ಮಳೆಗಾಲದಲ್ಲಿ ತ್ವಚೆಯ ರಕ್ಷಣೆಗೆ ಮನೆಮದ್ದು..

1
318

ಮಳೆಗಾಲದಲ್ಲಿ ರೋಗ ರುಜಿನಗಳು ನಮ್ಮನು ಆವರಿಸಿಕೊಳ್ಳುತ್ತವೆ. ಇದರ ಜೊತೆಗೆ ಚರ್ಮದ ಸಮಸ್ಯೆಗಳು ಹೆಚ್ಚಾಗುತ್ತವೆ. ಜೊತೆಗೆ ನಾವು ಬಳಸುವ ರಾಸಾಯನಿಕ ವಸ್ತುಗಳು ಸಹ ಮತ್ತಷ್ಯ ಸಮಸ್ಯೆ ತಂದೊಡ್ಡುತ್ತವೆ. ಹೀಗಾಗಿ ರಾಸಾಯನಿಕ ಸೌಂದರ್ಯ ವರ್ಧಕಗಳನ್ನು ಕಡಿಮೆ ಮಾಡಿ, ನೈಸರ್ಗಿಕ ವಿಧಾನದಿಂದ‌ ನಮ್ಮ ತ್ವಚೆಯನ್ನು ರಕ್ಷಿಸಿಕೊಳ್ಳಬಹುದು. ಆಯಾಯ ಋತುವಿಗೆ ಅನುಸಾರವಾಗಿ ನಿಮ್ಮ ಸೌಂದರ್ಯದ ರಕ್ಷಣೆ ಮಾಡುವುದು ಒಳಿತು.

ಮಳೆಗಾಲದಲ್ಲಿ ನಮ್ಮ ತ್ವಚೆ ಬೇಗ ಕಳೆಗುಂದುವುದು.
ತ್ವಚೆಗೆ ಬಳಸುವ ಸೌಂದರ್ಯವರ್ಧಕ ಸಾಮಾಗ್ರಿಗಳು ನೀರಿನ ಹಾನಿಗೆ ಒಳಪಟ್ಟಾಗ ಇದು ಕೂಡ ದುಷ್ಪರಿಣಾಮಗಳನ್ನು ಬೀರಬಹುದು. ಆದರೆ ಇದಕ್ಕೆಲ್ಲಾ ಚಿಂತೆ ಮಾಡುವ ಅಗತ್ಯವೇ ಇಲ್ಲ. ಮನೆಯಲ್ಲೇ ಸುಲಭವಾಗಿ ಸಿಗುವ ಸಾಮಾಗ್ರಿ ಬಳಸಿ, ನಮ್ಮ ತ್ವಚೆಯನ್ನು ಕಾಪಾಡಿಕೊಳ್ಳಬಹುದು.

ಮಳೆಗಾಲದಲ್ಲಿ ತ್ವಚೆಯ ಶುಚಿತ್ವದ ಪ್ರಾಮುಖ್ಯತೆ ನೀಡಬೇಕು.‌ ಅದರಲ್ಲೂ ಈ ಕಾಲದಲ್ಲಿ ತೇವಾಂಶವು ಅಧಿಕವಾಗಿದ್ದು, ತ್ವಚೆಯ ರಂಧ್ರಗಳನ್ನು ಮುಚ್ಚಿಬಿಡಬಹುದು. ತ್ವಚೆಯ ರಂಧ್ರಗಳು ಮುಚ್ಚಲ್ಪಟ್ಟರೆ ಅದರಿಂದ ಮೊಡವೆಗಳು ಬರುತ್ತದೆ. ನಿಮ್ಮ ತ್ವಚೆಯನ್ನು ಶುಚಿಯಾಗಿಟ್ಟುಕೊಳ್ಳುವುದು ತುಂಬಾಮುಖ್ಯ. ತ್ವಚೆಯು ಎಣ್ಣೆಯಂಶವನ್ನು ಹೊಂದಿದ್ದರೆ ತೇವಾಂಶದೊಂದಿಗೆ ಧೂಳು ಮತ್ತು ಕಲ್ಮಶದೊಂದಿಗೆ ತ್ವಚೆಯಲ್ಲಿ ಮೊಡವೆಗಳು ಉಂಟಾಗಬಹುದು. ನಿಯಮಿತವಾಗಿ ತ್ವಚೆಯನ್ನು ತೊಳೆಯುವುದರಿಂದ ಕಲ್ಮಶ ದೂರವಾಗಿ ಆರೋಗ್ಯಕರ ತ್ವಚೆಯನ್ನು ಪಡೆಯಬಹುದು.

ಗಾಳಿಯಲ್ಲಿ ತೇವಾಂಶವಿದ್ದರೂ ಒಣ ತ್ವಚೆಯವರಿಗೆ ತುರಿಕೆ ಮತ್ತು ಕಿರಿಕಿರಿ ಉಂಟಾಗುತ್ತದೆ. ಅದರಲ್ಲೂ ಮಳೆಗಾಲದಲ್ಲಿ ‌ಈ ಸಮಸ್ಯೆ ‌ನಮಗೆ ಹೆಚ್ಚು ಕಾಡುತ್ತೆ.
ಒಣ ತ್ವಚೆ ಹೊಂದಿರುವವರು ಪ್ರತೀ ರಾತ್ರಿ ಜೇನು ಮತ್ತು ಹಾಲಿನ ಮಿಶ್ರಣವನ್ನು ಹಚ್ಚಿಕೊಂಡರೆ ತ್ವಚೆಯಲ್ಲಿ ತೇವಾಂಶವು ನಿಯಂತ್ರಣದಲ್ಲಿರುತ್ತದೆ.

ಮಳೆಗಾಲದಲ್ಲಿ ಪುದೀನ ಅಥವಾ ಪಪ್ಪಾಯ ಫೇಶಿಯಲ್ ಮಾಡಿಸಿಕೊಂಡರೆ ಒಳ್ಳೆಯ ಪರಿಣಾಮವಿರುತ್ತದೆ. ಪುದೀನ ಮುಖದ ಕಾಂತಿಯನ್ನು ಹೆಚ್ಚಿಸುವುದಲ್ಲದೆ ಚರ್ಮವನ್ನು ಮೃದುಗೊಳಿಸಿ ಮುಚ್ಚಿಹೋಗಿರುವ ರಂಧ್ರಗಳನ್ನೂ ಸಹ ಶುದ್ದಿ‌ಮಾಡುವುದು. ಅಲ್ಲದೆ ಪಪ್ಪಾಯಿ ಹಣ್ಣಿ‌ನಿಂದ ಪೋಷಣೆ ಮಾಡಿದರೆ ಮುಖವು ಸದಾ ತೇವಾಂಶದಿಂದ ಕಾಂತಿಯುತವಾಗಿ ಕಾಣುತ್ತದೆ.

ಮಳೆಗಾಲದಲ್ಲಿ ಆರ್ದ್ರತೆ ಮಟ್ಟವು ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ. ಆದ್ದರಿಂದ ರಾಸಾಯನಿಕ ಲೋಶನ್‌ಗಳು ಅಥವ ಕ್ರೀಮ್‌ಗಳನ್ನು ಹಚ್ಚುವುದನ್ನು ತಪ್ಪಿಸಿ, ಸಾಧ್ಯವಾದಷ್ಟು ನೈಸರ್ಗಿಕ ಫೇಸ್ ಕ್ರೀಮ್ ಅನ್ನು ಆಯ್ದುಕೊಳ್ಳಿ.‌ ನೈಸರ್ಗಿಕ ಲೋಷನ್ ಮತ್ತು ಫೇಸ ಕ್ರೀಮ್ ಗಳನ್ನು ಬಳಸುವುದರಿಂದ ಯಾವುದೇ ತೊಂದರೆಯೂ ಇರುವುದಿಲ್ಲ. ಜೊತೆಗೆ ಇವು ತ್ವಚೆಯ ಆರೋಗ್ಯ ಕಾಪಾಡುವಲ್ಲಿ ಹೆಚ್ಚಾಗಿ ಸಹಕಾರಿಯಾಗುತ್ತವೆ.

ನಿಮಗೆ‌ ಮಳೆಗಾಲದಲ್ಲಿ ‌ಮೊಡವೆ ಸಮಸ್ಯೆ ಹೆಚ್ಚಾಗಿದೆ ಎಂದರೆ ‌ಅದಕ್ಕಾಗಿಯು ಹೋಮ್ ರೆಮಿಡಿ ಇದ್ದೇ ಇದೆ. ನಾವು ಅಡುಗೆ ಮನೆಯಲ್ಲೇ ಪ್ರತಿನಿತ್ಯವೂ ಬಳಸುವ ಪದಾರ್ಥಗಳಿಂದಲೇ ನಿಮ್ಮ ಮೊಡವೆಗೆ ಮದ್ದು ಕಂಡುಹಿಡಿದುಕೊಳ್ಳಬಹುದು. ತೇವಾಂಶವಿರುವ ಮಣ್ಣು, ಎಳೆಯ ಬೇವಿನ ಚಿಗುರು ,ಪುದೀನಾ, ಕರ್ಪೂರ ಮತ್ತು ರೋಸ್ ವಾಟರನ್ನು ಮಿಶ್ರಣ ಮಾಡಬೇಕು.‌‌ ಇದನ್ನು ನಿಮ್ಮ ತ್ವಚೆಗೆ 15 ನಿಮಿಷ ಹಚ್ಚಿಕೊಳ್ಳಿ. ತದನಂತರ ತಂಪಾದ ನೀರಿನಿಂದ ಇದನ್ನು ತೊಳೆದು ತೆಗೆಯಿರಿ. ಹೀಗೆ ವಾರದಲ್ಲಿ ಮೂರರಿಂದ ನಾಲ್ಕು ಬಾರಿ ಮಾಡುವುದರಿಂದ ಮೊಡವೆಗಳು‌ ಕಡಿಮೆಯಾಗುವುದು.

1 COMMENT

LEAVE A REPLY

Please enter your comment!
Please enter your name here