ಭಾರತೀಯರೇ..! ಮತ್ತೊಮ್ಮೆ ಕೆಲಸ ಕಳೆದುಕೊಳ್ಳಲಿದ್ದೀರಿ ಎಚ್ಚರ..!!

Date:

ಈ ಬಾರಿಯ 2017ನೇ ವರ್ಷ ಎಲ್ಲರ ಮುಖದಲ್ಲೂ ಹರುಷ ತಂದಿರುವ ಜೊತೆ ಜೊತೆಗೆ ದೊಡ್ಡದೊಂದು ಅಘಾತವೂ ತರಲಿದೆ..! ಅದೇನಂದ್ರೆ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಮಾಡ್ತಾ ಇರೋ ಸಾಕಷ್ಟು ನೌಕರರು ಈ ಬಾರಿ ತಮ್ಮ ಕೆಲಸ ಕಳೆದುಕೊಳ್ಳಲಿದ್ದಾರೆ..! ಹೌದು 2008-09ರಲ್ಲಿ ಭಾರೀ ಉದ್ಯೋಗ ಕುಸಿತದಿಂದ ಕಂಗಾಲಾಗಿ ಹೋಗಿದ್ದ ಜನತೆ ಈ ವರ್ಷವೂ ಕೂಡ ಇಂತಹದೊಂದು ಅಘಾತಕ್ಕೆ ಸಿಲುಕಿಕೊಳ್ಳಲಿದ್ದಾರೆ. ಆದರೆ ಸ್ವಲ್ಪ ಪ್ರಮಾಣ ಕಡಿಮೆ ಅಷ್ಟೆ..! ಜಾಗತಿಕ ಬೆಳವಣಿಗೆಯಲ್ಲಿ ಭಾರತದ ಈಗಿನ ಸ್ಥಿತಿ ತೀರಾ ಹದಗೆಟ್ಟಿದೆ ಅನ್ನೋದಕ್ಕೆ ಸೂಕ್ತ ನಿದರ್ಶನ ಎಂಬಂತೆ ಕಳೆದ ಡಿಸೆಂಬರ್ ತಿಂಗಳಿನಲ್ಲಿ ಸಾಕಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಂಡು ತಮ್ಮ ಗೂಡು ಸೇರಿಕೊಂಡಿದ್ದು..! ಕಳೆದ ಬಾರಿ ಸಿಸ್ಕೊ ಕಂಪನಿ 14 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ್ರೆ, ಮೈಕ್ರೋ ಸಾಫ್ಟ್ ಸಂಸ್ಥೆ 4,700 ಉದ್ಯೋಗಿಗಳನ್ನು ಎತ್ತಂಗಡಿ ಮಾಡಿದ್ರು. ಇನ್ನು ಪ್ರತಿಷ್ಠಿತ ಐಬಿಎಂ ಕಂಪನಿ 5 ಸಾವಿರ ಸಿಬ್ಬಂಧಿಯನ್ನು ಕಿತ್ತು ಹಾಕಿದೆ. 2016ರಲ್ಲಿ ಭಾರತದಲ್ಲಿ ಉದ್ಯೋಗ ಕಡಿತ ಅಷ್ಟೇನು ಇಲ್ಲದೆ ಇದ್ದರೂ ಈ ಬಾರಿ ಅದರ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಕಳೆದ ನವೆಂಬರ್ ತಿಂಗಳಿನಲ್ಲಿ ನೋಟ್ ಬ್ಯಾನ್ ಪರಿಣಾಮವಾಗಿ ಈ ಬಾರಿ ಖಾಸಗೀ ವಲಯಗಳು ಪಾತಾಳಕ್ಕೆ ಕುಸಿಯಲಿದೆ. ಇದರ ಪರಿಣಾಮವಾಗಿ ಉದ್ಯೋಗಿಗಳು ತಮ್ಮ ಕೆಲಸ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಔಪಚಾರಿಕ ವಲಯಗಳಲ್ಲಿ ಉದ್ಯೋಗಿಗಳ ಬೇಡಿಕೆ ತೀರ ಕೆಳಮಟ್ಟದಲ್ಲಿದ್ದು, ಶೇ.5 ರಿಂದ 6ರಷ್ಟು ಕುಸಿತ ಕಂಡಿವೆ. ಇವುಗಳಲ್ಲಿ ಉತ್ಪಾದನೆ ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮ ಕ್ಷೇತ್ರಗಳಿಗೆ ಹೆಚ್ಚು ತೊಂದರೆಯಾಗಿದೆ ಎನ್ನುತ್ತಾರೆ ಟೀಮ್ ಲೀಸ್ ಸಂಸ್ಥೆಯ ಹಿರಿಯ ಉಪಾಧ್ಯಕ್ಷೆ ನೀತಿ ಶರ್ಮಾ. ನೋಟು ಅಮಾನ್ಯಗೊಳ್ಳೊಕು ಮುನ್ನ ದೇಶದಲ್ಲಿ ಉದ್ಯೋಗ ಕಡಿತ ಪ್ರಮಾಣ ಅಷ್ಟೇನು ಇರಲಿಲ್ಲ. 2015ರ ವೇಳೆ ಉದ್ಯೋಗ ಕಡಿತ ಪ್ರಮಾಣ ಸ್ವಲ್ಪ ಮಟ್ಟಿನ ಕುಸಿತ ಕಂಡಿದ್ದರೂ ಕೂಡ ಅದು 2016ರ ವೇಳೆಯಲ್ಲಿ ಶೇ.1.6ರಷ್ಟು ಬೆಳವಣಿಗೆ ಕಂಡಿತ್ತು. ಎಲ್ಲಾ ವಲಯಗಳ 2,112 ಕಾರ್ಪೋರೇಟ್ ಸಂಸ್ಥೆಗಳಲ್ಲಿ ಉದ್ಯೋಗವಕಾಶಗಳು ಹೆಚ್ಚಿದ್ದವು ಎಂದು ಮಾನ್‍ಸ್ಟರ್ ಡಾಟ್ ಕಾಂ ಆಡಳಿತ ನಿರ್ದೇಶಕ ಸಂಜಯ್ ಮೋದಿ ತಿಳಿಸಿದ್ದಾರೆ. ಆದರೆ ಕಳೆದ ಅಕ್ಟೋಬರ್ ತಿಂಗಳೊಂದರಲ್ಲೆ ಮಾನ್‍ಸ್ಟರ್ ಕಂಪನಿಗೆ ಶೇ.30ರಷ್ಟು ನಷ್ಟ ಸಂಭವಿಸಿದೆ..!
ಉದ್ಯೋಗ ಕಡಿತಕ್ಕೆ ಕಾರಣ..!
ಈ ಬಾರಿ ಉದ್ಯೋಗ ಕಡಿತಗೊಳಿಸಲು ಮೂಲ ಕಾರಣವಿಷ್ಟೆ ಉದ್ಯಮ ಕುಸಿತ, ಆಟೋಮೆಷಿನ್, ಷೇರು ಮೌಲ್ಯ ಪತನ, ನಾಯಕತ್ವದ ಬದಲಾವಣೆ, ಆಂತರಿಕ ಮತ್ತು ಬಾಹ್ಯ ಪರಿಣಾಮಗಳು..!

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಇನ್ಮುಂದೆ ವಾಹನ ಅಡ್ಡ ಹಾಕಿ ಡಿಎಲ್ ಪರಿಶೀಲನೆ ಮಾಡುವಂತಿಲ್ಲ..!

ಕಿರಿಕ್ ಪಾರ್ಟಿ ಟ್ರೇಲರ್‍ನ ಕಿರಿಕ್ ಕನ್ನಡಿಗರು ಮಾಡುದ್ರೆ ಹೇಗಿರುತ್ತೆ ಗೊತ್ತಾ..?

ಈ ವಾರ ಯಾರೂ ಪ್ರಥಮ್‍ನ ನಾಮಿನೇಟ್ ಮಾಡಲಿಲ್ಲ ಯಾಕೆ ಗೊತ್ತಾ.? ಇದರ ಹಿಂದಿನ ರಹಸ್ಯ ಬಯಲು.!!!

ಹಗಲಿನಲ್ಲಿ ಟಾಪ್ ಸಾಫ್ಟ್ ವೇರ್ ಇಂಜಿನಿಯರ್.! ರಾತ್ರಿ ಆದ್ರೆ ಸೀರೆ ಧರಿಸುವ ಗಂಡ..!

ಉಪೇಂದ್ರ ಹಾಗೂ ಯಶ್ ಬಗ್ಗೆ ಹಂಸಲೇಖ ಹೇಳಿದ್ದಾದ್ರೂ ಏನು..?

ನಿನ್ನ ಬರುವಿಕೆಯ ನಿರೀಕ್ಷೆಯಲ್ಲಿ ಈ ಪುಟ್ಟ ಹೃದಯ…!! Real Love Story

ಜನವರಿಯಿಂದ ಜಿಯೋ ಫ್ರೀ ಇಂಟರ್‍ನೆಟ್ ಕ್ಯಾನ್ಸಲ್..?!!

ಬ್ಯಾಂಕ್ ಜೊತೆ ಬ್ಯುಸಿನೆಸ್ ಮಾಡಲು ಅವಕಾಶ, ಪ್ರತಿ ತಿಂಗಳು 30,000 ತನಕ ಆದಾಯ

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...