ಹಿಂದೆ ಸರ್ಕಾರಿ ಬಸ್ ಎಂದರೆ ಡಕೋಟ ಎಕ್ಸ್ ಪ್ರೆಸ್ ಎಂದೇಳುತ್ತಿದ್ದ ಜನ ಈಗ ಮೂಗಿನ ಮೇಲೆ ಕೈಯಿಟ್ಟುಕೊಂಡು ನೋಡುವಂತಹ ಪರಿಸ್ಥಿತಿ ಬಂದಿದೆ. ರಾಜಹಂಸ, ವೋಲ್ವೋ, ವಜ್ರದಂತಹ ಹೈಟೆಕ್ ಬಸ್ ಸೇವೆ ಒದಗಿಸುತ್ತಿರುವ ರಾಜ್ಯ ಬಸ್ ಸಾರಿಗೆ ಸಂಸ್ಥೆ ಇದೀ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.
ಅದೇನು ಅಂತ ಕೇಳ್ತೀರ.. ಇನ್ಮುಂದೆ ಹಳ್ಳಿಗಳಿಗೂ ಹೈಟೆಕ್ ಬಸ್‍ಗಳನ್ನು ರೋಡಿಗಿಳಿಸಲು ಕೆಎಸ್‍ಆರ್‍ಟಿಸಿ ಮುಂದಾಗಿದ್ದು ಈ ಬಸ್‍ಗೆ ಮಿಡಿ ಬಸ್ ಎಂದು ನಾಮಕರಣ ಮಾಡಲಾಗಿದೆ. ಪ್ರತಿಯೊಂದು ಬಸ್‍ನ ಬೆಲೆ 27.5 ಲಕ್ಷ ರೂ. ಒಟ್ಟು 737 ಹೊಸ ಬಸ್ ಕೊಳ್ಳಲು ನರ್ಮ್ ಮತ್ತು ರಾಜ್ಯ ಭೂಸಾರಿಗೆ ಇಲಾಖೆ ಸಹಯೋಗದಲ್ಲಿ ಚಿಂತನೆ ನಡೆಸುತ್ತಿದೆ.
ಮಿಡಿ ಬಸ್‍ನಲ್ಲಿ ಏನೇನಿದೆ ಸವಲತ್ತುಗಳು.
ಹಳ್ಳಿಗಳಿಗೆಂದೆ ಕೊಂಡುಕೊಳ್ಳಲಾಗುತ್ತಿರುವ ಈ ಬಸ್‍ನಲ್ಲಿ ಮಹಿಳೆಯರ ಸುರಕ್ಷತೆಗೆ ಹಾಗೂ ತುರ್ತು ಸಂದರ್ಭಕ್ಕೆಂದೇ ಪ್ಯಾನಿಕ್ ಬಟನ್(ಅಪಾಯದ ಕರೆ) ಇದೆ. ಅದನ್ನು ಒತ್ತಿದ ಕೂಡಲೇ ಕಂಟ್ರೋಲ್ ರೂಂಗೆ ಕೂಡಲೇ ಮಾಹಿತಿ ತಲುಪುತ್ತದೆ. ಪ್ರಯಾಣಿಕರು ತಮ್ಮ ಸ್ಟಾಪ್‍ನಲ್ಲಿ ಇಳಿಯಬೇಕೆಂದರೆ ಅದಕ್ಕಾಗಿಯೇ ಒಂದು ಬಟನ್ ಅಳವಡಿಸಲಾಗಿರುತ್ತದೆ. ಬಸ್‍ನ ಒಳಗೆ ಹಾಗೂ ಹೊರಗೆ ಸಿಸಿಟಿವಿ, ಜಿಪಿಎಸ್ ಮತ್ತು ಮುಂದಿನ ನಿಲ್ದಾಣ ಯಾವುದು ಅನ್ನೋದು ಅನೌನ್ಸ್ ಆಗುತ್ತೆ. ಅಲ್ಲದೇ ಸ್ವಯಂ ಚಾಲಿತ ಬಾಗಿಲು, ಅಗ್ನಿ ಆಕಸ್ಮಿಕ ಉಪಕರಣಗಳು, ರೂಫ್ ವೆಂಟಿಲೇಟರ್‍ಗಳು ಹಾಗೂ ಅಂಗವಿಕಲರಿಗಾಗಿ ಪಂಪ್‍ಗಳಿವೆ.
ಈ ಮಿಡಿ ಬಸ್‍ಗಳು ಇತರೆ ಸಾಮಾನ್ಯ ಬಸ್‍ಗಳಿಗಿಂತ ಸಾಮಾನ್ಯವಾಗಿ ಚಿಕ್ಕದಾಗಿದ್ದು, ಮಿನಿ ಬಸ್‍ಗಳಿಗಿಂತ ದೊಡ್ಡದು. ಇವುಗಳು 30 ರಿಂದ 40 ಆಸನದ ವ್ಯವಸ್ಥೆ ಹೊಂದಿರುತ್ತದೆ. ಸಧ್ಯಕ್ಕೆ ಇವುಗಳು ಈಗ ಕೆಂಗೇರಿಯಲ್ಲಿ ನಿಂತಿದ್ದು ಮುಂದಿನ ತಿಂಗಳಿಂದ ಪ್ರಯಾಣಿಕರಿಗೆ ಲಭ್ಯವಾಲಿದೆ. ಬೆಂಗಳೂರಿನ ಹೊರ ವಲಯದಲ್ಲಿ ಪ್ರಯಾಣಿಸುವ ಈ ಬಸ್ ಪ್ರತಿ ವಲಯಗಳಿಗೆ ರೂ 5 ರಂತೆ ನಿಗದಿ ಮಾಡಲಾಗಿದೆ.
POPULAR STORIES :
ರಜನಿಕಾಂತ್ ಹಾಲಿವುಡ್ ಸೀಕ್ರೆಟ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಒಂದು ವಿಷಯ..!
ಸುಲ್ತಾನ ಸಿನಿಮಾ ಗಳಿಸಿದ ಒಟ್ಟು 500 ಕೋಟಿ ಆದಾಯದಲ್ಲಿ ಸಲ್ಮಾನ್‍ನ ಗಳಿಕೆ ಎಷ್ಟಿರಬಹುದು ???
ಕಣ್ಣು ಕಾಣದಿದ್ದರೇನು ಗೆಳತಿ ನಾನಿಲ್ಲವೇ ನಿನ್ನ ಕಣ್ಣಾಗಿ…!
ಬಣ್ಣ ಲೇಪಿತ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿ ರಾಜ್ಯದಲ್ಲಿ ಸಂಪೂರ್ಣ ನಿಷೇಧ.
ಕೇಂದ್ರ ಸರ್ಕಾರಿ ನೌಕರರೇ ಗಮನಿಸಿ… ನಿಮಗಿಲ್ಲ ಸರ್ಕಾರವನ್ನು ಟೀಕಿಸುವ ಅಧಿಕಾರ.!