ದೆಹಲಿಯ ಲಲಿತಾ ಪಾರ್ಕ್ ಮೈದಾನದಲ್ಲಿ ಮಂಗಳವಾರ ರನ್‍ಗಳ ಹೊಳೆಯೇ ಹರಿಯಿತು.. ಸಾಮಾನ್ಯ ಲಾರಿ ಡ್ರೈವರ್ ಮಗನಾದ 21ರ ಹರೆಯದ ಮೋಹಿತ್ ತನ್ನ ಬ್ಯಾಟ್‍ನಿಂದ ರನ್‍ಗಳ ಹೊಳೆಯನ್ನೆ ಹರಿಸಿದ್ದ. ಕ್ರೀಸ್‍ನಲ್ಲಿ ಕೆಲವೇ ಗಂಟೆಗಳು ಮಾತ್ರ ಸ್ಟಾಂಡ್ ಆಗಿ ನಿಂತಿದ್ರೂ ಕೂಡ ಮೋಹಿತ್ ಸಿಡಿಸಿದ ರನ್ ಮಾತ್ರ ಬೃಹತ್ ಮೊತ್ತದಾಗಿತ್ತು. ಟಿ-20 ಪಂದ್ಯಾವಳಿಯ 120 ಎಸೆತದಲ್ಲಿ ಕೇವಲ 72 ಎಸೆತಗಳನ್ನು ಮಾತ್ರ ಆಡಿತ ಮೋಹಿತ್ ಬರೋಬ್ಬರಿ 300 ರನ್ ಕಲೆಹಾಕುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾನೆ. ಈ ಮೂಲಕ ಭಾರತ ಕ್ರಿಕೆಟ್ ಇತಿಹಾಸ ಮಾತ್ರವಲ್ಲ ಇಡೀ ವಿಶ್ವದ ಇತಿಹಾಸದಲ್ಲೆ ಇಂತಹದೊಂದು ಮಹಾನ್ ಸಾಧನೆ ಯಾವೊಬ್ಬ ಆಟಗಾರನೂ ಮಾಡಿರಲಿಲ್ಲ. ಈ ಹಿಂದೆ ಟಿ-20 ಪಂದ್ಯದಲ್ಲಿ ಗರಿಷ್ಠ 175 ರನ್ ಗಳಿಸಿದ್ದ ಕ್ರಿಸ್‍ಗೇಲ್ ಇಲ್ಲಿಯವರೆಗಿನ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ ಎಂಬ ಬಿರುದು ಹೊಂದಿದ್ರು. ಆದ್ರೆ ಗೇಲ್ ಅವರ ದಾಖಲೆಯನ್ನ ಧೂಳಿಪಟ ಮಾಡಿದ್ದಾರೆ ದೆಹಲಿ ಮೂಲದ ಮೋಹಿತ್. ಸ್ಥಳೀಯ ಫ್ರೆಂಡ್ಸ್ ಪ್ರೀಮಿಯರ್ ಲೀಗ್ ಎಂಬ ಟೂರ್ನಿಯಲ್ಲಿ ಮಾವಿ ಇಲವೆನ್ಸ್ ಪರ ಕಣಕ್ಕಿಳಿದ ಮೋಹಿತ್ ಪ್ರೆಂಡ್ಸ್ ಇಲವೆನ್ ವಿರುದ್ದ ಈ ದಾಖಲೆಯನ್ನು ನಿರ್ಮಿಸಿದ್ದಾನೆ. ಅಮೋಘ 300 ರನ್‍ಗಳಲ್ಲಿ ಕೇವಲ 14 ಬೌಂಡರಿಗಳು ಮಾತ್ರ ಇದ್ದರೆ ಬರೋಬ್ಬರಿ 39 ಸಿಕ್ಸರ್‍ಗಳಿದ್ದವು..! ಈ ಮೂಲಕ ಟಿ-20 ಪಂದ್ಯದಲ್ಲಿ ತ್ರಿಶತಕ ಬಾರಿಸಿ ವಿಶ್ವದ ಏಕೈಕ ಬ್ಯಾಟ್ಸ್ ಮನ್ ಎಂಬ ಸಾಧನೆಯನ್ನು ಮೋಹಿತ್ ಅವರ ಹೆಸರಿನಲ್ಲಿದೆ. ವಿಶೇಷ ಅಂದ್ರೆ ಮೋಹಿತ್ 290 ರನ್ನುಗಳನ್ನು ಕೇವಲ ಬೌಂಡರಿ ಸಿಕ್ಸರ್‍ಗಳಿಂದಲೆ ಕಲೆ ಹಾಕಿದ್ದಾನೆ.
ಅಪ್ಪ ಲಾರಿ ಡ್ರೈವರ್..!
ಮೂಲತಃ ಹರಿಯಾಣ ಮೂಲದವನಾದ ಮೋಹಿತ್ ಅವರ ತಂದೆ ಓರ್ವ ಸಾಮಾನ್ಯ ಟ್ರಕ್ ಡ್ರೈವರ್. ತಾಯಿ ಶಾಲೆಯೊಂದರಲ್ಲಿ ಟೀಚರ್. ಬಡತನದ ನಡುವೆಯೂ ಮಗನಲ್ಲಿರುವ ಕ್ರಿಕೆಟ್ ಕ್ರೇಜ್ ಕಂಡು ತಂದೆ ಗೌತಮ್ ಗಂಭೀರ್ ಕೋಚ್ ಸಂಜಯ್ ಭಾರದ್ವಾಜ್ ಅವರ ಮಾರ್ಗದರ್ಶನದಲ್ಲಿ ಬೆಳೆಸಿದ್ದರು. ಮೋಹಿತ್ ಹಣಕಾಸಿನ ಪರಿಸ್ಥಿತಿಯನ್ನರಿತ ಭಾರದ್ವಾಜ್ ಮೋಹಿತ್ ಅವರನ್ನು ತಮ್ಮ ಅಕಾಡೆಮಿಯಲ್ಲೆ ವಸತಿ ವ್ಯವಸ್ಥೆ ಕಲ್ಪಿಸಿದ್ದರು.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಈ ನಟನ ಪ್ರತಿ ತಿಂಗಳ ಖರ್ಚು 13.5 ಕೋಟಿ ಅಂತೆ
ತಮಿಳಿನ ಪೂಜೈ ರಿಮೇಕ್ ಚಿತ್ರದಲ್ಲಿ ಪುನೀತ್ ಹೀರೋ.
ಸತ್ರೂ ಲವ್ ಮ್ಯಾರೇಜ್ ಆಗಲ್ವಂತೆ ಈ ನಟಿ.
ಹಳ್ಳಿಡಾಕ್ಟ್ರು – ಇವರಿಂದಲೇ ಹಳ್ಳಿಯ ಸೊಗಡು ಇನ್ನು ಉಳಿದಿರೋದು.
ವಿಷ್ಣುದಾದರಿಂದ ಸೂಪರ್‍ಸ್ಟಾರ್ ಆದ್ರಂತೆ ಈ ನಟ..!
ಮ್ಯಾಟ್ರಿಮೋನಿ ವೆಬ್‍ಸೈಟ್‍ಗಳಲ್ಲಿ ನಂಬರ್ ಕೊಡೋಕು ಮುನ್ನ ಈ ಸ್ಟೋರಿನ ಮಿಸ್ ಮಾಡ್ದೆ ಓದಿ