ಅಡುಗೆ ಚೆನ್ನಾಗಿಲ್ಲ ಎಂದು ಹೇಳಿದ ಗ್ರಾಹಕನನ್ನು ಡಾಬಾ ಸಿಬ್ಬಂದಿ ಕೊಲೆ ಮಾಡಿದ ಘಟನೆ ನವದೆಹಲಿ ಪ್ರೀತ್ ವಿಹಾರ್ನಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಪವನ್ ಕುಮಾರ್ (30)ಎಂದು ಗುರುತಿಸಲಾಗಿದೆ. ಇವರು ಮಂಡಾವ್ಲಿಯಲ್ಲಿ ಸ್ವಂತ ಉಪಹಾರಗೃಹವನ್ನು ಹೊಂದಿದ್ದಾರೆ.
ಭಾನುವಾರ ಸಂಜೆ ಕಮಲ್ ಡಾಬಾಗೆ ಹೋಗಿದ್ದಾರೆ. ಅಲ್ಲಿ ಊಟ ಚೆನ್ನಾಗಿಲ್ಲ ಎಂದು ಅದರ ಗುಣಮಟ್ಟದ ಬಗ್ಗೆ ಮಾತಾಡಿದ್ದಾರೆ. ಇದರಿಂದ ಸಿಬ್ಬಂದಿ ಜಗಳಕ್ಕಿಳಿದಿದ್ದಾರೆ. ಬಳಿಕ ಮಾಲೀಕ ಕೂಡ ಬಂದಿದ್ದಾನೆ. ಸಿಬ್ಬಂದಿ ಹಾಗೂ ಮಾಲೀಕ ಸೇರಿ ಪವನ್ ಅವರ ಮೇಲೆ ಪಾತ್ರೆಗಳಿಂದ ಹಲ್ಲೆ ನಡೆಸಿದ್ದಾರೆ.
ಸ್ಥಳೀಯರೊಬ್ಬರು ಪೊಲೀಸರಿಗೆ ಕರೆಮಾಡಿ ವಿಷಯ ತಿಳಿಸಿದ್ದಾರೆ. ಪವನ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು.