ಭಕ್ಷಕರ ಜೊತೆ ವ್ಯಾಪಾರ ಮಾಡಿ ಯುಗಾದಿಯನ್ನು ಹಲಾಲ್ ಮಾಡಬಾರದು: ಪ್ರಮೋದ್ ಮುತಾಲಿಕ್
ಧಾರವಾಡ: ಭಕ್ಷಕರ ಜೊತೆ ವ್ಯಾಪಾರ ಮಾಡಿ ಯುಗಾದಿಯನ್ನು ಹಲಾಲ್ ಮಾಡಬಾರದು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ಹಲಾಲ್ ಎಂಬುದು ಇಸ್ಲಾಂಗೆ ಸಂಬಂಧಿಸಿದ್ದು. ಅದು ಹಿಂದೂಗಳಿಗೆ ಸಂಬಂಧಿಸಿದ್ದಲ್ಲ. ಅವರು ಹಲಾಲ್ ಮಾಡಿಕೊಂಡರೆ ಅದಕ್ಕೆ ನಮ್ಮ ವಿರೋಧ ಇಲ್ಲ.
ಆದರೆ, ಅದನ್ನು ಹಿಂದೂಗಳ ಮೇಲೆ ಹೇರುವುದನ್ನು ನಾವು ಒಪ್ಪುವುದಿಲ್ಲ. ಇಸ್ಲಾಂನವರು ಹಲಾಲ್ ಮೂಲಕ ವ್ಯಾಪಾರ ಮಾಡುತ್ತಾರೆ. ಕುಂಕುಮ, ಅರಿಶಿನ, ತೆಂಗಿನಕಾಯಿ, ತಾಳಿ ಇವೆಲ್ಲವನ್ನು ಹಲಾಲ್ ಮೂಲಕ ಮಾರಾಟ ಮಾಡುತ್ತಾರೆ. ಅಂತವರ ಬಳಿ ಹಿಂದೂಗಳು ವ್ಯಾಪಾರ ಮಾಡಬಾರದು ಎಂದರು.
ಹಿಂದೂಗಳು ಶುದ್ಧ ಮತ್ತು ಪವಿತ್ರವಾಗಿರುವ ವಸ್ತುಗಳನ್ನು ಖರೀದಿ ಮಾಡಿ ದೇವರಿಗೆ ಸಮರ್ಪಿಸಬೇಕು. ಗೋ ಹಂತಕರ, ಭಕ್ಷಕರ ಜೊತೆ ವ್ಯಾಪಾರ ಮಾಡಿ ಯುಗಾದಿಯನ್ನು ಹಲಾಲ್ ಮಾಡಬಾರದು. ಮುಸ್ಲಿಂ ವ್ಯಾಪಾರಿಗಳು ವಸ್ತುಗಳ ಮೇಲೆ ಉಗುಳಿ ಹೇಸಿಗೆ ಮಾಡುತ್ತಾರೆ. ಅಂತವರ ಬಳಿ ನಾವು ಯಾಕೆ ವ್ಯಾಪಾರ ಮಾಡಬೇಕು? ಅಂತದನ್ನು ತೆಗೆದುಕೊಂಡು ನೈವೇದ್ಯ ಮಾಡಿ, ಪೂಜೆ ಮಾಡುವುದು ಸರಿಯಲ್ಲ ಎಂದರು.