ತೆಲುಗು ಟಿವಿ ಚಾನಲೊಂದರ ನಿರೂಪಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ವಿ.ರಾಧಿಕಾ (36) ಆತ್ಮಹತ್ಯೆಗೆ ಶರಣಾದವರು. ಚಾನಲ್ ವಿ6 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಪೋಷಕರೊಂದಿಗೆ ವಾಸವಿದ್ದರು.

‘ನನ್ನ ಮೆದುಳೇ ನನ್ನ ಶತ್ರು’ ಎಂದು ಬರೆದು ಅಪಾರ್ಟ್ಮೆಂಟ್ ನ ಐದನೇ ಮಹಡಿಯಿಂದ ಕೆಳಗೆ ಹಾರಿ ಸಾವಿಗೆ ಶರಣಾಗಿದ್ದಾರೆ.
6 ತಿಂಗಳ ಹಿಂದಷ್ಟೇ ಪತಿಯಿಂದ ವಿಚ್ಛೇದನ ಪಡೆದಿದ್ದ ಇವರಿಗೆ ಓರ್ವ ಅಂಗವಿಕಲ ಮಗನಿದ್ದಾನೆ.




