ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ಸಿದ್ಧತೆ ನಡೆದಿದೆ. ಕೆಂಪೇಗೌಡ ಪ್ರತಿಮೆಯನ್ನು ಅನಾವರಣ ಮಾಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲು ಮೈಸೂರಿನಿಂದ ಉಡುಗೊರೆ ಸಿದ್ಧವಾಗಿದೆ.
ಪ್ರಧಾನಿ ಮೋದಿ ಮುಡಿ ಏರಲು ಕೆಂಪು ಹಾಗೂ ಚಿನ್ನದ ಬಣ್ಣಗಳ ಮಿಶ್ರಿತ ಕೆಂಪೇಗೌಡರ ಪೇಟಾ ತಯಾರಾಗಿದೆ. ಮೈಸೂರಿನ ಕಲಾವಿದ ನಂದನ್ ಬನಾರಸ್ ರೇಷ್ಮೆ ಬಟ್ಟೆಯಿಂದ ಪೇಟಾ ತಯಾರು ಮಾಡಿದ್ದಾರೆ. ಇನ್ನ ಪ್ರಧಾನಿ ಮೋದಿಗಾಗಿಯೇ ಈ ಪೇಟಾ ತಯಾರು ಮಾಡಿದ್ದು, ಕೆಂಪೇಗೌಡರ ಪ್ರತಿಮೆಯ ಪೇಟವನ್ನೇ ಹೊಲುವ ಆಗಿ ಮಾಡಿದ್ದೇನೆ ಎಂದು ಕಲಾವಿದ ನಂದನ್ ತಿಳಿಸಿದ್ದಾರೆ.