ಕಾಶ್ಮೀರದಲ್ಲಿ ಇತ್ತೀಚೆಗೆ ಹತ್ಯೆಯಾದ ಪತ್ರಕರ್ತ ಶುಜಾತ್ ಬುಖಾರಿ ಪ್ರಕರಣವನ್ನು ಮುಂದಿಟ್ಟುಕೊಂಡು ಜಮ್ಮು-ಕಾಶ್ಮೀರದ ಬಿಜೆಪಿ ಮುಖಂಡ ಚೌಧರಿ ಲಾಲ್ ಸಿಂಗ್ ಪತ್ರಕರ್ತರಿಗೆ ಧಮ್ಕಿ ಹಾಕಿದ್ದಾರೆ.
ನಾನು ಕಾಶ್ಮೀರಿ ಪತ್ರಕರ್ತರಿಗೆ ಒಂದ್ ಮಾತು ಹೇಳ್ತೀನಿ. ಕೆಲಸ ಮಾಡುವುದಕ್ಕೆ ಸಂಬಂಧಿಸಿದಂತೆ ಹಾಗೂ ಹೇಗೆ ಬದುಕ ಬೇಕು ಎಂಬುದಕ್ಕೆ ಒಂದು ಲಕ್ಷ್ಮಣ ರೇಖೆ ಹಾಕಿಕೊಳ್ಳಿ. ಶುಜಾತ್ ಬುಖಾರಿ ಅವರ ಪರಿಸ್ಥಿತಿಯಲ್ಲೇ ಬದುಕಲು ಬಯಸುತ್ತೀರ? ಎಂದು ಚೌಧರಿ ಲಾಲ್ ಸಿಂಗ್ ಹೇಳಿದ್ದು, ವೈರಲ್ ಆಗಿದೆ.
ಸಿಂಗ್ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲ ಸೇರಿದಂತೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ.