ಸ್ಯಾಂಡಲ್‍ವುಡ್ ಮಿಸ್ಟರ್ ಪರ್ಫೆಕ್ಟ್ ಅಂತೆ ಈ ನಟ..!

Date:

ನಮ್ಗೆ ಮಿಸ್ಟರ್ ಪರ್ಫೆಕ್ಟ್ ಆಂದಾಕ್ಷಣ ನೆನಪಿಗೆ ಬರೋ ಹಿರೋ ಅಂದ್ರೆ ಅದು ದಂಗಾಲ್‍ಸ್ಟಾರ್ ಅಮೀರ್‍ಖಾನ್.. ಬಾಲಿವುಡ್ ಪಿ.ಕೆ ಖ್ಯಾತಿಯ ಅಮೀರ್ ಹೇಗೆ ಮಿಸ್ಟರ್ ಪರ್ಫೆಕ್ಟೊ ಹಾಗೆ ನಮ್ಮ ಸ್ಯಾಂಡಲ್‍ವುಡ್‍ನಲ್ಲೂ ಮಿಸ್ಟರ್ ಪರ್ಫೆಕ್ಟ್ ಒಬ್ರು ಇದಾರೆ ಅಂತ ಗಾಂಧಿ ನಗರದಲ್ಲಿ ಗಾಸಿಪ್ ಹರಿದಾಡ್ತಿದಿಯಂತೆ..!
ಬಿ-ಟೌನ್‍ನಲ್ಲಿ ಹಿಟ್ ಮೇಲೆ ಹಿಟ್ ಚಿತ್ರಗಳನ್ನು ನೀಡ್ತಾ ಬಂದಿರುವ ಅಮೀರ್‍ಖಾನ್‍ಗೆ ಹೋಲಿಸಿ ಮಾತ್ನಾಡ್ತಾ ಇದಾರೆ ಅಂದ್ರೆ ಈ ಸ್ಯಾಂಡಲ್‍ವುಡ್ ಮಿಸ್ಟರ್ ಪರ್ಫೆಕ್ಟ್ ಹೇಗಿರ್ಬೋದು ಅನ್ನೊ ಕುತೂಹಲ ನಿಮ್ಗೆ ಕಾಡ್ತಾ ಇದೆ ಅಲ್ವಾ..? ಅದ್ರು ಜೊತೆಗೆ ಕನ್ನಡದಲ್ಲಿ ಅಂತ ನಟ ಯಾರು ಇಲ್ಲ ಬಿಡ್ರಿ ಅಂತಾನು ಹೇಳಿರ್ತಿರ..! ಹಾಗೇನಾದ್ರು ಅಂದುಕೊಂಡ್ರೆ ಅದು ನಿಮ್ಮ ತಪ್ಪು..! ಸ್ಯಾಂಡಲ್‍ವುಡ್‍ನಲ್ಲಿ ತಮ್ಮ ನಟನಾ ಕೌಶಲ್ಯದಿಂದ ಹಿಡಿದು ಚಿತ್ರ ಕಥೆ, ಬಡ್ಜಟ್‍ನವರೆಗೂ ಯಾವ ಭಾಷೆಯ ಚಿತ್ರಗಳಿಗೂ ಕಮ್ಮಿ ಇಲ್ಲ ಎನ್ನುವಂತೆ ಮಾಡ್ತಾ ಬಂದಿದ್ದಾರೆ ಈ ನಟ..!
ಆದ್ರೆ ಒಂದು ಇಂಪಾರ್ಟೆಂಟ್ ಪ್ರಶ್ನೆಗೆ ಉತ್ರ ಇನ್ನೂ ಸಿಕ್ಕಿಲ್ಲ ಅಲ್ವಾ..! ಬಿ-ಟೌನ್‍ನಲ್ಲಿ ಅಮೀರ್‍ಖಾನ್ thugs of Hindustan ಎನ್ನುವ ಟೈಟಲ್ ಹಿಟ್ಕೊಂಡು ಸಿನಿಮಾ ಮಾಡ್ತಿದ್ರೆ ಸ್ಯಾಂಡಲ್‍ವುಡ್ ಮಿಸ್ಟರ್ ಪರ್ಫೆಕ್ಟ್ thugs of malgudi ಎನ್ನುವ ಟೈಟಲ್ ಹಿಡ್ಕೊಂಡು ಸಿನಿಮಾ ಮಾಡ್ತಿದ್ದಾರಂತೆ..! ಇದೆ ವರ್ಷದಲ್ಲೆ ಈ ಚಿತ್ರವು ತೆರೆಕಾಣುವ ಸಾಧ್ಯತೆಯೂ ಇದ್ಯಂತೆ..!
ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿಯಿಂದ ಸಕ್ಸಸ್ ಕಂಡು, ಈಗ ಸ್ಯಾಂಡಲ್‍ವುಡ್‍ನಲ್ಲಿ ಕಿರಿಕ್ ಮಾಡ್ತಿರೋ ನಟನೇ ಕಣ್ರಿ ಸ್ಯಾಂಡಲ್‍ವುಡ್ ಮಿಸ್ಟರ್ ಪಫೆಕ್ಟ್..! ನಿಮ್ಗೆ ಈಗ ಗೊತ್ತಾಗ್ರ್ಬೇಕಲ್ವಾ ಈ ಮಿಸ್ಟರ್ ಪರ್ಫೆಕ್ಟ್ ಯಾರು ಅಂತಾ..? ಹೌದು ನೀವ್ ಗೆಸ್ ಮಾಡಿರೊದು ಪಕ್ಕಾ ನೋಡಿ..!


ದೇಶದಾದ್ಯಂತ ಕಿರಿಕ್ ಮಾಡ್ತಾ ಬಾಕ್ಸಾಫೀಸ್ ಕೊಳ್ಳೆ ಹೊಡಿತಿರೋ ಕಿರಿಕ್ ಪಾರ್ಟಿ ಚಿತ್ರದ ನಾಯಕ ರಕ್ಷಿತ್ ಶೆಟ್ಟಿ ಕಾಲೇಜಿನ ನಡೆಯೋ ಕಥೆಯನ್ನಿಟ್ಕೊಂಡು ತಯಾರಾಗಿರುವ ಕಿರಿಕ್ ಪಾರ್ಟಿ ಚಿತ್ರಕ್ಕೆ ದೇಶದಾದ್ಯಂತ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಇದ್ರಿಂದಲೇ ರಕ್ಷಿತ್‍ಶೆಟ್ಟಿಯ ಹಣೆಬರಹಾನೆ ಬದ್ಲಾಗಿದಿಯಂತೆ..! ಈ ಚಿತ್ರದ ಸಕ್ಸಸ್ ನೊಡ್ತಾಹೊದ್ರೆ ಕನ್ನಡದ ಯಾವ ಮಲ್ಟಿಸ್ಟಾರ್‍ಗಳಿಗೂ ಕಮ್ಮಿ ಇಲ್ಲ ಎನ್ನುವಂತೆ ಎದ್ದು ಕಣುತ್ತಿದೆ. ಪುನಿತ್, ಸುದೀಪ್, ದರ್ಶನ್‍ರಂತಹ ದೊಡ್ಡ ನಟರ ಸಮಕ್ಕೆ ಚಿತ್ರ ಸಾಗ್ತಾ ಇದೆ ಅಂದ್ರೆ ತಪ್ಪಾಗಲ್ಲ.
ಸಿಂಪಲ್ಲಾಗ್ ಒಂದ್ ಲವ್‍ಸ್ಟೋರಿ, ಉಳಿದವರು ಕಂಡತೆ, ವಾಸ್ತುಪ್ರಕಾರ, ರಿಕ್ಕಿ, ಗೋದಿ ಬಣ್ಣ ಸಾಧಾರಣ ಮೈಕಟ್ಟು, ಕಿರಿಕ್ ಪಾರ್ಟಿ ಸೇರಿದಂತೆ ಸಾಲು ಸಾಲು ಹಿಟ್ ಚಿತ್ರಗಳನ್ನು ಸ್ಯಾಂಡಲ್‍ವುಡ್‍ಗೆ ಕೊಡುಗೆ ನೀಡಿದ ನಟ ಅಂದ್ರೆ ರಕ್ಷಿತ್ ಶೆಟ್ಟಿ. ಹೀಗೆ ಬಂದ ಸಿನಿಮಾಗಳೆಲ್ಲ ಸಕ್ಸಸ್ ಕಾಣ್ತಾ ಹೊದ್ರೆ ಟಾಪ್ ಹಿರೋಗಳ ಸಾಲಿನಲ್ಲಿ ಮೊದ್ಲ ಸ್ಥಾನವನ್ನು ರಕ್ಷಿತ್ ಗಿಟ್ಟಿಸುತ್ತಾರೆ ಎನ್ನುವ ಮಾತುಗಳು ಗಾಂಧಿನಗರದಲ್ಲಿ ಕೇಳಿಬರುತ್ತಿವೆಯಂತೆ..! ಏನೆ ಆಗ್ಲಿ ಅವರ ಮುಂದಿನ ಚಿತ್ರಗಳು ಇನ್ನೂ ಸಕ್ಸಸ್ ಕಾಣಲಿ ಅನ್ನೋದೆ ಅಭಿಮಾನಿಗಳ ಆಸೆ..

  • ಹಾಲೇಶ್ ಎಂ.ಎಸ್ ಹುಣಸನಹಳ್ಳಿ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಖಂಡಿಸುವ ಪ್ರಥಮ್ ನುಡಿದ ಭವಿಷ್ಯ ನಿಜವಾಗುತ್ತಾ??

ಭಾರಿ ಗಿಫ್ಟ್ ನೀಡೋಕೆ ಮುಂದಾಗಿದೆ ಜಿಯೋ..!

ರಯೀಸ್ ಚಿತ್ರ ಬಿಡುಗಡೆ ಮಾಡ್ಬೇಡಿ: ಶಿವಸೇನೆ ಧಮ್ಕಿ..!

ಅಧಿಕಾರಿಗಳ ಕರಾಳ ಮುಖವನ್ನು ವಿಡಿಯೋ ಮೂಲಕ ಬಯಲಿಗೆಳೆದ ಯೋಧ..!

ಇನ್ಮುಂದೆ ಖಾಸಗೀ ಆಸ್ಪತ್ರೆಯಲ್ಲಿ ಫ್ರೀ ಟ್ರೀಟ್‍ಮೆಂಟ್ ಇರೋದಿಲ್ಲ..!

ಮತ್ತೆ ಒಂದಾಗಲಿದ್ದಾರೆ ಸುದೀಪ್ ದಂಪತಿ

195 ಬಾರಿ ಪಾರ್ಕಿಂಗ್ ನಿಯಮ ಉಲ್ಲಂಘಿಸಿದ ಕಾರು ಒಂದು ಬಾರಿಯೂ ದಂಡ ಕಟ್ಲಿಲ್ಲ..!

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...