ಇಂದು ಫೋನ್ ಸರ್ವಾಂತರ್ಯಾಮಿ, ಪ್ರತಿಯೊಬ್ಬರ ಬಾಳಿನಲ್ಲೂ ಫೋನ್ ಇದ್ದೇ ಇರುತ್ತೆ. ಅದರ ಅವಶ್ಯಕತೆಯೂ ಇರುತ್ತೆ. ಈ ಫೋನ್ ಗಳಲ್ಲಿ ಅದೆಷ್ಟೋ ಪ್ರೇಮಕಥೆಗಳು ಶುರುವಾಗಿ, ಅಂತ್ಯಾನೂ ಆಗಿವೆ. ಆದ್ರೆ ಇಲ್ಲೊಬ್ಬಳು ಕಾಲೇಜು ಹುಡುಗಿ ಮಿಸ್ಡ್ ಕಾಲ್ ನಿಂದ ಪರಿಚಿತನಾದವನನ್ನು ಹಚ್ಚಿಕೊಂಡು ಕೊನೆಗೆ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾಳೆ. ಈ ಸ್ಟೋರಿ ಆರಂಭವಾಗೋದು ಹಾಸನದಲ್ಲಿ, ಅಂತ್ಯವಾಗೋದು ಹಾವೇರಿಯಲ್ಲಿ. ಈ ಸ್ಟೋರಿಯನ್ನ ನೀವೆಲ್ಲ ಓದಲೇಬೇಕು.. ಅದರಲ್ಲೂ ಕಾಲೇಜು ಹುಡುಗಿಯರು ಮಿಸ್ ಮಾಡ್ದೇ ಓದಲೇಬೇಕು..
ಅದು ಹಾವೇರಿ ತಾಲ್ಲೂಕಿನ ಕರ್ಜಗಿ ಗ್ರಾಮ. ಮೊನ್ನೆ ಬೆಳ್ಳಂಬೆಳ್ಳಗ್ಗೆ ಈ ಊರ ಜನ ಅದೊಂದು ಮನೆ ಕಡೆಗೆ ಧಾವಿಸಿದ್ರು. ಆ ಊರಿನ ಮುಖಂಡರು ಅಲ್ಲಿಗೆ ಬಂದಿದ್ರು.. ಯಾಕಂದ್ರೆ ಆ ಮನೆಯ ಒಂದು ಕೋಣೆಗೆ ಒಳಗಿನಿಂದ ಲಾಕ್ ಮಾಡಿಕೊಂಡು ಯುವತಿಯೊಬ್ಬಳು ಸಾವಿಗೆ ಶರಣಾಗಿದ್ದಳು. ವಿಷಯ ತಿಳಿದು ಪೊಲೀಸರು ಅಲ್ಲಿಗೆ ಬಂದಿದ್ದರು. ಮನೆಯವರನ್ನ ಆ ಬಗ್ಗೆ ವಿಚಾರ ಮಾಡಿ ಆ ರೂಮಿನ ಬಾಗಿಲು ಒಡೆದು ಒಳ ಹೋಗಿ ನೋಡುತ್ತಾರೆ. ಯುವತಿಯೊಬ್ಬಳು ಫ್ಯಾನಿಗೆ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ಲು. ಯುವತಿ ಆತ್ಮಹತ್ಯೆ ಮಾಡಿಕೊಂಡಿರೋ ಸುದ್ದಿ ಗೊತ್ತಾಗುತ್ತಲೇ ಊರ ಜನ ಆ ಮನೆ ಬಳಿ ಬಂದಿದ್ರು. ಆದ್ರೆ ಅಲ್ಲಿಗೆ ಬಂದಿದ್ದ ಗ್ರಾಮಸ್ಥರಿಗೆ ಒಂದು ಅನುಮಾನ ಕಾಡುತ್ತಿತ್ತು. ಅದೇನು ಅಂದ್ರೆ ಆ ಮನೆಯಲ್ಲಿ ಸಾವಿಗೆ ಶರಣಾಗಿರೋ ಆ ಯುವತಿ ಯಾರು ಅನ್ನೋದು..? ಆಕೆಗೂ ಆ ಮನೆಗೂ ಸಂಬಂಧವೇ ಇರಲಿಲ್ಲ. ಹೀಗಾಗಿಯೇ ಊರವರೆಲ್ಲ ಅಲ್ಲಿ ಜಮಾಯಿಸಿದ್ರು. ಸ್ಥಳಕ್ಕೆ ಬಂದಿದ್ದ ಪೊಲೀಸರು ಆ ಬಗ್ಗೆ ವಿಚಾರಣೆ ನಡೆಸಿದಾಗ ಅವರಿಗೆ ಗೊತ್ತಾಗುತ್ತೆ ಆಕೆ ಹಾಸನ ಮೂಲದವಳು ಅಂತ.
ಆತ್ಮಹತ್ಯೆಗೆ ಶರಣಾಗಿರೋ ಯುವತಿ ಮೂಲತಃ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದ ಒಂದು ಗ್ರಾಮದವಳು. ಹಾಸನಕ್ಕೂ ಹಾವೇರಿಗೂ ಅನಾಮತ್ತು 300 ಕಿಮಿ ಅಂತರವಿದ್ದು ಈಕೆ ಇಲ್ಲಿಗೆ ಯಾಕೆ ಬಂದ್ಲು, ಹೇಗೆ ಬಂದ್ಲು ಅನ್ನೋದೇ ಇನ್ಟ್ರೆಸ್ಟಿಂಗ್. ಈ ಮುದ್ದಾದ ಯುವತಿಯ ಹೆಸ್ರು ಜಯಶ್ರೀ. ಹಾಸನದ ದಿಡಗ ಗ್ರಾಮದ ಯುವತಿ. ಪಿಯುಸಿ ಓದುತ್ತಿದ್ದವಳು ಈ ವರ್ಷ ಪರೀಕ್ಷೆ ಬರೆಯಬೇಕಿತ್ತು. ಆದ್ರೆ ವಿಧಿಯಾಟ ಬೇರೆಯದ್ದೆ ಆಗಿತ್ತು. ಅಷ್ಟಕ್ಕೂ ಈ ಹುಡುಗಿ ಹಾಸನದಿಂದ ಹಾವೇರಿಗೆ ಬಂದಿದ್ದು ಯಾಕೆ..? ಹಾವೇರಿಯಲ್ಲಿ ಸಾವಿಗೆ ಶರಣಾಗಿದ್ದು ಯಾಕೆ ?
ಆ ಮನೆಗೂ ಅವಳಿಗೂ ಸಂಬಂಧ ಇತ್ತು. ಆ ಸಂಬಂಧ ಎಷ್ಟರ ಮಟ್ಟಿಗೆ ಅಂದ್ರೆ ಆಕೆಯ ಪ್ರಾಣವನ್ನೇ ಬಲಿ ಬಡೆಯುವಂತಹ ಸಂಬಂಧ. ಅದು ಹೇಗೆ ಅಂದ್ರೆ ಒಂದು ಮಿಸ್ಡ್ ಕಾಲ್ನಿಂದ. ಇಲ್ಲಿ ಫೋಟೋಗೆ ಫ್ರೇಮ್ ಹಾಕಿಸಿಕೊಂಡು ಅದಾಗಲೇ ಶಿವನ ಪಾದ ಸೇರಿರೋ ಈತನ ಹೆಸರು ಬಸವರಾಜ ಚೆಟ್ಟಿ.. ಈತನಿಗೂ ಜಯಶ್ರಿಗೂ ಒಂದು ಮಿಸ್ಡ್ ಕಾಲ್ ನಿಂದ ಪರಿಚಯವಾಗುತ್ತೆ. ಸುಮಾರು ಆರು ತಿಂಗಳ ಹಿಂದಷ್ಟೆ ಜಯಶ್ರಿ ಮೊಬೈಲ್ಗೊಂದು ಮಿಸ್ಡ್ ಕಾಲ್ ಬಂದಿತ್ತು. ಅತ್ತಲಿಂದ ಮಿಸ್ ಆಗಿ ಕರೆ ಮಾಡಿದ್ದವನು ಇದೇ ಬಸವರಾಜ್. ಮಿಸ್ ಆಗಿ ಮಾಡಿದ ಕರೆ ಜಯಶ್ರಿ ಮೊಬೈಲ್ಗೆ ಹೋಗಿತ್ತು. ಮಿಸ್ಡ್ ಕಾಲ್ ನೋಡಿ ಫೋನ್ ಮಾಡಿದ ಜಯಶ್ರೀ ಆತನ ಜೊತೆ ಮಾತನಾಡಿದ್ಲು. ಹಾಗೇ ಅವರಿಬ್ಬರು ಮತ್ತೆ ಮತ್ತೆ ಫೋನ್ ನಲ್ಲಿ ಮಾತನಾಡೋದಕ್ಕೆ ಶುರುಮಾಡ್ತಾರೆ. ಒಂದು ಮಿಸ್ಡ್ ಕಾಲ್ ನಿಂದ ಅವರಿಬ್ಬರನ್ನೂ ಆತ್ಮೀಯರನ್ನಾಗಿ ಮಾಡಿತ್ತು. ಮುಂದೆ ಇದೇ ಆತ್ಮೀಯತೆ ಎಷ್ಟರ ಮಟ್ಟಕ್ಕೆ ಹೋಗುತ್ತೆ ಅನ್ನೋದು ಅವರು ಊಹಿಸಿರಲಿಲ್ಲ..
ಎಸ್, ಮಿಸ್ಡ್ ಕಾಲ್ ಸ್ನೇಹ ಮುಂದೆ ಮೊಬೈಲ್ ನಲ್ಲಿ ಗಂಟೆಗಟ್ಟಲೇ ನಿಂತು ಮಾತಾಡುವ ತನಕ ಮುಂದುವಯುತ್ತೆ. ಮೆಸೇಜುಗಳು ಹರಿದಾಡುತ್ತವೆ. ದಿನಕಳೆದಂತೆ ಇಬ್ಬರ ನಡುವೇ ಅದೇನೋ ಒಂದು ತರಹದ ಸಂಬಂಧ ಶುರುವಾಗಿಬಿಡ್ತು. ಇಬ್ಬರು ಬಿಟ್ಟಿರಲಾರದಷ್ಟು ಆತ್ಮೀಯರಾಗಿಬಿಟ್ರು. ಆದ್ರೂ ಅವರಿಬ್ಬರು ಒಂದು ದಿನವೂ ಮುಖಾಮುಖಿಯಾಗಿರಲಿಲ್ಲ. ಅದಕ್ಕೆ ಕಾರಣವಾಗಿದ್ದು ದೂರದ ಊರುಗಳಾಗಿದ್ದ ಕಾರಣ. ಆದ್ರೆ ಮೊಬೈಲ್ನಲ್ಲೇ ಮೀಟಿಂಗೂ ಚಾಟಿಂಗೂ ನಡೆಯುತ್ತಿತ್ತು. ಹೀಗಿರುವಾಗ ಮೊಬೈಲನ್ನ ಖರೀದಿ ಮಾಡಿ ಅದನ್ನ ಜಯಶ್ರಿಗೆ ಗಿಫ್ಟಾಗಿ ಕೊಟ್ಟಿದ್ದ. ಆದ್ರೆ ಬಸವರಾಜನೇನು ಬ್ಯಾಚುಲರ್ ಆಗಿರಲಿಲ್ಲ. ಆತನಿಗೆ ಅದಾಗಲೇ ಮದುವೆಯಾಗಿತ್ತು. ಮಡದಿ ಕೂಡ ಜೊತೆಯಲ್ಲೇ ಇದ್ಲು. ಅತ್ತ ಮಡದಿ ಜೊತೆ ಅನ್ಯೋನ್ಯವಾಗಿಯೇ ಇದ್ದ ಬಸವರಾಜ ಇತ್ತ ಟೆಲಿಫೋನ್ ಗೆಳತಿ ಜಯಶ್ರೀಯಲ್ಲೂ ಚಾಟ್ ಮಾಡುತ್ತಿದ್ದ. ಕದ್ದು ಮುಚ್ಚಿ ಇಬ್ಬರ ಆಟ ನಡೆಯುತ್ತಿದ್ದರು ಮಗಳು ದಾರಿ ಬಿಟ್ಟವಳೇ ಅನ್ನೋ ಸಣ್ಣ ಸಂಶಯವೂ ಪೋಷಕರಿಗೆ ಬಂದಿರಲಿಲ್ಲ. ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಏನಪ್ಪ ಅಂದ್ರೆ, ಜಯಶ್ರಿಗೆ ಪತ್ನಿಯನ್ನ ಫೋನಲ್ಲೇ ಪರಿಚಯ ಮಾಡಿಸಿದ್ದ ಬಸವರಾಜ, ಆಕೆಯೊಂದಿಗೂ ಮಾತಾಡಿಸಿದ್ದ. ಜಯಶ್ರಿ ಕೂಡ ಬಸವರಾಜನ ಪತ್ನಿಯನ್ನ ಅಕ್ಕ ಅಕ್ಕ ಅಂತಲೇ ಪ್ರೀತಿಯಿಂದ ಕರೆಯುತ್ತಿದ್ಲು. ಆದ್ರೆ ಇದ್ದಕ್ಕಿಂದಂತೆ ಒಂದು ದಿನ ಆತನ ಫೋನ್ನಿಂದ ಕಾಲ್ ಬರಲಿಲ್ಲ. ಅವನಿಗೆ ಫೋನ್ ಮಾಡಿದ್ರೆ ರೀಚ್ ಆಗಲಿಲ್ಲ. ದಿನಗಳು ಉರುಳಿದ್ರು ಆತನ ಫೋನ್ ಕಾಲ್ ಬರಲಿಲ್ಲ. ಇದೇನಪ್ಪ ಆಕಡೆಯಿಂದ ಫೋನ್ ಬರುತ್ತಿಲ್ಲ ಇತ್ತಿಂದಲೂ ಹೋಗುತ್ತಿಲ್ಲ ಅಂತ ಜಯಶ್ರೀ ಚಿಂತೆಗೆ ಬಿದ್ದಳು. ಆಗ ಅವಳಿಗೆ ಹೋಳೆದಿದ್ದು ತನ್ನ ಬ್ಯಾಗಿನಲ್ಲಿ ಭದ್ರವಾಗಿದ್ದ ಅವನು ಕಳಿಸಿದ್ದ ಮೋಬೈಲ್ ಗಿಫ್ಟ್ ಪ್ಯಾಕ್. ಎಸ್, ಅದನ್ನ ತೆಗೆದು ನೋಡಿ ಅಲ್ಲಿದ್ದ ವಿಳಾಸಕ್ಕೆ ಫೋನ್ ಮಾಡಿದ್ರೆ ಅವಳಿಗೆ ಸಿಕ್ಕಿದ್ದು ಶಾಕಿಂಗ್ ನ್ಯೂಸ್. ಅದೇನು ಅಂದ್ರೆ ಬಸವರಾಜ್ ಅಫಘಾತದಲ್ಲಿ ಸತ್ತುಹೋಗಿದ್ದಾನೆ ಅನ್ನೋದು..! ಈ ವಿಷಯ ಗೊತ್ತಾಗುತ್ತಿದ್ದಂತೆ ಜಯಶ್ರೀಗೆ ಆಕಾಶವೇ ಕಳಚಿಬಿದ್ದ ಅನುಭವವಾಗಿತ್ತು.
ಅವರು ಹೇಳಿದ್ದು ಸತ್ಯಾನಾ ಅನ್ನೋದನ್ನ ನಾನೇ ನೋಡಬೇಕು ಅಂತ ಹಾವೇರಿಗೆ ಹೋಗೋ ಪ್ಲಾನ್ ಮಾಡ್ತಾಳೆ. ಅದಕ್ಕೆ ಎಕ್ಸಾಂ ಹತ್ತಿರ ಬರ್ತಾ ಇದೆ. ಹೀಗಾಗಿ ನನ್ನ ಗೆಳತಿಯ ಮನೆಯಲ್ಲಿ ಓದ್ಕೊತ್ತೀದ್ದೀನಿ ಅಂತ ಹೆತ್ತವರಿಗೆ ಕಥೆ ಹೇಳಿ ಹಾವೇರಿ ಬಸ್ ಹತ್ತಿ ಬಸವರಾಜನ ಮನೆಯಲ್ಲಿ ಇಳಿದಿದ್ದಳು. ಆತನ ಪತ್ನಿ ಜೊತೆಯೇ ಇದ್ದ ಹುಡುಗಿ ಆ ರಾತ್ರಿ ಮಲಗೋಕೆ ಅಂತ ರೂಮಿಗೆ ಹೋಗಿದ್ಲು. ಆಮೇಲೆ ಏನಾಯ್ತು ಅಂತ ನಾವೂ ಮೇಲೆ ಹೇಳಿದ್ದೇವೆ. ಖಿನ್ನತೆಗೆ ಒಳಗಾಗಿದ್ದ ಜಯಶ್ರೀ ಪ್ರಾಣದ ಗೆಳೆಯನೇ ಹೋದ್ಮೇಲೆ ಇನ್ನೇನಿದೆ ಅಂದುಕೊಂಡು ಡೆತ್ ನೋಟ್ ಒಂದನ್ನ ಬರೆದ್ಲು. ನನ್ನ ಸಾವಿಗೆ ನಾನೇ ಕಾರಣ. ಅಕ್ಕನನ್ನ ಚೆನ್ನಾಗಿ ನೋಡಿಕೊಳ್ಳಿ. ಆಕೆಯಿಂದಲೇ ನನ್ನ ಅಂತ್ಯಸಂಸ್ಕಾರವನ್ನ ಇಲ್ಲಿಯೇ ಮಾಡಿಸಿ ಅಂತ ಬರೆದಿಟ್ಟು ಅಲ್ಲೇ ಇದ್ದ ಸೀರೆಯೊಂದನ್ನ ತೆಗೆದುಕೊಂಡು ಫ್ಯಾನಿಗೆ ನೇಣು ಹಾಕಿಕೊಂಡು ಪ್ರಾಣಬಿಟ್ಟಿದ್ದಳು.
ಫೋನ್ ನಲ್ಲಿ ಪರಿಚಯವಾದ ವಿವಾಹಿತ ಪುರುಷನ ಮೋಹಕ್ಕೆ ಬಿದ್ದ ಟೀನೇಜ್ ಯುವತಿ ತನ್ನ ಬಾಳಿಗೆ ತಾನೇ ಕೊಳ್ಳಿ ಇಟ್ಟುಕೊಂಡಿದ್ದಾಳೆ. ಆದ್ರೆ ಹತ್ತಾರು ವರ್ಷಗಳಿಂದ ಮಗಳನ್ನ ಕಣ್ಣಾಗಿ ನೋಡಿಕೊಂಡಿದ್ದ ಹೆತ್ತವರಿಗೆ ಅವಳು ಕೊಟ್ಟ ಉಡುಗೊರೆ ಇದೇನಾ..?
- ರಘು ಆರ್ ಇಂಜನಹಳ್ಳಿ
POPULAR STORIES :
ಅದು ತೇಜೋಮಹಲ್ ಅಲ್ಲ, ಶುದ್ಧ ತಾಜ್ ಮಹಲ್..! ತಾಜ್ ಮಹಲ್ ಬಗ್ಗೆ ಗೊತ್ತಿರದ ರಹಸ್ಯಗಳು..!
ಪ್ರಭಾಕರ್ ಸಾವಿಗೆ ಕಾರಣವಾಗಿದ್ದು ಆ ವೈದ್ಯ..!? ಅಮ್ಮನ ಕೈ ತುತ್ತು ತಿನ್ನದೆ ಮಲಗುತ್ತಿರಲಿಲ್ಲ ಈ ಜೀವ..!
ಅಂಗವೈಕಲ್ಯ ಗೆದ್ದ ಮಹಾನ್ ಸಾಧಕ..! ಅವ್ನು ಆತ್ಮಹತ್ಯೆಗೂ ಯತ್ನಿಸಿದ್ದ..!!
ಗಂಡನನ್ನು ಕೊಂದು, ಅವನ ತಲೆಯನ್ನು ಸೂಪ್ ಮಾಡಿ ಕುಡಿದಳು, `ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ..!’
`ಚಾನೆಲ್ ಸಂಪಾದಕ ಜೈಲುಪಾಲು..!?’ ಯಾರು ಆ ಸಂಪಾದಕ..?
ಈ ವೀಡಿಯೋ ನೋಡಿದ್ರೆ ನಿಮ್ಮ ತಲೆ ಕೆಟ್ಟು ಹೋಗುತ್ತೆ..! ಇದು ರುಂಡ ಮುಂಡ ಬೇರೆಯಾದ ಜೀವಂತ ಮೀನಿನ ಕಥೆ…
ಉಗ್ರರಿಗೆ ಇಸ್ರೇಲ್, ಅಮೆರಿಕಾದಿಂದ ವೆಪನ್ಸ್ ಪೂರೈಕೆ..!? ಪುಟಿನ್ ಹೇಳಿದ ಬೆಚ್ಚಿಬೀಳಿಸುವ ಸತ್ಯ..!?
ಅಪಘಾತವನ್ನು ಮೊಬೈಲ್ನಲ್ಲಿ ವಿಡಿಯೋ ಮಾಡ್ತೀರಾ..? ಅಪಲೋಡ್ ಮಾಡಿದ್ರೇ ಜೈಲ್ ಗ್ಯಾರಂಟಿ..!?
ಗಂಡನನ್ನು ಕೊಂದು, ಅವನ ತಲೆಯನ್ನು ಸೂಪ್ ಮಾಡಿ ಕುಡಿದಳು, `ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ..!’
ಸಿಯಾಚಿನ್ ಎಂಬ ಸಾವಿನ ಕಣಿವೆ..! ರಣಚಳಿಗೆ ದೇಹ ಮರಗಟ್ಟಿ ಪುಡಿಯಾಗುತ್ತದೆ..!