ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಉಂಟಾದ ಮಾತಿನ ಚಕಮಕಿಯಿಂದ ಜೋಡಿಗಳಿಬ್ಬರು ತಮ್ಮ ಮದುವೆಯಿಂದ ಹಿಂದೆ ಸರಿದ ಘಟನೆ ಮಹಾರಾಷ್ಟ್ರದ ಕಾನ್ಪುರದಲ್ಲಿ ನಡೆದಿದೆ. ವರ ಸ್ವಂತ ಉದ್ಯಮಿಯಾದ್ರೆ ವಧು ಸರ್ಕಾರಿ ನೌಕರಿಯಲ್ಲಿದ್ದಾರೆ. ಮದುವೆ ಮಾಡೋ ವಿಚಾರವಾಗಿ ಮಾತನಾಡಲು ದೇವಸ್ಥಾನವೊಂದರಲ್ಲಿ ಭೇಟಿಯಾದ ಜೋಡಿ ಪರಸ್ಪರ ಚರ್ಚಿಸಿ ಯಾರು ಎಷ್ಟು ಖರ್ಚು ವಹಿಸಿಕೊಳ್ಳಬೇಕು ಅನ್ನೋ ವಿಚಾರವನ್ನ ನಿರ್ಧರಿಸಿದರು.
ಸಹಜವಾಗಿ ಇಬ್ಬರ ನಡುವೆ ಮಾತುಕತೆ ಸಾಗುತ್ತಿತ್ತು. ಆದ್ರೆ ಯಾವಾಗ ದೇಶದ ಆರ್ಥಿಕ ಕುಸಿತ ವಿಷಯ ಬಂತೋ ಆಗ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯವುಂಟಾಗಿ ಅದು ತಾರಕಕ್ಕೆ ಹೋಗಿದೆ. ಆಗಿದ್ದು ಇಷ್ಟೇ ದೇಶದ ಆರ್ಥಿಕ ಕುಸಿತಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಕಾರಣ ಎಂದು ಯುವತಿ ಹೇಳಿದಳು. ಆದ್ರೆ ವರ ಮೋದಿಯ ಕಟ್ಟಾ ಅಭಿಮಾನಿ ಇದಕ್ಕೆ ವಿರೋಧ ವ್ಯಕ್ತ ಪಡಿಸಿದ್ದಾನೆ. ಹೀಗಾಗಿ ಇಬ್ಬರ ಮಧ್ಯೆ ಚರ್ಚೆ, ವಾಗ್ವಾದ ನಡೆಯಿತು.
ಕೊನೆಗೆ ಇಬ್ಬರೂ ದೂರವಾಗಲು ನಿರ್ಧರಿಸಿದ್ದಾರೆ. ಒಟ್ಟಾರೆ ಮೋದಿ ಮುರಿದ ಮದುವೆ ಇದಾಗಿದೆ. ಪ್ರಧಾನಿ ಮೋದಿ ವಿಚಾರಕ್ಕೆ ಸಂಬಂಧ ಪಟ್ಟಂತೆ ಉಂಟಾದ ಜಗಳ ಮದುವೆ ಮುರಿಲಿಕ್ಕೂ ಕಾರಣವಾಗಿರೋದು ವಿಪರ್ಯಾಸವೇ ಸರಿ…
- ಶ್ರೀ
POPULAR STORIES :
ಚಿತೆಯಲ್ಲಿ ಮಲಗಿದ್ದ ವ್ಯಕ್ತಿ ಮತ್ತೆ ಜೀವಂತವಾದ..??
ಪಾಪಿಗಳು ಅಟ್ಟಹಾಸ ಮೆರೆದ ವಿಪರ್ಯಾಸದ ರಿಯಲ್ ಸ್ಟೋರಿ..!
ಕೋಹ್ಲಿ ಪ್ರಕಾರ ಪರ್ಫೆಕ್ಟ್ ಟೆಸ್ಟ್ ಬೌಲರ್ ಯಾರು?
ನಾಯಿಯನ್ನು ಟೆರೆಸ್ ಮೇಲಿನಿಂದ ಎಸೆದ ಮೃಗ ಯಾರು ಗೊತ್ತಾ..?
ಕುಂಬ್ಳೆ ಸವಾಲು ಗೆದ್ದ ಒಬ್ಬನೇ ಒಬ್ಬ ಆಟಗಾರ ಯಾರು? ವಿರಾಟ್ ಕೋಹ್ಲಿಯೇ ಗೆಲ್ಲದ ಸವಾಲು ಗೆದ್ದ ಯುವ ಆಟಗಾರ..!