ಶ್ರುತಿ ಹರಿಹರನ್ ಅರ್ಜುನ್ ಸರ್ಜಾ ಬಗ್ಗೆ ಲೈಂಗಿಕ ಆರೋಪ ಮಾಡಿದ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಮೀ ಟೂ ಬಿಸಿ ತಾರಕಕ್ಕೇರಿದೆ.
ಶ್ರುತಿ ಅವರ ಪರ-ವಿರೋಧ ಎರಡೂ ಅಲೆಗಳೂ ಎದ್ದಿವೆ.ನಟಿ ಸಂಯುಕ್ತಾ ಹೆಗ್ಡೆ ಕೂಡ ಈಗ ಶ್ರುತಿ ಪರ ಬ್ಯಾಟ್ ಬೀಸಿದ್ದಾರೆ.
ಅರ್ಜುನ್ ಸರ್ಜಾಗೆ ಒಳ್ಳೆಯ ಹೆಸರಿನ ಜೊತೆ ಹಣ ಇದೆ. ಆದ್ದರಿಂದ ಅವರಿಗೆ ಜನರು ಬೆಂಬಲ ಕೊಡುತ್ತಾರೆ. ಹಾಗಂದ ಮಾತ್ರಕ್ಕೆ ಕೀಳು ಮಟ್ಟದ ವರ್ತನೆ ತೋರಲು ಯಾರು ಅಧಿಕಾರ ಕೊಟ್ಟವರು ಎಂದು ಸಂಯುಕ್ತಾ ಹೆಗ್ಡೆ
ಕಿಡಿಕಾರಿದ್ದಾರೆ.
ನಟಿಯರು ತಮಗಾದ ನೋವನ್ನು ಹಂಚಿಕೊಂಡರೆ ಬೇರೆಯವರು ಟೀಕೆ ಮಾಡುತ್ತಾರೆ. ನಮಗಂತೂ ನಟರಷ್ಟು ಸಂಬಳ ಕೊಡಲ್ಲ. ದಯವಿಟ್ಟು ಕನಿಷ್ಠ ಗೌರವವನ್ನಾದರೂ ಕೊಡಿ. ನಾವೇನಾದರೂ ಮಾತನಾಡಿದರೆ ಬೇರೆ ನಟಿಯರನ್ನು ಇಂಡಸ್ಟ್ರಿಗೆ ತರುತ್ತಾರೆ. ನಿಮ್ಮ ಮನೆ ಹಣ್ಮಕ್ಕಳಿಗೆ ಹೀಗಾಗಿದ್ದರೆ ಸುಮ್ಮನಿರುತ್ತೀರಾ ಎಂದಿದ್ದಾರೆ ಸಂಯುಕ್ತಾ