ಒಕ್ಕಲಿಗ ಸಮುದಾಯದ ಮೀಸಲಾತಿ ಹೋರಾಟಕ್ಕೆ ಶ್ರೀಗಳ ಬೆಂಬಲ

Date:

ಒಕ್ಕಲಿಗ ಸಮುದಾಯದ ಮೀಸಲಾತಿ ಹೆಚ್ಚಳ ಬಗ್ಗೆ ಹೋರಾಟ ನಡೆಯುತ್ತಿದ್ದು, ನಿರ್ಮಲಾನಂದನಾಥ ಶ್ರೀಗಳು ಈ ಬಗ್ಗೆ ಧ್ವನಿ ಎತ್ತಿದ್ದಾರೆ. ನಾವು ಕೂಡ ಈ ಹೋರಾಟದ ಪರ ಇದ್ದೇವೆ ಎಂದು ಬಿಜೆಪಿ ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದ್ರು. ಈ ಬಗ್ಗೆ ಮಂಡ್ಯದಲ್ಲಿ ಮಾತ್ನಾಡಿದ ಅವರು, ನಾವೆಲ್ಲಾ ಶ್ರೀಗಳ ಪರ ಇದ್ದೇವೆ. ನಮ್ಮ ಸಂಪೂರ್ಣ ಬೆಂಬಲ ಅವರಿಗಿದೆ. ST ಮೀಸಲಾತಿಗೆ ಎಷ್ಟೋ ವರ್ಷದಿಂದ ಹೋರಾಟ ನಡೆಯುತ್ತಿತ್ತು. ಆದ್ರೆ, ಇದನ್ನು ನಾವು ಮಾಡಿದ್ದು ಅಂತ ಬೇರೆ ಪಕ್ಷದವರು ಮೂಗು ವರೆಕೊಳ್ತಿದ್ದಾರೆ. ನಮ್ಮ ಸರ್ಕಾರ, ಸಿಎಂ, ಪ್ರಧಾನಿ, ಬಿಜೆಪಿಯಿಂದ ಮೀಸಲಾತಿ ಹೆಚ್ಚಳವಾಗಿದೆ. ನಿನ್ನೆ ಸಿದ್ದರಾಮಯ್ಯ ಮಂಡ್ಯಕ್ಕೆ ಬಂದು ಮೂಗಿನ ನೇರಕ್ಕೆ ಹೇಳಿದ್ದಾರೆ. ಅದೇ ಅವರು 5 ವರ್ಷ ಸಿಎಂ ಆಗಿದ್ದಾಗ ಯಾಕೆ ಮೀಸಲಾತಿ ಹೆಚ್ಚಳ ಮಾಡಿಲ್ಲ ಎಂದು ಪ್ರಶ್ನಿಸಿದ್ರು. ಇನ್ನ ಒಕ್ಕಲಿಗ ಸಮುದಾಯದ ಪರ ನಾವಿದ್ದು, ಸಿಎಂ ಬೊಮ್ಮಾಯಿ ಜೊತೆ ಕ್ಯಾಬಿನೆಟ್ನಲ್ಲಿ ಚರ್ಚೆಯಾಗಿದೆ. ಒಕ್ಕಲಿಗರ ಸಮುದಾಯಕ್ಕೆ ಅನ್ಯಾಯ ಆಗಲು ಬಿಡಲ್ಲ. ಕೇಂದ್ರ ಸರ್ಕಾರದ ಗಮನ ಸೆಳೆದು ಇದನ್ನ ಕಾರ್ಯಗತಗೊಳಿಸುತ್ತೇವೆ ಎಂದು ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದ್ರು.

Share post:

Subscribe

spot_imgspot_img

Popular

More like this
Related

ರೋಗಿಗಳನ್ನ ಸಾಗಿಸಬೇಕಿದ್ದ ಆ್ಯಂಬ್ಯುಲೆನ್ಸ್‌ʼನಲ್ಲಿ ಜನರ ಪ್ರಯಾಣ..!

ರೋಗಿಗಳನ್ನ ಸಾಗಿಸಬೇಕಿದ್ದ ಆ್ಯಂಬ್ಯುಲೆನ್ಸ್‌ʼನಲ್ಲಿ ಜನರ ಪ್ರಯಾಣ..!ಗದಗ: ರೋಗಿಗಳ ಸಾಗಾಟಕ್ಕೆ ಬಳಸಬೇಕಿದ್ದ ಆ್ಯಂಬ್ಯುಲೆನ್ಸ್‌ನಲ್ಲಿ...

ಮುಟ್ಟಿನ ಮೊದಲ ದಿನವೇ ಹೆಚ್ಚು ನೋವು ಯಾಕೆ? ಇದಕ್ಕೆ ಕಾರಣ ಹೀಗಿದೆ ನೋಡಿ

ಮುಟ್ಟಿನ ಮೊದಲ ದಿನವೇ ಹೆಚ್ಚು ನೋವು ಯಾಕೆ? ಇದಕ್ಕೆ ಕಾರಣ ಹೀಗಿದೆ...

ಲವ್ ಮಾಕ್ಟೇಲ್ 3 ಟ್ರೈಲರ್ ಬಿಡುಗಡೆ: ಮಾರ್ಚ್ 19ಕ್ಕೆ ಸಿನಿಮಾ ತೆರೆಗೆ

ಲವ್ ಮಾಕ್ಟೇಲ್ 3 ಟ್ರೈಲರ್ ಬಿಡುಗಡೆ: ಮಾರ್ಚ್ 19ಕ್ಕೆ ಸಿನಿಮಾ ತೆರೆಗೆ ಬೆಂಗಳೂರು:...

ಇಂದು ಮೊದಲ ಬಾರಿಗೆ ಫೈನಲ್ʼನಲ್ಲಿ ಭಾರತ–ನ್ಯೂಜಿಲೆಂಡ್ ಮುಖಾಮುಖಿ!

ಇಂದು ಮೊದಲ ಬಾರಿಗೆ ಫೈನಲ್ʼನಲ್ಲಿ ಭಾರತ–ನ್ಯೂಜಿಲೆಂಡ್ ಮುಖಾಮುಖಿ! ಅಹಮದಾಬಾದ್: 2026ರ ಟಿ20 ವಿಶ್ವಕಪ್...