ಮಿಥಾಲಿ ರಾಜ್ ಕಾಟನ ತಡೆಯೋಕೆ ಆಗ್ತಿಲ್ವಂತೆ ಕೋಚ್ ರಮೇಶ್ ಪೊವಾರ್ ಗೆ..!!
ಟೀಮ್ ಇಂಡಿಯಾ ಫೇಮಸ್ ಪ್ಲೇಯರ್ ಮಿಥಾಲಿ ರಾಜ್ ಅವರನ್ನ ನಿಭಾಯಿಸೋದೆ ತುಂಬಾ ಕಷ್ಟದ ಕೆಲಸ ಎಂದಿದ್ದಾರೆ ಮಹಿಳಾ ತಂಡ ಕೋಚ್ ಆಗಿರುವ ರಮೇಶ್ ಪೊವಾರ್..ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಹಾಗೂ ಕ್ರಿಕೆಟ್ ಚಟುವಟಿಕೆಗಳ ಪ್ರಧಾನ ವ್ಯವಸ್ಥಾಪಕ ಸಾಬಾ ಕರೀಂ ಎದುರು ಹಾಜರಾಗಿದ್ದ ವೇಳೆ ಈ ವಿಷ್ಯವನ್ನ ಪ್ರಸ್ತಾಪಿಸಿದ್ದಾರೆ ಪೊವಾರ್..
ಮಿಥಾಲಿ ರಾಜ್ ಅವರೊಂದಿಗೆ ವ್ಯವಹರಿಸೋದು ತುಂಬಾ ಕಷ್ಟದ ಕೆಲಸವಾಗಿದೆ.. ಅವರು ಯಾರೊಂದಿಗು ಬೆರೆಯದೆ ಒಬ್ಬರೆ ಇರೋದಕ್ಕೆ ಇಷ್ಟ ಪಡ್ತಾರೆ ಎಂದಿದ್ದಾರೆ.. ಹೀಗಾಗೆ ಅವರನ್ನ ನಿಭಾಯಿಸೋದೆ ದೊಡ್ಡ ಕಷ್ಟವಾಗಿದೆ ಅಂತ ಹೇಳಿದ್ದಾರೆ.. ಟಿ20 ವಿಶ್ವಕಪ್ ಸೆಮಿಫೈನಲ್ಸ್ ನಲ್ಲಿ ಮಿಥಾಲಿ ರಾಜ್ ಅವರನ್ನ ತಂಡದಿಂದ ಕೈ ಬಿಟ್ಟಿದಕ್ಕೆ ತೀರ್ವ ವಿರೋಧ ವ್ಯಕ್ತವಾಗಿತ್ತು.. ಈ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ್ದ ಮಿಥಾಲಿ ತನ್ನ ತಂಡದಿಂದ ಕೈ ಬಿಡಲು ರಮೇಶ್ ಪೊವಾರ್ ಅವರೆ ಕಾರಣ ಎಂದಿದ್ರು.. ಇಷ್ಟೆ ಅಲ್ಲದೆ ಬಿಸಿಸಿಐಗೆ ಧೀರ್ಘ ಪತ್ರ ಬರೆದಿದ್ದ ಈಕೆ ನನಗೆ ಬಹಳಷ್ಟು ಅವಮಾನ ಮಾಡಿದ್ದಾರೆ ಎಂದು ತಿಳಿಸಿದ್ರು..
ಈ ಎಲ್ಲ ವಿಚಾರಗಳ ಬಗ್ಗೆ ವಿಚಾರಣೆಗೆ ಹಾಜರಾದ ಕೋಚ್, ಮಿಥಾಲಿ ರಾಜ್ ಒಬ್ಬೊಂಟಿಯಾಗಿರಲು ಇಷ್ಟ ಪಡ್ತಾರೆ, ತಂಡದ ಸದಸ್ಯರೊಂದಿಗೆ ಬೆರೆಯೋದಿಲ್ಲ ಎಂದಿದ್ದಾರೆ.. ಹೀಗಾಗೆ ಇವರನ್ನ ನಿಭಾಯಿಸೋದು ಕಷ್ಟವಾಗ್ತಿದೆ.. ಇನ್ನೂ ತಂಡದಿಂದ ಕೈ ಬಿಡಲು ಯಾವುದೇ ವೈಯಕ್ತಿಕ ಕಾರಣಗಳಿಲ್ಲ, ಅವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ ಕಡಿಮೆ ಇದ್ದ ಕಾರಣದಿಂದಷ್ಟೆ ಅವರನ್ನ ಅಂದಿನ ಮ್ಯಾಚ್ ನಲ್ಲಿ ಆಡಸಿಲ್ಲ ಎಂಬುದನ್ನ ಸ್ಪಷ್ಟಪಡೆಸಿದ್ದಾರೆ..