ಇವತ್ತು ಬೆಳ್ಳಂಬೆಳಗ್ಗೆ ಮೈಸೂರು ನಗರವಾಸಿಗಳು ಆತಂಕಗೊಂಡಿದ್ದಾರೆ. ಅದೊಂದು ಅನಾಮಿಕ ಕರೆಯಿಂದ ಮೈಸೂರಿಗರು ಭಯಭೀತರಾಗಿದ್ದಾರೆ.
ಮೈಸೂರಿನ ಪೀಪಲ್ಸ್ ಪಾರ್ಕ್‍ನಲ್ಲಿ ಬಾಂಬ್ ಇಟ್ಟಿರೋದಾಗಿ ಕರೆ ಬಂದಿದ್ದು, ಬಾಂಬ್ ಸ್ಕಾಡ್, ಡಾಗ್ ಸ್ಕಾಡ್‍ನಿಂದ ಸ್ಥಳ ಪರಿಶೀಲನೆ ನಡೆಯುತ್ತಿದೆ. ಬಟ್ಟೆಯಿಂದ ಸುತ್ತಿಟ್ಟಿರುವ ವಸ್ತು ಒಂದು ಪತ್ತೆಯಾಗಿದೆ. ಅದರಲ್ಲಿ ಬಾಂಬ್ ಇರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಪಾರ್ಕ್‍ಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.