No menu items!
7.8 C
Munich
Thursday, April 30, 2026

ಗಡ್ಡ ಬಿಟ್ಟಿದ್ದೆಲ್ಲಾ KGF ಆಗಲ್ಲ ಅಂತ ಜೋಗಿ ಪ್ರೇಮ್ ಗರಂ ಆಗಿದ್ದಕ್ಕೆ ಇದೇ ಅಸಲಿ ಕಾರಣ..!

Must read

ಡೈರೆಕ್ಟರ್ ಜೋಗಿ ಪ್ರೇಮ್ ಸಿಕ್ಕಾಪಟ್ಟೆ ಸಿಟ್ಟಾಗಿದ್ದಾರೆ.. ಅಲ್ಲಾ ರೀ.. ಗಡ್ಡ ಬಿಟ್ಟಿದ್ದೆಲ್ಲಾ KGF ಮೂವಿ ಆಗುತ್ತೇನ್ರಿ ಅಂತ ಫುಲ್ ಸಿಟ್ಟಾಗಿದ್ದಾರೆ ‘ದಿ ವಿಲನ್’..! 

ಅರೆ, ಪ್ರೇಮ್​​ ಏಕ್ ಲವ್ ಯಾ ಸಿನಿಮಾ ಕೆಲಸದಲ್ಲಿ ಬ್ಯುಸಿ ಇರೋ ಪ್ರೇಮ್ ಇದ್ದಕ್ಕಿದ್ದಂತೆ ಹಿಂಗೇಕೆ ಸಿಡಿಮಿಡಿಗೊಂಡಿದ್ದಾರೆ ಎಂಬ ಸಹಜ ಪ್ರಶ್ನೆ ನಿಮ್ಮನ್ನು ಕೂಡ ಕಾಡಬಹುದು. ಆ ಸಿಟ್ಟಿಗೆ ಕಾರಣ ಅದೇ ಏಕ್ ಲವ್ ಯಾ ಸಿನಿಮಾ ಟೀಸರ್ ನೋಡಿದ ಕೆಲವರು ಮಾಡಿರೋ ಕಾಮೆಂಟ್​ಗಳು!
ಏಕ್ ಲವ್ ಯಾ ಸಿನಿಮಾ ಟೀಸರ್ ರಿಲೀಸ್ ಆದ ಬಳಿಕ ರಾಣಾ ಲುಕ್, ಗೆಟಪ್ ಕಂಡು ಜನ ಅರ್ಜುನ್ ರೆಡ್ಡಿ ಸ್ಟೈಲ್​​ನಲ್ಲಿ ಗಡ್ಡ ಬಿಟ್ಟಿದ್ದಾರೆ.. ಅದು ಇದು ಅಂತ ಒಂದಿಷ್ಟು ಚರ್ಚೆಗಳು ನಡೀತಾ ಇವೆ. ಈ ಮಾತುಗಳನ್ನು ಕೇಳಿದ ಪ್ರೇಮ್ ಕೋಪಗೊಂಡಿದ್ದಾರೆ. ನಾನು ಗಡ್ಡ ಬಿಟ್ಟಿದ್ದಕ್ಕೆ ನೀವು ಹಂಗೆ ಅಂದು ಬಿಡ್ತೀರಾ? ಇಡೀ ಪ್ರಪಂಚದಲ್ಲಿ ಎಲ್ಲರೂ ಗಡ್ಡ ಬಿಡ್ತಾರೆ. ಈ ಸಿನಿಮಾದಲ್ಲಿ ತಾಯಿ ಎಮೋಷನ್ ಇದೆ. ಎಮೋಷನ್ ಅಂದ ಕೂಡಲೇ ಅರ್ಜುನ್ ರೆಡ್ಡಿ ಅನ್ನೋಕಾಗುತ್ತಾ? ಮತ್ತ್ಯಾರೂ ಕೂಡ ಎಮೋಷನ್ ಸಿನಿಮಾಗಳನ್ನು ಮಾಡಿಲ್ವೇನ್ರೀ? ಅರ್ಜುನ್ ರೆಡ್ಡಿ ಬಂದ್ಮೇಲೆ ಕೆಜಿಎಫ್ ಬಂತು. ಹಾಗೆಂದ ಮಾತ್ರಕ್ಕೆ ಅದನ್ನು ಆ ಸಿನಿಮಾ ಜೊತೆ ಕನೆಕ್ಟ್ ಮಾಡೋಕೆ ಆಗುತ್ತಾ? ಅವೆಲ್ಲಾ ನಾನ್ಸೆನ್ಸ್ ಟಾಕ್.
ಇವೆಲ್ಲಾ ಸ್ಟೈಲಿಗೋಸ್ಕರ. ರಾಣಾನ ನಾನು ಏಕ್ ಲವ್ ಯಾದಲ್ಲಿ ಮೂರು ಗೆಟಪ್​ನಲ್ಲಿ ತೋರಿಸಿದ್ದೇನೆ. ಟೀಸರ್​​ನಲ್ಲಿ ಒಂದ್ ಸ್ಟೈಲ್ ಮಾತ್ರ ನೋಡಿದ್ದೀರಾ. ಇನ್ನೂ ಎರಡು ಸ್ಟೈಲ್ ರಿವೀಲ್ ಮಾಡಿಲ್ಲ. ಅದನ್ನು ನೋಡಿದ್ಮೇಲೆ ಏನ್ ಹೇಳ್ತೀರಾ ನೋಡ್ತೀನಿ ಅಂತ ತರಾಟೆಗೆ ತೆಗೆದುಕೊಂಡಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article