ಬೆಂಗಳೂರು : ರಾಜ್ಯಕ್ಕೆ ಇದೇ ವಾರ ಪ್ರಧಾನಿ ಮೋದಿ ಆಗಮಿಸಲಿದ್ದು, ಬೆಂಗಳೂರಿನ ಎರಡು ಕಡೆಗಳಲ್ಲಿ ರೋಡ್ ಶೋ ಮತ್ತು ಒಂದು ಕಡೆ ಸಾರ್ವಜನಿಕ ಸಭೆ ಆಯೋಜನೆಗೆ ಸಿದ್ದತೆ ಮಾಡಿಕೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣದಲ್ಲಿ ತಲಾ ಒಂದೊಂದು ರೋಡ್ ಶೋ ಏರ್ಪಾಟಾಗಿದೆ. ಯಲಹಂಕ, ಹೆಬ್ಬಾಳ, ಬ್ಯಾಟರಾಯನಪುರ, ಮಲ್ಲೇಶ್ವರಂ ನಲ್ಲಿ ಒಂದು ರೋಡ್ ಶೋ ಪ್ಲಾನ್ ಇದೆ. ಚಾಮರಾಜಪೇಟೆ, ಚಿಕ್ಕಪೇಟೆ, ಜಯನಗರ ಕಡೆ ಸಹ ರೋಡ್ ಶೋ ನಡೆಸಲು ಚಿಂತನೆ ನಡೆದಿದೆ. ಒಟ್ಟು 12 ಕಿಲೋ ಮೀಟರ್ ಮೋದಿ ರೋಡ್ ಶೋ ಸಿದ್ದತೆಗೆ ಸೂಚನೆ ದೊರೆತಿದೆ.