ಆಕೆ ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ನ ವಾಸಿ. ಅವಳಿಗಿನ್ನೂ 28 ವರ್ಷ ವಯಸ್ಸು. ಅವಳ ಆರೋಗ್ಯ ಸಂಪೂರ್ಣ ಹದಗೆಟ್ಟಿದ್ದು, ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾಳೆ..!
ಸಾಮಾನ್ಯವಾಗಿ ಜೀವನ ಅಂದ ಮೇಲೆ ಆಯಾ ವಯಸ್ಸು, ಕಾಲಕ್ಕೆ ತಕ್ಕಂತೆ ಬಯಕೆಗಳು ಹುಟ್ಟಿಕೊಳ್ಳುತ್ತವೆ..! ಅದರಿಂದ ಈ 28ರ ಯುವತಿ ಹೊರತಲ್ಲ..! ಅವಳಿಗೂ ಸಹಜವಾಗಿ ಮದುವೆಯಾಗಬೇಕೆಂಬ ವಯೋಸಹಜ ಬಯಕೆ ಇತ್ತು..!
ಕಡೆಗೆ ಅವಳ ಕೊನೆ ಆಸೆಯಂತೆ ಅವಳಿಗೆ ಮದುವೆ ಮಾಡಲು ಮನೆಯವರು ಮುಂದಾಗ್ತಾರೆ..!ಹಾಸ್ಪಿಟಲ್ ನಲ್ಲಿ ಮದುವೆ ನಡೆಯುತ್ತದೆ. ಮದುವೆ ಬಳಿಕ ಆಶ್ಚರ್ಯ ಕಾದಿತ್ತು..! ಮದುವೆ ಆದ ಮೇಲೆ ಈಗ ಅವಳು ಮತ್ತೆ ನಾರ್ಮಲ್ ಆಗಿ ಜೀವನ ನಡೆಸುತ್ತಿದ್ದಾಳೆ…!
ಹ್ಞಾಂ, ಅವಳು ಜೆಸ್ಸಿಕಾ ಬೀನ್..ಈಕೆಗೆ ಬಾಲ್ಯದಿಂದಲೂ ಶ್ವಾಸಕೋಶ ಸಮಸ್ಯೆ ಇತ್ತು, 21ವರ್ಷಕ್ಕೆ ಕಾಲಿಡುತ್ತಿದ್ದಂತೇ ಅದು ಬಿಗಿಡಾಯಿಸಿತು.!
ಬಹಳ ಕಾಲ ಬದುಕಿರಲ್ಲ ಅಂತ ಗೊತ್ತಾದ ಬಳಿಕ. ನಾನು ಸಹ ಮದುವೆಯಾಗಿ ಸಂಸಾರ ನಡೆಸಬೇಕೆಂಬ ಇಂಗಿತ ವ್ಯಕ್ತಪಡಿಸ್ತಾಳೆ..!ಕಳೆದ ಒಂದು ವರುಷದ ಹಿಂದೆ ಅವಳ ಮದುವೆಯೂ ಆಯ್ತು.
ಅವಳ ಆರೋಗ್ಯ ಸಿಕ್ಕಾಪಟ್ಟೆ ಹಾಳಾಗಿತ್ತಾದರಿಂದ ಆಗಿನಿಂದಲೇ ಅವಳನ್ನು ಹಾಸ್ಪಿಟಲ್ ಗೆ ಸೇರಿಸಲಾಗಿತ್ತಂತೆ..! ಶ್ವಾಸಕೋಶದ ತೊಂದರೆಯಿಂದ ನರಳುತ್ತಿದ್ದ ಅವಳ ಶ್ವಾಶಕೋಶವು ಕೇವಲ 30% ಕೆಲಸ ಮಾಡಲಷ್ಟೆ ಶಕ್ತವಾಗಿತ್ತು.ಅವಳ ಆರೋಗ್ಯ ಸ್ಥಿತಿ ಎಷ್ಟರ ಮಟ್ಟಿಗೆ ಬಿಗಡಾಯಿಸಿತ್ತೆಂದರೆ ಲಂಗ್ಸ್ ಟ್ರಾನ್ಸ್ ಪ್ಲಾಂಟ್ ಮಾಡಲೂ ಸಹ ಅಸಾಧ್ಯವಾಗಿತ್ತು…!
ಹೀಗಿರುವಾಗಲೇ ಅವಳ ಆಸೆಯಂತೆ ಬಾಲ್ಯದ ಸ್ನೇಹಿತ ಕ್ಯಾಮರಾನ್ ಜೊತೆ ಮದುವೆ ಆಗೋ ಆಶಯ ವ್ಯಕ್ತ ಪಡಿಸಿದಳು. ಅವಳು ಮದುವೆ ಆದ ಕ್ಷಣದಿಂದ ನಾರ್ಮಲ್ ಆಗಿದ್ದಾಳೆ, ಹಾಗೂ ಸುಂದರ ಜೀವನ ನಡೆಸುತ್ತಿದ್ದಾಳೆ….
ಅಂತೂ ಮದುವೆನೂ ಒಂದು ಕಾಯೆಲೆಗೆ ಮದ್ದಾಗಿ ಪರಿಣಮಿಸಿತೇ???? ಪ್ರೀತಿಗೆ ಅಂಥಾ ದೊಡ್ಡಶಕ್ತಿ ಇದೆಯೇ? ಅದಕ್ಕೇ ಹೇಳೋದು ರೋಗಿಗಳನ್ನು ಪ್ರೀತಿಯಿಂದ ನೋಡಿಕೊಳ್ಳಿ ಎಂದು..!
- ಸ್ವರ್ಣಲತ ಭಟ್
POPULAR STORIES :
ರವಿಬೆಳೆಗೆರೆಗೆ ಆರು ತಿಂಗಳು ಜೈಲು ಶಿಕ್ಷೆ..!!!
ಸಾಮಾಜಿಕ ಜಾಲತಾಣಗಳಲ್ಲಿ ಅಭಿವ್ಯಕ್ಕಿ ಸ್ವಾತಂತ್ರ್ಯದ ದುರ್ಬಳಕೆ : ಸಲ್ಮಾನ್‍ಖಾನ್
ಅವನನ್ನು ಅವಮಾನಿಸಿದ ಅವಳೆಲ್ಲಿದ್ದಾಳೆ..! ಅವಳು, ಅವನು ಮತ್ತು ಆ ಉಪನ್ಯಾಸಕ..!
ಅವನು ಅವರ ತಂದೆಗೆ ರಕ್ತ ಕೊಡಲಿಲ್ಲ..ಆಮೇಲೇನಾಯ್ತು? ರಕ್ತದಾನ ಮಹಾದಾನ
ಅವನು ಖಂಡೀಲ್ ಬಲೋಚ್‍ನ ಕೊಲ್ಲಲು ಈ ವಿಡಿಯೋ ಕಾರಣವಂತೆ..!! ಈ ವಿಡಿಯೋದಲ್ಲಿ ಅಂತದ್ದೇನಿದೆ..?
ಸಿಲಿಕಾನ್ ಸಿಟಿ ಯಲ್ಲಿದೆ ಬಾಲ್ಯವಿವಾಹ ಪದ್ದತಿ… ಅಚ್ಚರಿಯಾದ್ರೂ ಇದೇ ಸತ್ಯ…