ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯದ ‘ಮಫ್ತಿ’ ಸಿನಿಮಾ ಟ್ರೇಲರ್ ಬಿಡುಗಡೆಯಾಗಿದೆ. ಯೂಟ್ಯೂಬ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಉಗ್ರಂ ಖ್ಯಾತಿಯ ನಟ ಶ್ರೀ ಮುರುಳಿ ಮತ್ತು ಶಿವಣ್ಣ ಅಭಿನಯದ ಚಿತ್ರ ಈಗಾಗಲೇ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಟ್ರೇಲರ್ ನೋಡಿದ ಬಳಿಕ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ.
ಚಿತ್ರದಲ್ಲಿ ಭೂಗತ ಜಗತ್ತಿನ ಸನ್ನಿವೇಶಗಳಿದ್ದು, ಚಿತ್ರ ತುಂಬಾ ವಿಭಿನ್ನವಾಗಿ ಮೂಡಿಬಂದಿದೆ.
ನರ್ತನ್ ನಿರ್ದೇಶನದ ಚಿತ್ರದಲ್ಲಿ ಸಾನ್ವಿ ಶ್ರೀವಾತ್ಸವ್ ಹಾಗೂ ವಸಿಷ್ಠ ಎನ್ ಸಿಂಹ ಸಹ ನಟಿಸಿದ್ದಾರೆ.
ಜಯಣ್ಣ ಭೋಗೇಂದ್ರ ಮಫ್ತಿಯ ನಿರ್ಮಾಪಕರು. ಯೂಟ್ಯೂಬ್ ನಲ್ಲಿ ಟ್ರೇಲರ್ ದೂಳೆಬ್ಬಿಸಿದೆ. ನೀವೂ ಕೂಡ ಟ್ರೇಲರ್ ನೋಡಿ.
ದೂಳೆಬ್ಬಿಸಿದೆ ‘ಮಫ್ತಿ’ ಟ್ರೇಲರ್
Date: