ಜಸ್ಟಿನ್ ಬೈಬರ್ ಖ್ಯಾತ ಕೆನಡಿಯನ್ ಹಾಡುಗಾರನ ವ್ಹಾಟ್ ಡೂ ಯೂ ಮೀನ್ ಎಂಬ ವೀಡಿಯೋ ಹಾಡಲ್ಲಿ ಮಿಂಚಿದ ಚೆಲುವೆ ಕ್ಸೇನಿಯಾ ದೇಲಿ,26ರ ಹರೆಯದ ಮಾಡೆಲಿಂಗ್ ಹುಡುಗಿ ಈಕೆ ಮದುವೆಯಾಗುವುದರೊಂದಿಗೆ ಸುದ್ದಿ ಮಾಡಿದ್ದಾಳೆ.ಈಕೆಯನ್ನು ಕೈಹಿಡಿದ ಆ ಸ್ಫುರದ್ರೂಪಿ ಯಾರು ಗೊತ್ತೇ? ಇವಳಿಗಿಂತ ವಯಸ್ಸಿನಲ್ಲಿ 36 ವರ್ಷ ಹಿರಿಯವನಾದ ಈಜಿಪ್ಟಿನ ಮೊಗಲ್ ವ್ಯಾಪಾರಸ್ಥ ಒಸಾಮ ಫಥಿ ರಬಾಹ ಅಲ್-ಶರೀಫ್ ಎಂಬ 62 ವಯಸ್ಸಿನ ತಾತ.ಈ ಸಂಪೂರ್ಣ ಮದುವೆ ಸಮಾರಂಭವು ಅದ್ದೊರಿಯಾಗಿ $1 ಮಿಲಿಯನ್ ವೆಚ್ಚದಲ್ಲಿ ನೆರವೇರಿತು ಎಂದು ಹೇಳಲಾಗುತ್ತಿದೆ.ಈ ಜೋಡಿ ರಿಸೆಪ್ಶನ್ ನಂದು ಕುದುರೆಯ ರಥದಲ್ಲಿ ಬಂದಿಳಿದಿದ್ದು ಇದೊಂದು ಸುಂದರವಾದ ರಾಜಕುಮಾರಿಯ ಕಥೆಯನ್ನು ನೆನಪಿಸುವಂತಿತ್ತು.
ಕನಸಿನ ಸೌಧ ಎಂದೇ ಖ್ಯಾತಿಯಾಗಿರುವ ಸಾಂಟೊ ವೈನ್ಸ್ ನಲ್ಲಿ ಸಮಾರಂಭ ಅದ್ದೂರಿಯಾಗಿ ನೆರವೇರಿತು.ಅಲ್ಲಿ ಕೇವಲ 150 ಮಂದಿ ಅತಿಥಿಗಳು ಮಾತ್ರ ಹಾಜರಿದ್ದರು ಎಂದು ತಿಳಿದು ಬಂದಿದೆ. ಜುಹೈರ್ ಮುರಾದ್ ಎಂಬವನಿಂದ ಸಿದ್ದಪಡಿಸಲ್ಪಟ್ಟಿರುವ ಉದ್ದನೆಯ ಲೇಸ್ ಗಳಿರುವ ಗವನ್ ಉಡುಪಿನಲ್ಲಿ ಕ್ಸೇನಿಯಾ ಅತ್ಯಂತ ಸುಂದರ ಪರಿಯಂತೆ ಮಿಂಚಿದಳು.ರೆಸೆಪ್ಷನ್ನಲ್ಲಿ 5 ಅಂತಸ್ತಿನ ಕೇಕನ್ನು ಸಿದ್ದಪಡಿಸಲಾಗಿತ್ತು.
ಕ್ಸೆನಿಯಾ ಅಲ್ ಶರೀಫ಼್ ಜೊತೆ ಸಂತೋಷ ಕಂಡು ಕೊಂಡಿದ್ದಾಳಂತೆ ಇದಕ್ಕಾಗಿಯೇ ಅವಳು ಅವನನ್ನು ಮದುವೆಯಾದಳು ಎಂದು ಹೇಳುತ್ತಾಳೆ.ಅವಳು ಅನೇಕ ಭಾವ ಚಿತ್ರಗಳನ್ನು ತನ್ನ ಇನ್ ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದು ಆಕೆ ಅದರಲ್ಲಿ ತನ್ನ ಪ್ರೀತಿಯ ಜೊತೆಗಾರ,ಇದೆಲ್ಲವೂ ನಿನ್ನಿಂದಲೇ ಹಾಗೂ ನಿನಗಾಗಿ ಎಂದು ಹೇಳಿದ್ದಾಳೆ.ಆ ಚಿತ್ರಗಳನ್ನು ನೀವೇ ನೋಡಿ.
2015 ರಲ್ಲಿ ಕ್ಸೇನಿಯಾಳನ್ನು ಭೇಟಿ ಮಾಡುತ್ತಿದ್ದ ಮೊಗಲ್ ಅವಳಿಗಾಗಿ ವಜ್ರ ವೈಢೂರ್ಯಗಳೆಂಬ ಉಡುಗೊರೆಯ ಹೊಳೆಯನ್ನೇ ಹರಿಸುತ್ತಿದ್ದುದ್ದಲ್ಲದೆ ಅವಳನ್ನು ಆಗಾಗ್ಗೆ ತನ್ನ ಸ್ವಂತ ಜೆಟ್ನಲ್ಲೂ ಪ್ರಯಾಣ ಮಾಡಿಸುತ್ತಿದ್ದನಂತೆ.
ಕೆಲವೊಂದು ಸುದ್ದಿಗಳ ಪ್ರಕಾರ ಆಕೆಯ ಪತಿ ಒಬ್ಬ ಮಿಲಿಯನರ್ ಅಗಿರೋ ಕಾರಣಕ್ಕಾಗಿ ಆಕೆ ಕೇವಲ ಹಣದ ಆಸೆಗಾಗಿ ಅಲ್ ಶರೀಫನನ್ನು ಮದುವೆಯಾದಳು ಎನ್ನಲಾಗುತ್ತಿದೆ. ಆದರೆ ಆಕೆ ಇದನ್ನು ಅಲ್ಲಗಳೆದಿದ್ದಾಳೆ.
- ಸ್ವರ್ಣಲತ ಭಟ್
Model Pics :
1.
2.
3.
4.
5.
6.
7.
8.
POPULAR STORIES :
ವೆಂಕಟ್ ಗೆ ಮತ್ತೆ ಹುಚ್ಚು ಹಿಡೀತಾ? ಹುಚ್ಚ ವೆಂಕಟ್ ರಮ್ಯಾಗೆ ಎನಂದ್ರು ಗೊತ್ತಾ..?
ಆಟೋ ಚಾಲಕರ ಸಾರಥ್ಯದಲ್ಲಿ …..Shankar Nag
ರೈಲು ನಿಲ್ದಾಣದಲ್ಲಿ ಪುಕ್ಕಟೆ ವೈ-ಫೈನಲ್ಲಿ ಭಾರತೀಯರು ಏನ್ ಹುಡುಕುತ್ತಾರೆ? ಗೂಗಲ್ ಬಯಲು ಮಾಡಿದ ರಹಸ್ಯ!
ಪ್ರೀತಿಸಿದ ಹುಡುಗನ ಎದೆಗೊರಗಿ ಪ್ರಾಣ ಬಿಡುವ ಮೊದಲು..!? ಅವಳು ಯಾರು? ಯಾಕಾಗಿ ಅವನನ್ನು ದೂರವಿಟ್ಟಳು..!?
ಅರೆರೆ!ಇದೇನಿದು! ವಾಟ್ಸ್ ಆ್ಯಪ್‍ಗೆ ಇತಿಶ್ರೀ ಹಾಡೋ ಕಾಲ ಬಂತೇ????
ಶುರುವಾಯ್ತು ಮತ್ತೆ ಕನ್ನಡಿಗರ ಪರ್ವ..! ಭಾರತ ಕ್ರಿಕೆಟ್‍ನಲ್ಲಿ ಮತ್ತೆ ಹಳೆ ಹುಲಿಗಳು ಘರ್ಜಿಸುತ್ತಿವೆ..!
ಭಾರತೀಯ ಕ್ರಿಕೆಟ್ ದಿಗ್ಗಜರ ಎಜುಕೇಷನಲ್ ಕ್ವಾಲಿಫಿಕೇಷನ್‍ನ ಡೀಟೇಲ್ಸ್..!
ಮನೆ ಖರೀದಿಗೆ ಲೋನ್ ಬೇಕೇ????ಎಚ್ಚರ!!!!
ಅಪಘಾತ ಆಗಿದ್ದು 2009ರಲ್ಲಿ, 50,18,979 ರೂಪಾಯಿ ಸಿಕ್ಕಿದ್ದು 2016ರಲ್ಲಿ!