ನಾಲ್ಕು ತಿಂಗಳ ಪುಟ್ಟ ಮಗುವೊಂದಕ್ಕೆ ಎರಡು ತಿಂಗಳಲ್ಲಿ 20 ಬಾರಿ ಹೃದಯಘಾತವಾಗಿರುವ ಘಟನೆ ಸೋಲ್ಲಾಪುರದಲ್ಲಿ ಬೆಳಕಿಗೆ ಬಂದಿದೆ. ಮಗುವಿನ ಜೀವ ಉಳಿಸಲು ನಗರ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಮಗು ಮುಂಚಿತ ಸ್ಥಿತಿಗೆ ಮತ್ತು ಸಾಮಾನ್ಯ ಸ್ಥಿತಿಗೆ ಬರಲು ಎಂಟರಿಂದ ಒಂಬ್ಬತ್ತು ತಿಂಗಳು ಕಾಲಾವಕಾಶ ಬೇಕೆಂದು ಅದಿತಿ ಗಿಲ್ಬಿಲೆ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಶ್ವಾಸಕೋಶದ ಅಪದಮನಿ ಎಂಬ ಸಮಸ್ಯೆಯಿಂದ ಈ ಮಗು ನರಳುತ್ತಿದೆ. ಇಂತಹ ಘಟನೆಗಳು ಅಪರೂಪಕ್ಕೊಮ್ಮೆ ಕಾಣಿಸಿಕೊಳ್ಳುತ್ತವೆ. ಅಲ್ಲದೆ ಈ ಶ್ವಾಸಕೋಶದ ಅಪಧಮನಿಯಿಂದ ಮೂರು ಲಕ್ಷ ಮಕ್ಕಳು ಇದರ ಪರಿಣಾಮವನ್ನು ಎದುರಿಸುತ್ತಿದ್ದಾರೆ. ಹೃದಯದ ಮುಖ್ಯ ಭಾಗದಲ್ಲಿ ಕಪ್ಪು ಕುಹರವು ವಕ್ರವಾಗಿ ಹುಟ್ಟಿ ಕೊಂಡಿರುತ್ತದೆ ಇದರಿಂದ ದೇಹಕ್ಕೆ ಆಮ್ಲಜನಕ ಪೂರೈಕೆಯಲ್ಲಿ ದೋಷ ಉಂಟಾಗಿ ಹೃದಯ ಕಡಿಮೆ ರಕ್ತವನ್ನು ಪಡೆಯುವುದರಿಂದ ಅನೇಕ ಸಮಸ್ಯೆಗಳು ಉದ್ಬವಿಸುತ್ತವೆ. ಶ್ವಾಸಕೋಶದ ಅಪಧಮನಿ ನವಜಾತ ಹೃದಯಗಳಲ್ಲಿ ಕೇವಲ 0.25% ರಿಂದ 0.05% ನಷ್ಟಿರುವುದರಿಂದ ಹೃದಯ ಸಮಸ್ಯೆಗಳು ಹೆಚ್ಚಾಗುತ್ತವೆ ಎಂದರು.
ಎರಡು ತಿಂಗಳ ಮಗುವಿಗೆ ಜನವರಿ ತಿಂಗಳಿನಿಂದ ಚಿಕಿತ್ಸೆಯನ್ನ ಆದಿತಿ ಆಸ್ಪತ್ರೆ ಆರಂಭಿಸಿದೆ. ಮಗುವಿಗೆ ಮೊದಲು ಬೇನೆ ಚಿಹ್ನೆಗಳು ಕಾಣಲು ಪ್ರಾರಂಭವಾದವು. ನಂತರ ಉಸಿರಾಟ ಮತ್ತು ಆಹಾರ ಮಾದರಿಗಳನ್ನ ಬದಲಾಯಿಸಲು ಆರಂಭಿಸಿದೆವು ಆಗ ಅಪಾರ ಬೆವರು ಹೆಚ್ಚಾಗಿ ತಾಯಿ ಹಾಲನ್ನ ಮಗು ನಿರಾಕರಿಸಿತು. ಇದರಿಂದ ನಾವು ಮಗುವಿನ ಪರಿಸ್ಥಿತಿ ಬಗ್ಗೆ ವೈದ್ಯರಿಗೆ ತಿಳಿಸಿದೆವು ವೈದ್ಯರು ಮೂರು ಗಂಟೆಗಳ ಕಾಲ ಮಗುವಿನ ತೂಕವನ್ನು ಪರೀಕ್ಷಿಸಿ ನಂತರ ಚಿಕಿತ್ಸೆ ನೀಡಲಾರಂಭಿಸಿದರು ಎಂದು ಮಗುವಿನ ತಾಯಿ ಪ್ರೀತಿ ತಮ್ಮ ಅಳಲನ್ನ ಹೇಳಿಕೊಂಡರು.
- ಚಂದ್ರಶೇಖರಾಚಾರ್ ಕನಕೇನಹಳ್ಳಿ
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ವಾಟ್ಸ್ ಆಪ್ ನಲ್ಲಿ ನಗ್ನ ಫೋಟೋ ಶೇರ್ ಮಾಡಿದ ಅಧಿಕಾರಿ ಬಂಧನ.!
Job ಆಫರ್! 70 ದಿನ ಮಲಗಿದ್ದರೆ 12.17ಲಕ್ಷ!
ಕುಡುಕರು ಹಾಡಿದ ಪರಮಾತ್ಮನ ಮಹಿಮೆ..! ಈ ವೀಡಿಯೋ ನೋಡಿದ್ರೆ ನಗದೇ ಇರೋಕೆ ಸಾಧ್ಯನೇ ಇಲ್ಲ.!
ಬೆಂಗಳೂರಲ್ಲಿ ಕನ್ನಡ ಮಾತನಾಡೋರು 34% ಮಾತ್ರ..! ಕನ್ನಡ ಮಾಯವಾಗ್ತಿದೆ…ರಾಜಧಾನಿಯಲ್ಲಿ ಕನ್ನಡ ನಶಿಸಿ ಹೋಗ್ತಿದೆ..!
ತಣ್ಣಗಿದ್ದ ಬೆಂಗಳೂರು ಯಾಕೆ ಹೀಗೆ ಉರೀತಿದೆ..?! ಬೆಂಗಳೂರಿನಲ್ಲಿ ದಾಖಲೆಯ ತಾಪಮಾನ ಏರಿಕೆ..!