No menu items!
3.2 C
Munich
Friday, April 24, 2026

ಸೆಲ್ಫಿಗಾಗಿ ಈ ಇಬ್ಬರು ಪುಂಡರು ಮಾಡಿದ ಕೆಲಸ ಏನ್ ಗೊತ್ತಾ..?

Must read

ಈಗಂತೂ ಯುವಕ ಯುವತಿಯರಿಗ ಸೆಲ್ಫಿ ತಗೋಬೇಕು ಅಂದ್ರೆ ಅದೊಂತರ ಹುಚ್ಚು. ವಿಧ ವಿಧದ ಭಂಗಿಯಲ್ಲಿ ವಿಭಿನ್ನ ಮುಖ ಭಾವಕ್ಕೆ ತಕ್ಕಂತೆ ಸೆಲ್ಫಿ ತಕ್ಕೊಂಡು ಅದನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡ್ತಾರೆ. ಇಷ್ಟೆ ಆಗಿದ್ರೆ ಏನೊ ಪರವಾಗಿಲ್ಲ ಅನ್ಬೋದು ಆದ್ರೆ ಇಲ್ಲಿಬ್ಬರು ಯುವಕರು ಯಾರೂ ಆಲೋಚನೆ ಮಾಡಿಕೊಳ್ಳಲಾಗದ ರೀತಿಯಲ್ಲಿ ಸೆಲ್ಫಿ ಫೋಟೋ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾರೆ. ಈ ಫೋಟೋ ಕಂಡ ಜನರು ಇಬ್ಬರ ವಿರುದ್ದ ವ್ಯಾಪಕ ಆಕ್ರೋಶಗೊಂಡಿದ್ದಾರೆ. ಅಷ್ಟಕ್ಕೂ ಈ ಇಬ್ಬರು ಮಾಡಿದ ಘನಂದಾರಿ ಕೆಲ್ಸವಾದ್ರೂ ಏನು ಅನ್ನೋದು ನಿಮ್ಗೂ ಗೊತ್ತಾದ್ರೆ ನೀವು ಕೂಡ ಹಿಡಿ ಶಾಪ ಹಾಕ್ದೆ ಇರೋದಿಲ್ಲ. ಯಾಕಂದ್ರೆ ಈ ನೀಚ ಯುವಕರು ಸೆಲ್ಫಿ ಗೀಳಿಗಾಗಿ ಅಮಾಯಕ ನಾಯಿಯ ಕಿವಿಯನ್ನೆ ಕತ್ತರಿಸಿ ತಮ್ಮ ರಾಕ್ಷಸತನವನ್ನ ತೋರ್ಸಿದ್ದಾರೆ.. ಟರ್ಕಿ ದೇಶದ ಇಸ್ಪಾಟ ನಗರದ ಈ ಇಬ್ಬರು ಯುವಕರು ಮೂಕ ಪ್ರಾಣಿಯ ಎರಡು ಕಿವಿಗಳನ್ನು ಕತ್ತರಿಸಿದ್ದಲ್ಲದೆ, ನಾಯಿಯ ಕಿವಿಯನ್ನು ಇಡ್ಕೊಂಡು ಪೋಸು ಕೊಟ್ಟಿದ್ದಾರೆ ಪಾಪಿಗಳು. ಈ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಇವರುಗಳ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ನಾಯಿಯ ಕಿವಿ ಕತ್ತರಿಸಿದ ಆರೋಪದಡಿ ಈ ಇಬ್ಬರ ವಿರುದ್ದ 4404 ಲಿರಾ (1150ಡಾಲರ್) ದಂಡ ವಿಧಿಸಲಾಗಿದ್ದು ದಂಡದ ಜೊತೆ ಜೈಲು ಶಿಕ್ಷೆಯೂ ನೀಡ್ಬೇಕು ಎಂಬ ಕೂಗು ಎಲ್ಲೆಡೆ ಕೇಳಿ ಬರ್ತಾ ಇದೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಈ ನಟನ ಪ್ರತಿ ತಿಂಗಳ ಖರ್ಚು 13.5 ಕೋಟಿ ಅಂತೆ

ತಮಿಳಿನ ಪೂಜೈ ರಿಮೇಕ್ ಚಿತ್ರದಲ್ಲಿ ಪುನೀತ್ ಹೀರೋ.

ಸತ್ರೂ ಲವ್ ಮ್ಯಾರೇಜ್ ಆಗಲ್ವಂತೆ ಈ ನಟಿ.

ಹಳ್ಳಿಡಾಕ್ಟ್ರು – ಇವರಿಂದಲೇ ಹಳ್ಳಿಯ ಸೊಗಡು ಇನ್ನು ಉಳಿದಿರೋದು.

ವಿಷ್ಣುದಾದರಿಂದ ಸೂಪರ್‍ಸ್ಟಾರ್ ಆದ್ರಂತೆ ಈ ನಟ..!

ಮ್ಯಾಟ್ರಿಮೋನಿ ವೆಬ್‍ಸೈಟ್‍ಗಳಲ್ಲಿ ನಂಬರ್ ಕೊಡೋಕು ಮುನ್ನ ಈ ಸ್ಟೋರಿನ ಮಿಸ್ ಮಾಡ್ದೆ ಓದಿ

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article