ಮನಿ ಪ್ಲಾಂಟ್ ಮನೆಗೆ ಸೊಬಗೋ ಮನಿಯ ಸಂಕೇತವೋ???

Date:

ಮನಿ ಪ್ಲಾಂಟ್ ಗಿಡದ ಬಗ್ಗೆ ತಿಳಿಯದ ವ್ಯಕ್ತಿಗಳಿಲ್ಲ, ಮನೆಯ ಒಳಾಂಗಣ ಹಾಗೂ ಹೊರಾಂಗಣ ವಿನ್ಯಾಸಕ್ಕಾಗಿ ಸಾಮಾನ್ಯವಾಗಿ ಇದನ್ನು ಬೆಳೆಸುತ್ತಾರೆ. ಆದರೆ ಇದು ಸಂಪತ್ತು, ಆರೋಗ್ಯ, ಅದೃಷ್ಟ ಹಾಗೂ ಯಶಸ್ಸನ್ನು ಹೊತ್ತು ತರೋ ಲಕ್ಕಿ ಪ್ಲಾಂಟ್ ಎಂಬುದಾಗಿಯೂ ಫೆಂಗ್ ಶುಯಿ ಶಾಸ್ತ್ರ ಹೇಳುತ್ತದೆ. ಇದನ್ನು ಮಲಬಾರ್ ಚೆಸ್ಟ್ನಟ್ ಅಥವಾ ಸಾಬಾ ನಟ್ ಎಂದೂ ಹೇಳಲಾಗುತ್ತದೆ, ಇದರ ಬಗೆಗಿನ ಕೆಲವೊಂದು ಸತ್ಯಗಳು ಇಲ್ಲಿವೆ ನೋಡಿ.

ದಟ್ಟವಾಗಿ ಬೆಳೆಸುವುದಾದಲ್ಲಿ ಮನಿ ಪ್ಲಾಂಟ್ ಸಾಧಾರಣವಾಗಿ 50-60 ಫೀಟ್ ಎತ್ತರ ಬೆಳೆಯಬಲ್ಲುದು,ಆದರೆ ಸಣ್ಣ ಸಣ್ಣ ಕುಂಡಗಳಲ್ಲಿ ನೀವು ಬೆಳೆಸಿದಲ್ಲಿ ಇದು ಕೇವಲ 10-15 ಫೀಟ್ ಎತ್ತರಕ್ಕಷ್ಟೇ ಏರಬಲ್ಲುದು. ಇದೊಂದು ಕುತೂಹಲಕಾರಿ ವಿಷ್ಯಗಳಲ್ಲೊಂದು.

ಇದರ ಪ್ರತೀ ಕವಲುಗಳಲ್ಲಿ ಐದು ಎಲೆಗಳಿದ್ದು ಇದು ಸಾಧಾರಣವಾಗಿ 12 ಇಂಚ್ ಉದ್ದ ಬೆಳೆಯುತ್ತದೆ, ಹಾಗೂ ಇವುಗಳು ಶುಭ್ರ ಹಸಿರು ಬಣ್ಣದಲ್ಲಿದ್ದು ಹೊಳೆಯುವಂತಿರುತ್ತದೆ.

ಮನಿ ಪ್ಲಾಂಟ್ ನ ಕೆನೆ ಬಣ್ಣದ ಹೂವುಗಳು ಗಾಢ ಸುಗಂಧವನ್ನು ಹೊಂದಿದ್ದು, ಇವುಗಳು ಈ ಕಾರಣಕ್ಕಾಗಿಯೇ ದುಂಬಿಗಳು, ಬಾವಲಿಗಳು ಹಾಗೂ ಚಿಟ್ಟೆಗಳನ್ನು ತನ್ನೆಡೆಗೆ ಸೆಳೆಯುತ್ತವಂತೆ.
ಇನ್ನೂ ಒಂದು ಆಶ್ಚರ್ಯಕರ ಸಂಗತಿ ಏನೆಂದರೆ ಇದಕ್ಕೆ ಬೀಜಗಳೂ ಇವೆಯಂತೆ, ಸಾಮಾನ್ಯವಾಗಿ ನಮಗೆ ಈ ಬೀಜಗಳು ಕಾಣಸಿಗದಿದ್ದರೂ ಸಹಾ, ಇವುಗಳು ಬೀಜಕೋಶದ ಒಳಗೆ ಬೆಳೆಯುತ್ತವೆ ಹಾಗೂ ಕ್ರಮೇಣ ಬೆಳೆಯುತ್ತಾ ಹೋಗಿ ಒಡೆದು ನೆಲಕ್ಕೆ ಬೀಳುತ್ತದಂತೆ.

ಫೆಂಗ್ ಶುಯಿ ಶಾಸ್ತ್ರದಂತೆ, ಇವುಗಳಲ್ಲಿರೋ 5 ಎಲೆಗಳು 5 ಸಂಕೇತವನ್ನು ಸೂಚಿಸುತ್ತದಂತೆ, ಅವು ಆಕಾಶ, ಗಾಳಿ, ನೀರು, ಬೆಂಕಿ ಹಾಗೂ ಭೂಮಿಯಂತೆ ಎಂದೂ ಹೇಳಲಾಗುತ್ತದೆ, ಆದ ಕಾರಣ ಈ ಸಂಕೇತವನ್ನು ಹೊಂದಿದ ಮನಿ ಪ್ಲಾಂಟ್ ಇದರ ಒಡೆಯನಿಗೆ ಯಶಸ್ಸು ಹಾಗೂ ಸಂತೋಷವನ್ನು ನೀಡುತ್ತದಂತೆ.
ಇನ್ನೂ ಒಂದು ಆಶ್ಚರ್ಯಕರವಾದ ವಿಷ್ಯವೇನೆಂದರೆ, ಇದರ ತಾಜಾ ಎಲೆಗಳನ್ನು ಆಹಾರವಾಗಿಯೂ ಬಳಸುತ್ತಾರಂತೆ, ಎಲೆಗಳನ್ನು ತರಕಾರಿಗಳಾಗಿಯೂ ಹಾಗೂ ಅಡುಗೆಯಲ್ಲಿ ಉಪಯೋಗಿಸುವ ಒಂದು ವಿಧದ ಪದಾರ್ಥವಾಗಿಯೂ ಬಳಸುವುದುಂಟಂತೆ. ಇದಲ್ಲದೆ ಇದರ ಬೀಜಗಳೂ ಸಹಾ ಶೇಂಗಾ ಬೀಜದ ರುಚಿಯನ್ನು ಹೊಂದಿದ್ದು, ಇದನ್ನು ಹುರಿದು ತಿಂಡಿಯಂತೆ ಸವಿಯಲಾಗುತ್ತದಂತೆ. ಹಾಗೂ ಬೀಜವನ್ನು ಹುಡಿ ಮಾಡಿ ಇದನ್ನು ಬೇಕಿಂಗ್ ತಿಂಡಿಗಳಲ್ಲಿ ಹಿಟ್ಟಿನಂತೆ ಬಳಸಲಾಗುತ್ತದಂತೆ.

  • ಸ್ವರ್ಣಲತ ಭಟ್

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಈ ವಾರ ಮಂತ್ರಿಮಾಲ್‍ನಲ್ಲಿಲ್ಲ ವೀಕೆಂಡ್ ಮಸ್ತಿ. ಇನ್ನೆಷ್ಟು ದಿನ ಮಂತ್ರಿ ಮಾಲ್ ಬಂದ್..?

ವಿಕೃತ ಕಾಮುಕ: 14 ವರ್ಷದಲ್ಲಿ 700 ರೇಪ್..!

ಸನ್ನಿ ಜೊತೆ ಸೆಲ್ಫಿ ಬೇಕಾ..? ಹಾಗಾದ್ರೆ ನೀವ್ ಮಾಡ್ಬೇಕಾದದ್ದು ಇಷ್ಟೆ..!

ಬಿಗ್‍ಬಾಸ್ ಮನೆಯಲ್ಲಿ ಕಲ್ಯಾಣ ಭಾಗ್ಯ..!

ತನ್ನ ಮುಂದೆ ನಗ್ನವಾಗಿ ಸ್ನಾನ ಮಾಡುವಂತೆ ಪೀಡಿಸುತ್ತಿದ್ದ ಕಾಮುಕ ಶಿಕ್ಷಕ ಅರೆಸ್ಟ್

2016ರಲ್ಲಿ ಸಾಮಾನ್ಯವಾಗಿ ಬಳಕೆಯಾದ ಪಾಸ್‍ವರ್ಡ್ ಯಾವುದು ಗೊತ್ತಾ.?

ವಿಶ್ವದ ಅರ್ಧದಷ್ಟು ಸಂಪತ್ತು ಈ ಎಂಟು ಜನರ ಪಾಲು..!!

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...