡಿಯಾ ಸೂಪರ್ ಕಿಡ್ ಮಾಡೆಲ್ ಹಾಗೂ ಬಾಲ ನಟ ಮಾಸ್ಟರ್ ಓಂ ಇದೀಗ ಕಾಳಿದಾಸ ಕನ್ನಡ ಮೇಸ್ಟ್ರು ಸಿನಿಮಾದಲ್ಲಿ ಕಂಪ್ಲೀಟ್ ಡಿಫರೆಂಟ್ ರೋಲ್ನಲ್ಲಿಕಾಣಿಸಿಕೊಂಡಿದ್ದಾನೆ.

ಸುಮಾರು 35 ಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ಕಾಣಿಸಿಕೊಂಡು ಕರ್ನಾಟಕದ ಸ್ಮಾರ್ಟ್ ಆ್ಯಂಡ್ ಹ್ಯಾಂಡ್ಸಮ್ ಕಿಡ್ ಎಂದೇ ಖ್ಯಾತಿಗಳಿಸಿರುವ ಮಾಸ್ಟರ್ ಓಂ ಇದೀಗ ದಪ್ಪ ಕನ್ನಡಕ, ಮಧ್ಯೆ ಕ್ರಾಪ್ ತೆಗೆದ ಹೇರ್ಸ್ಟೈಲ್ನಲ್ಲಿ ಡಿಸೆಂಟ್ ಮುಗ್ಧ ಶಾಲಾ ಬಾಲಕನಾಗಿ ನವರಸ ನಾಯಕ ಜಗ್ಗೇಶ್ ಅವರ ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ. ಕರ್ನಾಟಕದ ಲೀಡಿಂಗ್ ಫ್ಯಾಷನ್ ಕಿಡ್ ಮಾಸ್ಟರ್ ಓಂ ಚಿಕ್ಕ ಸಂದರ್ಶನದ ಸಾರಂಶ ಇಲ್ಲಿದೆ.


* ಕಾಳಿದಾಸ ಕನ್ನಡ ಮೇಸ್ಟ್ರು ಸಿನಿಮಾದಲ್ಲಿಜಗ್ಗೇಶ್ ಅವರ ಜೊತೆ ನಟಿಸುವಾಗಿನ ಅನುಭವವೇನು?
ಜಗ್ಗೇಶ್ ಸರ್, ನನಗೆ ಸಾಕಷ್ಟು ಗೈಡ್ಲೈನ್ಸ್ ನೀಡಿದರು. ಎಲ್ಲದಕ್ಕಿಂತ ಹೆಚ್ಚಾಗಿ ಎಜುಕೇಷನ್ ಮುಖ್ಯ ಅದರೊಂದಿಗೆ ನೀನು ಎಲ್ಲವನ್ನೂ ಹಾಬ್ಬಿಯಾಗಿ ಬೆಳೆಸಿಕೊಂಡು ಕಲಾವಿದನಾಗಿ ಮುನ್ನೆಡೆ ಎಂದು ಸಲಹೆ ನೀಡಿದರು.


* ಕಾಳಿದಾಸ ಕನ್ನಡ ಮೇಸ್ಟ್ರು ಸಿನಿಮಾ ಸಮಯದಲ್ಲಿ ಕಲಿತದ್ದೇನು?
ನನಗೆ ಸ್ವಿಮ್ಮಿಂಗ್ ಬರುತ್ತಿರಲಿಲ್ಲ. ಈ ಸಿನಿಮಾಗಾಗಿ ಸ್ವಿಮ್ಮಿಂಗ್ ಕಲಿತೆ.


* ಮಾಡೆಲಿಂಗ್ ಕ್ಷೇತ್ರದ ಮೂಲಕ ಸಿನಿಮಾಕ್ಕೆ ಎಂಟ್ರಿ ನೀಡಿದ ನಿನಗೆ ಅನಿಸಿದ್ದೇನು ?
ಮಾಡೆಲಿಂಗ್ನಲ್ಲಿ ಒಂದು ಮಾತನಾಡದೇ ರಾoಪ್ ವಾಕ್ ಮಾಡುವುದು ಈಸಿ ಟಾಸ್ಕ್. ಆದರೆ, ಸಿನಿಮಾದಲ್ಲಿ ಆ್ಯಕ್ಟ್ ಮಾಡುವುದು ಸುಲಭವಲ್ಲ. ಹಾಗಾಗಿ ಒಂದೊಂದು ಆಡಿಷನ್ ಮಾಡುವಾಗಲೂ, ಪ್ರತಿ ಸಿನಿಮಾದಲ್ಲೂನಟಿಸುವಾಗಲೂ ಹೊಸತನ್ನು ಕಲಿಯಲಾರಂಭಿಸಿದ್ದೇನೆ.


* ಓದಿನೊಂದಿಗೆ ಫ್ಯಾಷನ್, ಸಿನಿಮಾ ಮ್ಯಾನೇಜ್ ಮಾಡಲು ಕಷ್ಟವಾಗುವುದಿಲ್ಲವೇ!
ಇಲ್ಲ! ಯಾವತ್ತೂ ನಮ್ಮಮ್ಮ ನಮ್ಮಪ್ಪ ಓದು ಎಂದು ಒತ್ತಾಯ ಹಾಕಿಲ್ಲ! ಆದಷ್ಟೂ ವೀಕೆಂಡ್ನಲ್ಲಿಫ್ಯಾಷನ್ ಶೋಗಳಲ್ಲಿಶೋಸ್ಟಾಪರ್ ಆಗಿ ವಾಕ್ ಮಾಡುತ್ತೇನೆ. ಸಿನಿಮಾ ಶೂಟಿಂಗ್ ಇದ್ದಾಗ ನನ್ನ ಟೀಚರ್ಸ್ ಹಾಗೂ ಸ್ನೇಹಿತರು ನೋಟ್ಸ್ ಕೊಟ್ಟು ಸಹಾಯ ಮಾಡುತ್ತಾರೆ. ರಜೆಯ ಸಮಯದಲ್ಲಿಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳುತ್ತೇನೆ. ಎಲ್ಲವನ್ನೂ ಅಮ್ಮ ಮ್ಯಾನೇಜ್ ಮಾಡುತ್ತಾರೆ. ನನ್ನ ಎಲ್ಲಾಕೆಲಸಗಳಿಗೂ ನನ್ನಮ್ಮ ನನ್ನಪ್ಪ ಪ್ರೋತ್ಸಾಹಿಸುತ್ತಾರೆ.


* ರಜೆ ಸಿಕ್ಕಾಗ ಮಾಡುವುದೇನು?
ಈಗಾಗಲೇ ಅಪ್ಪ-ಅಮ್ಮನೊಂದಿಗೆ ಸುಮಾರು 15 ದೇಶಗಳನ್ನು ಸುತ್ತಿದ್ದೇನೆ. ಅತಿ ಚಿಕ್ಕ ವಯಸ್ಸಿನ ಟ್ರಾವೆಲ್ ಬ್ಲಾಗರ್ ಎಂಬ ಟೈಟಲ್ ಕೂಡ ಸಿಕ್ಕಿದೆ. ಡಾನ್ಸ್, ಕರಾಟೆ ಹಾಗೂ ಹಾರ್ಸ್ ರೈಡಿಂಗ್ ಮಾಡುತ್ತೇನೆ. ಚೆಸ್ ಆಡುವುದು ಇಷ್ಟ. ಚಿಕ್ಕಮಗಳೂರಿನ ಅಜ್ಜ-ಅಜ್ಜಿ ಮನೆಗೆ ಹೋಗುವುದು ನನಗಿಷ್ಟ.

Share post:

Subscribe

spot_imgspot_img

Popular

More like this
Related

ಹೃದಯ ಸಮಸ್ಯೆ ಇದ್ದವರಿಗೆ ದಾಳಿಂಬೆ ಬೆಸ್ಟ್ ಅಂತೆ; ನೀವು ಕೂಡ ತಪ್ಪದೇ ಸೇವಿಸಿ

ಹೃದಯ ಸಮಸ್ಯೆ ಇದ್ದವರಿಗೆ ದಾಳಿಂಬೆ ಬೆಸ್ಟ್ ಅಂತೆ; ನೀವು ಕೂಡ ತಪ್ಪದೇ...

ಮಹಿಳೆಯರಿಗೆ ಗುಡ್‌ ನ್ಯೂಸ್: ವೇತನ ಸಹಿತ ಮುಟ್ಟಿನ ರಜೆಗೆ ಅನುಮೋದನೆ‌

ಮಹಿಳೆಯರಿಗೆ ಗುಡ್‌ ನ್ಯೂಸ್: ವೇತನ ಸಹಿತ ಮುಟ್ಟಿನ ರಜೆಗೆ ಅನುಮೋದನೆ‌ ಬೆಂಗಳೂರು: ಗ್ಯಾರಂಟಿ...

ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ಓಪನ್

ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ಓಪನ್ ಹಾಸನ: ಐತಿಹಾಸಿಕ ಪ್ರಸಿದ್ಧ ಹಾಸನಾಂಬೆ ದೇವಸ್ಥಾನದ...

ಬಂಗಾರದ ಬೆಲೆ ಏರಿಕೆ! ಬೆಳ್ಳಿಯೂ ದುಬಾರಿ, ಹೀಗಿದೆ ಇಂದಿನ ರೇಟ್!

ಬಂಗಾರದ ಬೆಲೆ ಏರಿಕೆ! ಬೆಳ್ಳಿಯೂ ದುಬಾರಿ, ಹೀಗಿದೆ ಇಂದಿನ ರೇಟ್! ಚಿನ್ನ ಖರೀದಿಗೆ...