ಇವರು ಎಂಬಿಬಿಎಸ್ ಸ್ಟೂಡೆಂಟ್, ಆಟೋ ಡ್ರೈವರ್..! ಇವರು ಉಚಿತ ಆಟೋ ಸೇವೆ ಕೊಡ್ತಾರೆ ಯಾಕೆ ಗೊತ್ತಾ..?

Date:

ಇವರಂಥಾ ಸಮಾಜ ಸೇವಕರನ್ನು ನೀವು ನೋಡಿರೋಕೆ ಸಾಧ್ಯವೇ ಇಲ್ಲ..! ಇವರದ್ದು ನಿಜಕ್ಕೂ ಸ್ಪೂರ್ತಿದಾಯಕ ವ್ಯಕ್ತಿತ್ವ..! ಈ ಸ್ಟೋರಿ ಓದಿದ ಮೇಲೆ ನೀವೂ ಇವರನ್ನು ರಿಯಲ್ ಹೀರೋ ಅಂತ ಕರೆದೇ ಕರೆಯುತ್ತೀರ..! ಇವತ್ತು ಉನ್ನತ ಶಿಕ್ಷಣವನ್ನು ಶೋಕಿ ಮಾಡ್ಕೊಂಡು, ಅಪ್ಪ-ಅಮ್ಮನ ದುಡ್ಡಲ್ಲಿ ಮಜಾ ಮಾಡೋ ಕೆಲವು ಹುಡುಗರ ನಡುವೆ ಇವರು ತುಂಬಾ ಇಂಟ್ರೆಸ್ಟಿಂಗ್ ಕ್ಯಾರೆಕ್ಟರ್ ಆಗಿರೋದ್ರಲ್ಲಿ ನೋ ಡೌಟ್..!
ಮೆಡಿಕಲ್ ಕಾಲೇಜಿನಲ್ಲಿ ಅಡ್ಮಿಟ್ ಆಗಿದ್ದ ಸ್ನೇಹಿತನ ಅಮ್ಮನನ್ನು ನೋಡಲು `ವಿನೀತ್’ ಹೊರಡುತ್ತಾರೆ..! ಬೆನ್ನು ನೋವಿದ್ದ ಕಾರಣ ತನ್ನ ಗಾಡಿಯನ್ನು ತೆಗೆದುಕೊಂಡು ಹೋಗಲಾಗದೇ ಆಟೋದಲ್ಲಿ ಹೋಗೋಣ ಅಂತ ಡಿಸೈಡ್ ಮಾಡ್ತಾರೆ..! ಆಟೋಕ್ಕಾಗಿ ಕೈ ಬೀಸಿ ಕರೆಯುತ್ತಾ ಆಟೋವೊಂದರ ಬಳಿ ಹೋಗ್ತಾರೆ..! ಆ ಡ್ರೈವರ್ ಇನ್ನೂ ಯುವಕ. ಯುವ ಡ್ರೈವರ್ ಹತ್ತಿರ ವಿನೀತ್ ಸ್ವಲ್ಪ ಮೆಡಿಕಲ್ ಕಾಲೇಜ್ ಹತ್ತಿರ ಬರ್ತೀರಾ..ಅಂತ ಕೇಳ್ತಾರೆ. ನನಗೆ ಬೆನ್ನು ನೋವಿದೆ ಸ್ವಲ್ಪ ನಿಧಾನವಾಗಿ ಹೋಗಿ ಅಂತ ಹೇಳ್ತಾರೆ.. ಅದಕ್ಕೆ ಆ ಹುಡುಗ ಬೇರೆಯವರಂತೆ ಸಿಡುಕುತ್ತಾನೆ ಎಂದು ವಿನೀತ್ ಭಾವಿಸಿದ್ದರು. ಆದ್ರೆ ಆ ಯುವಕ ಸರಿ, ಹೋಗೋಣ ಬನ್ನಿ ಎಂದು ಬಹಳಾ ವಿನಮ್ರವಾಗಿ ಹೇಳ್ತಾನೆ..!
ವಿನೀತ್ ತಲುಪಬೇಕಾದ ಸ್ಥಳವನ್ನು ತಲುಪಿದ ಬಳಿಕ “ಎಷ್ಟಾಯ್ತು”..? ಅಂತ ಕೇಳುತ್ತಾ ಜೇಬಿನಿಂದ ದುಡ್ಡು ತೆಗೆದು ಕೊಡಲು ಮುಂದಾಗ್ತಾರೆ..! ಆಗ ಆ ಆಟೋ ಡ್ರೈವರ್ ತನ್ನ ಸೀಟಿನ ಪಕ್ಕದ ಬಾಕ್ಸ್ ಕಡೆ ತೋರಿಸಿ “ನಿಮಗೆ ಎಷ್ಟು ತೃಪ್ತಿ ಆಗುತ್ತೋ, ನಿಮ್ಮಿಂದ ಎಷ್ಟು ಹಣ ಕೊಡೋಕೆ ಆಗುತ್ತೋ ಅಷ್ಟನ್ನು ಈ ಬಾಕ್ಸ್ ನಲ್ಲಿ ಹಾಕಿ” ಅಂತ ತುಂಬಾನೇ ವಿನಯದಿಂದ ಹೇಳ್ತಾನೆ..! ಆಟೋ ಚಾರ್ಜ್ ಕೇಳೋ ಬದಲು..! ಆ ಬಾಕ್ಸ್ ಗೆ ಇಷ್ಟವಿದ್ದರೆ, ಎಷ್ಟಾಗುತ್ತೋ ಅಷ್ಟು ಹಣವನ್ನು ಹಾಕಿ ಅಂತಿದ್ದನ್ನಲ್ಲಾ..?! ಎಂದು ವಿನೀತ್ ಗೆ ಆಶ್ಚರ್ಯವಾಗುತ್ತೆ..! ಒಂದು ಕ್ಷಣ ವಿನೀತ್ ಗೊಂದಲಕ್ಕೀಡಾಗ್ತಾರೆ..! ನಂತರ ಆ ಬಾಕ್ಸ್ ಮೇಲಿದ್ದ ಲೇಬಲ್ ನೋಡ್ತಾರೆ..! ಅದರಲ್ಲಿ ” ಡೊನೇಟ್ ಫಾರ್ ದಿ ಪೂರ್ ಅಂಡ್ ನೀಡ್ಲಿ ಪೇಷೆಂಟ್” (ಬಡ ಮತ್ತು ಅವಶ್ಯಕತೆ ಇರೋ ರೋಗಿಗಳಿಗಾಗಿ ಕೊಡುಗೆ) ಅಂತ ಬರೆದಿತ್ತು..! ಆ ಲೇಬಲ್ ನೋಡಿಯೂ ಆಶ್ಚರ್ಯವಾಯ್ತು..!
ಅಷ್ಟರಲ್ಲಿಯೇ.., ಎಲ್ಲಾ ವಾಹನಗಳನ್ನು ಚೆಕ್ ಮಾಡಿ ಒಳಗೆ ಕಳುಹಿಸುತ್ತಿದ್ದ..ಎಲ್ಲರಿಗೂ ಹೋಗಿ ಹೋಗಿ ಅನ್ನುತ್ತಿದ್ದ ಭದ್ರತಾ ಸಿಬ್ಬಂದಿ, ಈ ಹುಡುಗ (ಡ್ರೈವರ್)ನನ್ನು ನೋಡಿ ನಗುಬೀರಿ, `ನಮಸ್ಕಾರ’ ಸಾರ್ ಅಂತ ಹೇಳುತ್ತಾನೆ..! ಆ ಭದ್ರತಾ ಸಿಬ್ಬಂದಿಗೆ ನಗೆಬೀರಿ ಆಟೋಡ್ರೈವರ್ ಹೊರಟು ಹೋಗುತ್ತಾನೆ(ರೆ)..!
ಭದ್ರತಾ ಸಿಬ್ಬಂದಿ ಆಟೋಡ್ರೈವರ್ಗೆ ಅಷ್ಟೊಂದು ಗೌರವಕೊಟ್ಟಿದ್ದನ್ನು ನೋಡಿ ವಿನೀತ್ ನೇರವಾಗಿ ಆ ಭದ್ರತಾ ಸಿಬ್ಬಂದಿಯ ಬಳಿ ಬಂದು ಆ ಆಟೋಡ್ರೈವರ್ ಬಗ್ಗೆ ಕೇಳ್ತಾರೆ..! ಆತ ಈ ಯುವ ಡ್ರೈವರ್ನ ಬಗ್ಗೆ ವಿವರವಾಗಿ ಹೇಳ್ತಾರೆ..!
“ ಇವರು ನಾಲ್ಕುಜನ ಮಕ್ಕಳು. ನಾಲ್ವರಲ್ಲಿ ಇವರು ಎರಡನೇಯವರು. ಇವರ ತಂದೆ ಬೇಗನೇ ತೀರಿಕೊಂಡರು. ಅಣ್ಣ ಪಾರ್ಶ್ವ ವಾಯುವಿನಿಂದ ಬಳಲ್ತಾ ಇದ್ದಾರೆ..! ಇನ್ನಿಬ್ಬರು ತಂಗಿಯರು.” ಮನೆಯ ಜವಬ್ದಾರಿ ಈ ಹುಡುಗನ ಮೇಲೆಯೇ ಇದೆ.”
ಈ ಹುಡುಗ ಓದಿನಲ್ಲೂ ಚುರುಕು. ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳೊಂದಿಗೆ ಪಾಸ್ ಆಗಿದ್ದಕ್ಕೆ ನಮ್ಮ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಇವರಿಗೆ ಆಟೋವೊಂದನ್ನು ಕೊಡುಗೆಯಾಗಿ ಕೊಟ್ಟರು..! ಆಟೋ ಚಾಲನೆಯಿಂದ ಸಂಪಾದಿಸಿದ ಮೊದಲ ತಿಂಗಳ ಹಣವನ್ನು ಸೂಪರಿಂಟೆಂಡೆಂಟ್ ಕೈಗೆ ಕೊಡಲು ಹೋದಾಗ ಅವರ ಆ ಹಣವನ್ನು ಬೇಡ ಅಂತ ಹೇಳಿದ್ರು..! ಅದು ನಿನಗೇ ಅಂದರು..! ಆದರೆ ಆ ಹಣವನ್ನು ತನ್ನ ಖರ್ಚಿಗೆ ಬಳಸದ ಈ ಹುಡುಗ ಬಡ ರೋಗಿಗಳಿಗಾಗಿ, ಅವಶ್ಯಕತೆ ಇರೋರಿಗಾಗಿ ಬಳಸುತ್ತಿದ್ದಾರೆ..!
ಈಗ ಅವರು 3ನೇ ವರ್ಷದ ಎಂಬಿಬಿಎಸ್ ಸ್ಟೂಡೆಂ1ಟ್..! ಬಿಡುವು ಸಿಕ್ಕಾಗ ಆಟೋ ಓಡಿಸ್ತಾರೆ..! ಪ್ರಯಾಣಿಕರಿಂದ ಹಣವನ್ನು ತೆಗೆದುಕೊಳ್ಳದೇ ಇಷ್ಟ ಬಂದಷ್ಟು ಹಣವನ್ನು ಆ ಬಾಕ್ಸಿಗೆ ಹಾಕಿ ಅನ್ನುತ್ತಾರೆ..! ಅರ್ಧದಷ್ಟು ಆದಾಯವನ್ನು ಬಡ ರೋಗಿಗಳಿಗಾಗಿ ಬಳಸುತ್ತಾರೆ..! ಎಂಬ ವಿವರವನ್ನು ಭದ್ರತಾ ಸಿಬ್ಬಂದಿ ವಿನೀತ್ ಅವರಿಗೆ ಕೊಟ್ಟಿದ್ದಾರೆ..! ಅದನ್ನು ಅವರು ತನ್ನ ಫೇಸ್ ಬುಕ್ ಗೋಡೆಯಲ್ಲಿ ಬರೆದಿದ್ದರು..! ಅದನ್ನು ಕನ್ನಡಿಗರಿಗೆ ಕನ್ನಡದಲ್ಲಿ ತಿಳಿಸೋ ಸಣ್ಣ ಪ್ರಯತ್ನವನ್ನು ಮಾಡಿದ್ದೇನೆ..!
ಎಂಬಿಬಿಎಸ್ ಓದ್ತಾ ಓದ್ತಾನೇ ಆಟೋ ಓಡಿಸೋ ಮೂಲಕ ಬಡವರಿಗಾಗಿ ದುಡಿಯುತ್ತಿರೋ ಇವರು ನಿಜಕ್ಕೂ ಆದರ್ಶಪ್ರಾಯರು..!

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...