ವಾರಣಾಸಿಯಲ್ಲಿ ಸ್ಥಳೀಯ ಚುನಾವಣಾ ಪ್ರಚಾರ ದಿನದಿಂದ ದಿನಕ್ಕೆ ರಂಗೇರ ತೊಡಗಿದೆ. ಎಲ್ಲಾ ಪಕ್ಷದ ಕಾರ್ಯಕರ್ತರು ಹಾಗೂ ಅಭ್ಯರ್ಥಿಗಳು ವಾರಣಾಸಿ ಚುನಾವಣಾ ಮತಯಾಚನೆಯಲ್ಲಿ ಫುಲ್ ಬ್ಯುಸಿಯಾಗಿ ಹೋಗಿದ್ದಾರೆ. ಅದೇ ರೀತಿಯಾಗಿ ಈ ಪ್ರದೇಶದಲ್ಲಿ ತಮ್ಮ ಪಕ್ಷ ಗೆಲ್ಲಲೇ ಬೇಕು ಎಂದು ಅಬ್ಬರದ ಚುನಾವಣಾ ಪ್ರಚಾರವೂ ಕೂಡ ಮುಂದುವರಿತಾ ಇದೆ. ಇದರ ಜೊತೆಯಲ್ಲಿ ಕೆಲವೊಂದು ಸ್ವಾರಸ್ಯಕರ ಘಟನೆಗಳು ನಡೆದು ಹೋಗಿವೆ..! ಅಂತಹ ಘಟನೆಗಳಲ್ಲಿ ಪ್ರಧಾನಿ ಮೋದಿ ತಂದ ಊಟದ ಬುತ್ತಿಯೂ ಒಂದು..! ಹೌದು.. ಭಾರತದ ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯಲ್ಲಿ ನಡೆದ ಸಾರ್ವಜನಿಕ ಸಭೆಗೆ ಹಾಜರಾಗುವಾಗ ಕೈಯಲ್ಲಿ ಊಟದ ಬುತ್ತಿಯನ್ನೂ ತಂದಿದ್ದರು. ಸಾರ್ವಜನಿಕ ಸಭೆ ಮುಗಿದ ಕೂಡಲೆ ತಾವು ಮನೆಯಿಂದ ತಂದ ಊಟವನ್ನೇ ತಮ್ಮ ಕಾರ್ಯಕರ್ತರ ಜೊತೆಗೂಡಿ ಸವಿದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮೋದಿ ನಾನೂ ಸಹ ಪಕ್ಷದ ಕಾರ್ಯಕರ್ತರಲ್ಲಿ ಒಬ್ಬ. ಸಭೆಗೆ ಆಗಮಿಸುವಾಗ ಕಾರ್ಯಕರ್ತರೆಲ್ಲರೂ ಮನೆಯಿಂದಲೇ ಊಟ ತರಬೇಕು ಎಂದು ಹೇಳಲಾಗಿತ್ತು. ಹೀಗಾಗಿ ನಾನೂ ಸಹ ಬುತ್ತಿ ತಂದಿದ್ದೇನೆ ಎಂದು ಹೇಳಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡ್ತಾ ಇದೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಇನ್ಮುಂದೆ ಕಾರು ಖರೀದಿಸೋದು ಅಷ್ಟೊಂದು ಸುಲಭವಲ್ಲ..!
ತನ್ನ ಸೆಕ್ಸ್ ಸಿಡಿ ಪ್ರಸಾರ ಮಾಡದಂತೆ ಕೋರ್ಟ್ ಮೊರೆ ಹೋದ ಜೆ.ಟಿ ಪಾಟೀಲ..!
ಸದ್ಯದಲ್ಲೇ ಇಬ್ಬರು ರಾಜಕೀಯ ವ್ಯಕ್ತಿಗಳ ಸಿ.ಡಿ. ರಿಲೀಸ್ : ರಾಜಶೇಖರ ಮುಲಾಲಿ
ಸೀರೆ ಕೊಳ್ಳೋಕೆ ಮುಗಿ ಬಿದ್ರು ಜನ..! ಸೀರೆಯ ಬೆಲೆ ಕೇವಲ 1. ರೂಪಾಯಿ ಮಾತ್ರ..!
ಸತ್ತ ವ್ಯಕ್ತಿಯ ಶವ ಸಂಸ್ಕಾರಕ್ಕೆ ನೀಡ್ತಾ ಇಲ್ಲ ಒಂದಿಡಿ ಜಾಗ..?
ಕನ್ನಡಿಗರಿಗಿಲ್ಲಿದೆ ಶುಭ ಸುದ್ದಿ: ಖಾಸಗಿ ವಲಯದಲ್ಲಿ ಕನ್ನಡಿಗರಿಗೂ ಮೀಸಲಾತಿ