ಇದು ಮೊಬೈಲ್ ಜಗತ್ತು…ಸ್ಮಾರ್ಟ್ ಫೋನ್ ಗಳ ಯುಗ. ಮೊಬೈಲ್ ಇಲ್ಲದೆ, ಇಂಟರ್ ನೆಟ್ ಇಲ್ಲದೆ ಜಗತ್ತೇ ಇಲ್ಲ ಅನ್ನೋ ರೀತಿಯಾಗಿದೆ.
ಆದರೆ, ನಾವು ಮೊಬೈಲ್ ಗೆ ಅಡಿಟ್ ಆಗುತ್ತಾ ಆಗುತ್ತಾ ನಮ್ಮ ಜೀವ ಮತ್ತು ಜೀವನ ಎರಡನ್ನೂ ಹಾಳು ಮಾಡಿಕೊಳ್ತಿದ್ದೀವಿ.
ಸ್ಮಾರ್ಟ್ ಫೋನ್ ಗಳನ್ನು ಅತಿಯಾಗಿ ಬಳಕೆ ಮಾಡುವ ಯುವಕರಲ್ಲಿ ಮಿದುಳಿನ ಸಾಮರ್ಥ್ಯ ಕ್ಷೀಣಿಸಲಿದೆ ಎಂಬುದು ಸಂಶೋಧನೆಯೊಂದರಿಂದ ತಿಳಿದಿದೆ.
ಜರ್ನಲ್ ಆಫ್ ದ ಅಮೆರಿಕನ್ ಮೆಡಿಕಲ್ ಅಸೋಸಿಯೇಶನ್ ಈ ಅಧ್ಯಯನವನ್ನು ನಡೆಸಿದ್ದು, ಅಧ್ಯಯನದಲ್ಲಿ ಹೆಚ್ಚಾಗಿ ಸ್ಮಾರ್ಟ್ ಫೋನ್ ಬಳಕೆ ಮಾಡುವ ಯುವಕರಲ್ಲಿ ಮಿದುಳಿನ ಸಮಸ್ಯೆಗಳು ಹೆಚ್ಚಾಗಿ ಕಂಡು ಬಂದು, ಮಿದುಳಿನ ಸಾಮರ್ಥ್ಯ ಕ್ಷೀಣಿಸಿರುವುದು ಕಂಡು ಬಂದಿದೆ.
ಸಂಶೋಧನೆಗೆ ವಿಜ್ಞಾನಿಗಳು 15-16 ವರ್ಷದ ಒಟ್ಟು 4,100 ಅರ್ಹ ವಿದ್ಯಾರ್ಥಿಗಳನ್ನು ಬಳಸಿಕೊಂಡಿದ್ದರು.