ಮೈಸೂರು : ಐತಿಹಾಸಿಕ, ಜಗತ್ಪ್ರಸಿದ್ಧ ಮೈಸೂರು ಅರಮನೆಯ ಕೋಟೆ ಗೋಡೆ ಕುಸಿತಗೊಂಡಿದೆ. ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದ ಕೋಟೆ ಮಾರಮ್ಮ ದೇಗುಲ ಮತ್ತು ಜಯಮಾರ್ತಾಂಡ ದ್ವಾರದ ಮಧ್ಯೆಯ ಗೋಡೆ ಕುಸಿದಿದೆ.

ಶತ್ರುಗಳ ದಾಳಿಯಿಂದ ರಕ್ಷಣೆ ಪಡೆಯುವ ಸಲುವಾಗಿ ಮೈಸೂರು ಅರಮನೆಯ ಸುತ್ತ ಅಂದಿನ ಅರಸರ ಕಾಲದಲ್ಲಿ ಕೋಟೆ ನಿರ್ಮಿಸಲಾಗಿತ್ತು. ಇನ್ನ ನಿರಂತರವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ಕೋಟೆಯ ಗೋಡೆ ಶಿಥಿಲಗೊಂಡಿತ್ತು. ಆದ್ರೂ ಮೈಸೂರು ಜಿಲ್ಲಾಡಳಿತ ಮತ್ತು ಅರಮನೆ ಆಡಳಿತ ಮಂಡಳಿ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಇನ್ನ ಅಧಿಕಾರಿಗಳ ಬೇಜವಾಬ್ದಾರಿತನದಿಂದಲೇ ಅರಮನೆಯ ಕೋಟೆ ಗೋಡೆ ಕುಸಿತಗೊಂಡಿದೆ ಎಂದು ಮೈಸೂರಿನ ಪ್ರಜ್ಞಾವಂತ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.






