ಬೆಂಗಳೂರು : ನಂದಿನಿ ಹಾಲು ಉತ್ಪನ್ನಗಳ ದರ ಪರಿಷ್ಕರಣೆ ಮಾಡಿ ಕೆಎಂಎಫ್ ಎಂಡಿ ಸತೀಶ್ ಹೊಸ ಆದೇಶ ಹೊರಡಿಸಿದ್ದಾರೆ. ಹಾಲಿನ ಉತ್ಪನ್ನಗಳ ದರಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಇಂದಿನಿಂದ ಜಾರಿಗೆ ಬರುವಂತೆ ನಂದಿನಿ ಮೊಸರು, ಮಜ್ಜಿಗೆ ಮತ್ತು ಲಸ್ಸಿ ಪೊಟ್ಟಣಗಳ ಮಾರಾಟ ದರವನ್ನು ಮರುಪರಿಷ್ಕರಣೆ ಮಾಡಿ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ ಸತೀಶ್ ಆದೇಶ ಹೊರಡಿಸಿದ್ದಾರೆ. 200 ಗ್ರಾಂ ಸ್ಯಾಚೆಯ ಮೊಸರಿನ ಜಿಎಸ್‌ಟಿ ಸೇರಿಸಿ 12.00 ಗೆ ಏರಿಸಲಾಯಿತು. ಈ ದರವನ್ನು ಪರಿಷ್ಕತಗೊಳಿಸಿ 10.50 ರೂ. ಅದರಂತೆ 500 ಗ್ರಾಂ ಪ್ಯಾಕೆಟ್ ಗೆ 23ರೂ. 1ಲೀಟರ್ ಗೆ 45ರೂ. ದರ ನಿಗದಿ ಮಾಡಲಾಗಿದೆ.
200 ಗ್ರಾಂ ಸ್ಯಾಚೆಯ ಮಜ್ಜಿಗೆ ದರವನ್ನು 7ರೂ ನಿಂದ 8ಕ್ಕೆ ಏರಿಸಲಾಗಿದೆ. ಪರಿಷ್ಕತ ದರದಂತೆ 7.50ರೂ ಆಗಲಿದೆ. ಇದೇ ರೀತಿ 200 ಮಿ.ಲೀ ಲಸ್ಸಿ ದರವನ್ನು 10ರೂ ನಿಂದ 11ಕ್ಕೆ ಏರಿಸಲಾಗಿದೆ. ಇದೀಗ 10.50ರೂ. ಈ ಸಂಬಂಧ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಲಿ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ ಸತೀಶ್ ಪತ್ರಿಕಾ ಪ್ರಕಟಣೆಯಲ್ಲಿ. ಆದರೆ ಈಗ ಗ್ರಾಹಕರು ಇದು ಕಣ್ಣೊರೆಸುವ ಬೆಲೆ ಇಳಿಕೆ 50 ಪೈಸೆ ಚಿಲ್ಲರೆ ಕೊಡೋಕಾಗುತ್ತಾ ಅಂತಾ ಪ್ರಶ್ನಿಸುತ್ತಿದ್ದಾರೆ ..