ಮೈಸೂರು ಪ್ರವಾಸಕ್ಕೆ ಎಂದು ಹೋಗಿದ್ದ ಅಪ್ರಾಪ್ತೆ ನಾಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹಾಸನ ಪದವಿ ಪೂರ್ವ ಹಾಸ್ಟೆಲ್ ನಲ್ಲಿದ್ದ ಬಾಲಕಿ ನಾಪತ್ತೆಯಾದವಳು.
ಈಕೆ ಅರುಣ್, ಮಹೇಶ್, ಶರತ್ ರಾಜ್ ಮತ್ತು ರಾಜೇಶ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.
ಇವರು ಜೂನ್ 19 ರಂದು ಬಾಲಕಿಯನ್ನು ಪ್ರವಾಕ್ಕೆಂದು ಮೈಸೂರಿಗೆ ಕರೆದುಕೊಂಡು ಹೋಗಿದ್ದರು. ಪ್ರವಾಸದ ವೇಳೆ ಬಾಲಕಿ ನಾಪತ್ತೆ ಆಗಿದ್ದಾಳೆಂದು ಆರೋಪಿಗಳು ಹೇಳಿದ್ದಾರೆ. ಬಾಲಕಿ ಪೋಷಕರು ಇದು ಅಪಹರಣ ಎನ್ನುತ್ತಿದ್ದಾರೆ. ಹಾಸನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐವರು ಆರೋಪಿಗಳನ್ನು ಬಂಧಿಸಲಾಗಿದೆ.