ಪೋಷಕರು ತಮ್ಮ ಮಕ್ಕಳು ಪರೀಕ್ಷೆಯಲ್ಲಿ ಪಾಸಾದಾಗ ಸಿಹಿ ಹಂಚಿ ಸಂಭ್ರಮಿಸುತ್ತಾರೆ. ಆದರೆ ,ಫೇಲ್ ಆದಾಗ ಸಂಭ್ರಮಿಸುವ ತಂದೆಯನ್ನು ಎಲ್ಲಾದರೂ ನೋಡಿದ್ದೀರ..?
ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ತಂದೆಯೊಬ್ಬರು ತಮ್ಮ ಮಗ ಫೇಲ್ ಆಗಿದ್ದಕ್ಕೆ ಸಂಭ್ರಮಪಟ್ಟಿದ್ದಾರೆ.
ಸುರೇಂದ್ರ ಕುಮಾರ್ ವ್ಯಾಸ್ ತನ್ನ ಮಗ 10ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಬೀದಿಯಲ್ಲಿ ಪೆಂಡಾಲ್ ಹಾಕಿಸಿ, ಪಟಾಕಿ ಸಿಡಿಸಿ ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಮಕ್ಕಳು ಪರೀಕ್ಷೆಯಲ್ಲಿ ಫೇಲ್ ಆದರೆ ಸಾಕು ಅವರು ಖಿನ್ನತೆಗೆ ಒಳಗಾಗುತ್ತಾರೆ. ಕೆಲವರು ಜೀವವನ್ನೇ ಕಳೆದುಕೊಳ್ಳುತ್ತಾರೆ. ಆದ್ದರಿಂದ ಈ ಪರೀಕ್ಷೆಯಲ್ಲಿ ನನ್ನ ಮಗ ಕೂಡ ಫೇಲ್ ಆಗಿದ್ದಾನೆ. ಮಕ್ಕಳು ಪಾಸಾದಾಗ ಮಾತ್ರ ಸಂಭ್ರಮಿಸಬಾರದು. ಅವರು ಫೇಲ್ ಆದಾಗಲೂ ನಾವು ಸಂಭ್ರಮಿಸಬೇಕು. ಇದರಿಂದ ಅವರು ಪ್ರೇರೇಪಿತಾರಾಗುತ್ತಾರೆ ಎಂದು ಸುರೇಂದ್ರ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.