No menu items!
17.7 C
Munich
Friday, April 24, 2026

ಜಾತಿ, ಧರ್ಮದ ಹೆಸರೇಳಿ ಮತಯಾಚನೆ ಮಾಡೋದು ಕಾನೂನು ಬಾಹಿರ: ಸುಪ್ರೀಂ ಕೋರ್ಟ್..!

Must read

ಚುನಾವಣೆಯಲ್ಲಿ ಸ್ಪರ್ಧಿಸಿರುವ ಪ್ರತಿನಿಧಿಗಳು ತಾನು ಇಂತಹ ಜಾತಿ, ಸಮುದಾಯದವನು ಎಂದು ಹೇಳಿಕೊಂಡು ಚುನಾವಣೆ ಪ್ರಚಾರ ಮಾಡೋದಕ್ಕೆ ಇನ್ಮುಂದೆ ಅವಕಾಶ ಇರೋದಿಲ್ಲ..! ಯಾಕಂದ್ರೆ ಜಾತಿ, ಧರ್ಮ ಹಾಗೂ ಸಮುದಾಯಗಳ ಹೆಸರೇಳಿಕೊಂಡು ಜನರ ಬಳಿ ಓಟ್ ಕೇಳಿದ್ರೆ ಅದು ಕಾನೂನು ಬಾಹಿರ ಅಂತ ಸುಪ್ರಿಂ ಕೋರ್ಟ್ ಆದೇಶ ನೀಡಿದೆ. ಸೋಮವಾರ ಮುಖ್ಯ ನ್ಯಾಯಮೂರ್ತಿ ಟಿ.ಎಸ್ ಠಾಕೂರ್ ನೇತೃತ್ವದ ಪೀಠವು ಈ ಮಹತ್ವದ ಆದೇಶ ನಿಡಿದ್ದು, ಈ ಆದೇಶವು ಮುಂದಿನ ವಿಧಾನ ಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ..! ದೇಶದಲ್ಲಿ ಜಾತಿ, ಧರ್ಮ, ಜನಾಂಗದ ಹೆಸರೇಳಿಕೊಂಡು ಮತಯಾಚನೆ ಮಾಡೋದು ಪ್ರಜಾಪ್ರತಿನಿಧಿ ಕಾಯ್ದೆಯ ಉಲ್ಲಂಘನೆಯಾಗುತ್ತದೆ ಎಂದು ಕೋರ್ಟ್ ಹೇಳಿದೆ. ಚುನಾವಣಾ ಪ್ರಚಾರ ಜಾತ್ಯಾತೀತವಾಗಿರಬೇಕು ಎಂದೇಳಿರುವ ಕೋರ್ಟ್ ಕಾಯ್ದೆ ಉಲ್ಲಂಘಿಸಿ ಮತಯಾಚಿಸುವ ಅಭ್ಯರ್ಥಿಯನ್ನು ಅಭ್ಯರ್ಥಿ ಸ್ಥಾನದಿಂದ ವಜಾ ಮಾಡ್ಬೇಕು ಎಂದು ಆದೇಶ ನೀಡಿದೆ..! ಈ ಆದೇಶವು ಮುಂದಿನ ಉತ್ತರ ಪ್ರದೇಶ್, ಪಂಜಾಬ್ ವಿಧಾನ ಸಭಾ ಚುನಾವಣೆಗೂ ಅನ್ವಯವಾಗಲಿದೆ..!

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಇನ್ಮುಂದೆ ವಾಹನ ಅಡ್ಡ ಹಾಕಿ ಡಿಎಲ್ ಪರಿಶೀಲನೆ ಮಾಡುವಂತಿಲ್ಲ..!

ಭಾರತೀಯರೇ..! ಮತ್ತೊಮ್ಮೆ ಕೆಲಸ ಕಳೆದುಕೊಳ್ಳಲಿದ್ದೀರಿ ಎಚ್ಚರ..!!

ಕಿರಿಕ್ ಪಾರ್ಟಿ ಟ್ರೇಲರ್‍ನ ಕಿರಿಕ್ ಕನ್ನಡಿಗರು ಮಾಡುದ್ರೆ ಹೇಗಿರುತ್ತೆ ಗೊತ್ತಾ..?

ಈ ವಾರ ಯಾರೂ ಪ್ರಥಮ್‍ನ ನಾಮಿನೇಟ್ ಮಾಡಲಿಲ್ಲ ಯಾಕೆ ಗೊತ್ತಾ.? ಇದರ ಹಿಂದಿನ ರಹಸ್ಯ ಬಯಲು.!!!

ಹಗಲಿನಲ್ಲಿ ಟಾಪ್ ಸಾಫ್ಟ್ ವೇರ್ ಇಂಜಿನಿಯರ್.! ರಾತ್ರಿ ಆದ್ರೆ ಸೀರೆ ಧರಿಸುವ ಗಂಡ..!

ಉಪೇಂದ್ರ ಹಾಗೂ ಯಶ್ ಬಗ್ಗೆ ಹಂಸಲೇಖ ಹೇಳಿದ್ದಾದ್ರೂ ಏನು..?

ನಿನ್ನ ಬರುವಿಕೆಯ ನಿರೀಕ್ಷೆಯಲ್ಲಿ ಈ ಪುಟ್ಟ ಹೃದಯ…!! Real Love Story

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article