ನಿಶ್ಚಯ ಆಗಿದ್ದ ಎಷ್ಟೋ ಮದುವೆಗಳು ನಾನಾ ಕಾರಣಗಳಿಂದ ಮುರಿದು ಬಿದ್ದಿರೋದ್ ನಿಮಗೆ ಗೊತ್ತಿದೆ..! ಆದ್ರೆ, ಈ ಮದುವೆ ಮುರಿದು ಬಿದ್ದ ರೀತಿಯಲ್ಲಿ ಯಾವ ಮದುವೆಯೂ ಮುರಿದು ಬಿದ್ದಿಲ್ಲವೇನೋ..? ಈ ಮದುವೆ ಏಕೆ ನಿಂತೋಯ್ತು ಅನ್ನೋದನ್ನು ಕೇಳಿದ್ರಿ ಆಶ್ಚರ್ಯ ಆಗುತ್ತೆ..! ಅಷ್ಟೇಅಲ್ಲ ನಗಬೇಕೋ, ಅಳಬೇಕೋ ಗೊತ್ತಾಗಲ್ಲ..!
ನೀವು ನಂಬ್ತೀರಾ..? ಮೊಗ್ಗಿನ ಜಡೆಯೇ ಮದುವೆ ನಿಲ್ಲಲು ಕಾರಣವಾಗಿದೆ..! ಅಚ್ಚರಿಯಾದ್ರೂ ಇದು ಸತ್ಯ..! ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಭೀಮಾಕನಹಳ್ಳಿಯ ಗುಂಡಾಂಜನೇಯಸ್ವಾಮಿ ದೇವಾಲಯದ ಬಳಿಯ ಕೋಟೆ ನಾರಾಯಣ ಕಲ್ಯಾಣ ಮಂಟಪದಲ್ಲಿ ನಿನ್ನೆ ಒಂದು ಮದುವೆ ನಡೆಯಬೇಕಿತ್ತು. ಹಿಂದಿನ ದಿನ ರಾತ್ರಿ ಆರತಕ್ಷತೆ ಕಾರ್ಯಕ್ರಮವೂ ನಡೆದಿತ್ತು. ಬೆಳಗ್ಗೆ ಮದುವೆಯ ತಯಾರಿ ಜೋರಾಗಿತ್ತು..! ಈ ವೇಳೆ ವಧುವಿನ ಮೊಗ್ಗಿನ ಜಡೆಯ ಬಗ್ಗೆ ಕಾಮೆಂಟ್ ಮಾಡಿದ್ರು ವರನ ಕಡೆಯವರು. ಬೇರೆ ಬೇರೆ ಹೂವುಗಳನ್ನು ಹಾಕಿ ಜಡೆ ಮಾಡಿದ್ದಾರೆ. ಇದು ಸರಿ ಇಲ್ಲ ಅಂದ್ರಂತೆ..! ಅಷ್ಟಕ್ಕೇ ವಧುವಿನ ಕಡೆಯವರಿಗೆ ಬೇಜಾರಾಗಿದೆ. ವಧುವಿನ ಜೊತೆ ಆಕೆಯ ಕುಟುಂಬಸ್ಥರು ಹಾಗೂ ಸಂಂಬಧಿಕರೆಲ್ಲರೂ ಹೊರಟು ಹೋಗಿದ್ದಾರೆ..! ಅಲ್ಲಿಗೆ ಮದುವೆ ಮುರಿದು ಬಿದ್ದಿದೆ..! ಛತ್ರದಲ್ಲೇ ವರನಿಗೆ ಮತ್ತೊಂದು ಹುಡುಗಿಯನ್ನು ಹುಡುಕಿ ಮದುವೆ ಮಾಡೋ ವಿಫಲ ಪ್ರಯತ್ನವೂ ನಡೀತಂತೆ..!