ಸುಮಾರು 10 ಕೋಟಿ ರೂ ವೆಚ್ಚದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೇವಾಲಯ ನಿರ್ಮಾಣವಾಗಲಿದೆ! ಈ ದೇವಾಲಯದ ಆವರಣದಲ್ಲಿ 100 ಅಡಿ ಎತ್ತರದ ಮೋದಿ ಪ್ರತಿಮೆ ಅನಾವರಣ ಆಗಲಿದೆ. ಗರ್ಭಗುಡಿಯಲ್ಲೂ ಮೋದಿ ಪ್ರತಿಮೆ ಕಂಗೊಳಿಸಲಿದೆ!
ಉತ್ತರ ಪ್ರದೇಶದ ನೀರಾವರಿ ಇಲಾಖೆ ನಿವೃತ್ತ ಸಹಾಯಕ ಇಂಜಿನಿಯರ್ ಜೆ.ಪಿ ಸಿಂಗ್ ಈಗ ಮೋದಿ ದೇವಾಲಯ ನಿರ್ಮಾಣಕ್ಕೆ ಮುಂದಾಗಿರುವವರು. ಮೀರತ್‍ನ ಸಾರ್ಧಾನಾ ಪ್ರದೇಶದಲ್ಲಿ ಈ ದೇವಾಲಯ ನಿರ್ಮಾಣಕ್ಕೆ ಮುಂದಾಗಿರುವ ಇವರು, ದೇವಾಲಯದ ಆವರಣದಲ್ಲಿ 100 ಅಡಿ ಮೋದಿ ಪ್ರತಿಮೆಯನ್ನಿರಸಲಾಗುವುದು. ಗರ್ಭಗುಡಿಯಲ್ಲೂ ಇವರ ಪ್ರತಿಮೆ ಸ್ಥಾಪಿಸಲು ಚಿಂತನೆ ನಡೆಸುವುದಾಗಿ ಹೇಳಿದ್ದಾರೆ.
ಈಗಾಗಲೇ 5 ಎಕರೆ ಜಾಗ ಖರೀಧಿಸಿದ್ದು, ಅಕ್ಟೋಬರ್ 23ರಂದು ದೇವಾಲಯ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗುವುದು. ಎರಡು ವರ್ಷಗಳ ಅವಧಿಯಲ್ಲಿ ಇದನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದ್ದು, ಸುಮಾರು 10 ಕೋಟಿ ವೆಚ್ಚದಲ್ಲಿ ದೇವಾಲಯ ನಿರ್ಮಾಣವಾಗಲಿದೆ ಎಂದು ತಿಳಿಸಿದ್ದಾರೆ.
2015ರಲ್ಲಿ ನರೇಂದ್ರ ಮೋದಿ ಅವರ ಮೊದಲ ದೇವಾಲಯ ನಿರ್ಮಿಸಲಾಗಿತ್ತು. ಇದಕ್ಕೆ ಮೋದಿ ಅಸಮಧಾನ ವ್ಯಕ್ತಪಡಿಸಿದ್ದರು. ಬಳಿಕ ಇದನ್ನು ನೆಲಸಮ ಮಾಡಲಾಗಿತ್ತು.