ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನಿಮಾ ಟಿಕೇಟ್ ದರ 120ರೂ ಗಿಂತ ಹೆಚ್ಚಿರಬಾರದೆಂದು ರಾಜೇಂದ್ರ ಸಿಂಗ್ ಬಾಬು ಅವರ ಅಧ್ಯಕ್ಷತೆಯ ಕರ್ನಾಟಕ ಚಲನಚಿತ್ರ ಅಕಾಡೆಮಿ ಸರ್ಕಾರಕ್ಕೆ ಸಲಹೆ ನೀಡಿದೆ. ರಾಜ್ಯದ ಪ್ರಾಯೋಗಿಕ ಚಲನಚಿತ್ರ ಉದ್ಯಮ ನೀತಿಯ ಭಾಗವಾಗಿ ಈ ಸಲಹೆಯನ್ನು ನೀಡಲಾಗಿದೆ.
ಹಾಗೆಯೆ ಪ್ರೈಮ್ ಸಮಯದಲ್ಲಿ ಎರಡು ಕನ್ನಡ ಸಿನಿಮಾಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದೂ ಕೂಡ ಶಿಫಾರಸ್ಸು ಮಾಡಿದ್ದಾರೆ. ಹಾಗೂ ಜನತಾ ಚಿತ್ರ ಮಂದಿರಗಳಲ್ಲಿಯೂ ಪ್ರದರ್ಶಿಸುವ ಚಿತ್ರಗಳಿಗೆ 50 ಲಕ್ಷ ರೂ. ಅನುದಾನ ಹಾಗೂ ಹಳೇಯ ಚಿತ್ರ ಮಂದಿರಗಳ ಜೀರ್ಣೋದ್ದಾರಕ್ಕಾಗಿ 25 ಲಕ್ಷ ಅನುದಾನ ನೀಡಲು ಸಲಹೆ ನೀಡಿದ್ದಾರೆ. ಜನ ಚಿತ್ರ ಮಂದಿರಗಳನ್ನು ಮಿನಿಪ್ಲೆಕ್ಸ್‍ಗಳನ್ನು ಮತ್ತು ಮಲ್ಟಿಪ್ಲೆಕ್ಸ್‍ಗಳನ್ನು ಪ್ರಾರಂಭಿಸಲು ಪರವಾನಗಿ ನೀಡಲು ಪ್ರಕ್ರಿಯೆಗಳನ್ನು ಸರಳಗೊಳಿಸಬೇಕು ಎಂದು ಕೂಡ ಸಮಿತಿ ತಿಳಿಸಿದೆ.
ಕನ್ನಡೇತ್ತರ ಸಿನಿಮಾಗಳಿಗೆ ತೆರಿಗೆಯನನ್ನು ಹೆಚ್ಚಿಸಿ ಅದರಿಂದ ಬಂದ ಲಾಭದಿಂದ ಕನ್ನಡ ಚಿತ್ರರಂಗದ ಅಭಿವೃದ್ದಿಗಾಗಿ ಬಳಸಬೇಕು ಎಂದು ಕೂಡ ಶಿಫಾರಸ್ಸು ಮಾಡಿದ್ದಾರೆ. ಅಷ್ಟೇ ಅಲ್ಲದೇ ಕನ್ನಡ ಚಿತ್ರಗಳನ್ನು ನಕಲು ಮಾಡುವವರಿಗೆ ಗೂಂಡಾ ಕಾಯ್ದೆ ಅನ್ವಯವಾಗುವಂತೆ ಈಗಿರುವ ಕಾಯ್ದೆಯನ್ನು ಬಲ ಪಡಿಸಬೇಕು ಎಂದು ಸಲಹೆ ನೀಡಿದರು.
ಎಲ್ಲಾ ಚಿತ್ರ ಮಂದಿರಗಳಲ್ಲೂ ಇಂಟರ್‍ನೆಟ್ ಟಿಕೇಟ್ ಕಾಯ್ದಿರಿಸುವ ಸೌಲಭ್ಯ, ಪ್ರಶಸ್ತಿ ವಿಜೇತ ಸಿನಿಮಾಗಳ ಪ್ರಶಸ್ತಿ ಹಣ ಹೆಚ್ಚಳ, ಕೊಡವ, ತುಳು, ಬ್ಯಾರಿ, ಬಂಜಾರ ಮತ್ತು ಕೊಂಕಣಿ ಭಾಷೆಗಳ ಸಿನಿಮಾಗಳಿಗೂ ಕೂಡ ಪ್ರಶಸ್ತಿ ನೀಡುವ ಸಲಹೆಗಳನ್ನೂ ಪಟ್ಟಿ ಮಾಡಲಾಗಿದೆ.
POPULAR STORIES :
ಚೈನೀಸ್ ಕಂಪನಿಗೆ ಸ್ಟಾರ್ಟ್ ಅಪ್ ಕಂಪನಿನ 6,000 ಕೋಟಿಗೆ ಮಾರಿ ಬಿಟ್ರಂತೆ ಮುಂಬಯಿ ಬ್ರದರ್ಸ್…!
ಪೊಲೀಸಪ್ಪನ ದೌರ್ಜನ್ಯ… ನೀವೂ ಸ್ವಲ್ಪ ನೋಡಿ..!
ಆಹಾರವನ್ನು ಕೈಯಲ್ಲೇ ಸೇವಿಸುವುದು ಉತ್ತಮ ಯಾಕೆ???
ಸರ್ಕಾರಿ ಹುದ್ದೆಗೆ ಜಸ್ಟ್ ಪಾಸಾದ್ರೆ ಸಾಕು..!
ನನ್ನ ಕಥೆ ಆರಂಭವಾದದ್ದೇ ಕದ್ದ ಒಂದು ಮೊಬೈಲ್‍ನ್ನು ಬಳಿಸಿದ್ದಕ್ಕೆ ಪೊಲೀಸ್ ಸ್ಟೇಷನ್ ಮೆಟ್ಟಿಲೇರೋ ಮೂಲಕ..
ನಿಷೇಧಗೊಂಡಿರುವ ಸೈಟ್ ವೀಕ್ಷಿಸಿದರೆ 3 ವರ್ಷ ಜೈಲು ಗ್ಯಾರಂಟಿ…!
ಮೋಸ್ಟ್ ಡೇಂಜರಸ್ ಫೋಟೋಗ್ರಫಿ ಕ್ಲಿಕ್ಸ್…ಈಕೆಯ ಈ ಹುಚ್ಚು ಶೋಕಿಗೆ ಏನನ್ನಬೇಕೋ???