KA09-B-3353 ಈ ಸಂಖ್ಯೆಯ ಆಟೋ ಒಂದು ಮೈಸೂರಿನ ಬಸ್ ನಿಲ್ದಾಣದಲ್ಲಿ ನಾವು ಪ್ರೀಪೇಡ್ ಆಟೋ ನಿಲ್ದಾಣದಲ್ಲಿ ಪ್ರಯಾಣದ ಚೀಟಿ ಪಡೆದಾಗ ಬಂದು ನಿಂತಿತ್ತು. .
ಆಶ್ಚರ್ಯ ನನಗಾಗಿ ಕಾದಿತ್ತು ಕಾರಣ ಆಟೋ ಚಾಲಕಿ!
ಹೌದು ನಿಜವಾಗಿಯೂ ಆಕೆಯ ಹೆಸರು ಶೋಭ!(ಕರ್ನಾಟಕದ ಮೊದಲ ಮಹಿಳಾ ಆಟೋ ಚಾಲಕಿ)
ನನಗೆ ಕುತೂಹಲ ತಡೆಯದೆ ಕೆದಕಿದಂತ ವಿಷಯಗಳು ಅವರ ಮಾತುಗಳಲ್ಲಿ..
ಅಕ್ಕ ನಿಮ್ ಹೆಸರೇನು.?
ನಾನ.! ಶೋಭ ಅಂತಾ..!
ಅಕ್ಕ ಎಷ್ಟು ದಿನದಿಂದ ಈ ಕೆಲಸ ಮಾಡ್ತಿದಿರಾ.?
9 ವರ್ಷದಿಂದ , ನಾನು ಮೊದಲು ಈ ಕೆಲಸಕ್ಕೆ ಬಂದಾಗ ನನ್ ಹತ್ರ ಒಂದು ರೂಪಾಯಿ ಕಾಸು ಇರಲಿಲ್ಲ ಅಪ್ಪಿ! ಆದರೇ ನನ್ನ ತಾಳಿ ಓತ್ತೆ ಇಟ್ಟು ಈ ಕೆಲಸಕ್ಕೆ ಬಂದೆ.! ಮೊದಲು ಬೇರೇವ್ರ ಆಟೋ ಓಡ್ಸಿ ಇಷ್ಟು ಅಷ್ಟು ದುಡ್ಡು ಕೂಡಿಟ್ಟೇ ನನ್ನ ಒಬ್ಬ ಮಗಳನ್ನ ಓದುಸ್ತಿದೀನಿ.!
ಹೌದಾ..! ಅಕ್ಕ ನಿಮ್ ಮಗಳು ಏನು ಓದ್ತಿದಾರೇ.?
6ನೇ ಕ್ಲಾಸು.. ಇಲ್ಲೇ ಮೈಸೂರಲ್ಲಿ ಆದ್ರೇ ಜೀವ್ನ ಕಷ್ಟ ಏನೇ ಆದರೂ ಜೀವನ ಕಷ್ಟ ಅಪ್ಪೀ..!
ಡೈಲಿ ಮಂಡ್ಯ-ಮೈಸೂರು ಅಪ್ ಅಂಡ್ ಡೌನ್ ಮಾಡ್ತಿದೀನಿ ಅಪ್ಪೀ ಅಲ್ಲಿಂದ್ ಅಲ್ಲಿಗೇ ಸರಿ ಹೋಗ್ತದೇ.!
ಯಾಕ್ ಅಕ್ಕ ನಿಮ್ ಊರು ಮಂಡ್ಯನಾ.?
ಇಲ್ಲಾ ಅಪ್ಪಿ ನನಗೇ ಆರೋಗ್ಯ ಸರಿಯಿಲ್ಲಾ ಟ್ರೀಟ್ಮೆಂಟ್ ತಗೋಳೊಕೆ ಹೊಗ್ತಿನಿ ಡೈಲಿ , ಯಾವತ್ತೋ ಸತ್ತೋಗ್ತಿನಿ ಅಂತ ಡಾಕ್ಟರ್ ಹೇಳಿದ್ರು ಆದರೇ ಬದುಕಲೆ ಬೇಕು ಅಂತಾ ಹೋರಾಟ ಮಾಡ್ತಿದಿನಿ ಅಪ್ಪಿ.!
ಅಕ್ಕ ದಿನ ಎಷ್ಟು ಗಂಟೆ ಕೆಲಸ ಮಾಡ್ತಿರಾ?
ಬೆಳಗ್ಗೆ 4ರಿಂದ- ರಾತ್ರಿ 9ವರೆಗೆ! ಆಮೇಲೆ ಮನೆಗೆ ಹೋಗ್ತಿನಿ ಕಣಪ್ಪಾ.!
ನಿಮ್ ತರಾ ಇನ್ನೂ ಎಷ್ಟು ಜನ ಹೀಗೆ ಹೆಂಗಸರು ಆಟೋ ಓಡುಸ್ತಿದಾರೇ.? ಸರ್ಕಾರದ ಸೌಲಭ್ಯಗಳು ಏನಾದ್ರು ನಿಮಗೆ ಸಿಕ್ಕಿದ್ಯಾ.?
ನನ್ನನು ಸೇರ್ಸಿ ಮೂರು ಜನ ಇದೀವಿ.. ಅಯ್ಯೋ ಏನ್ ಸರ್ಕಾರನೋ ಏನೋ ಅವಗಾ ಆಟೋ oil service free ಮಾಡ್ತಿವಿ ಅಂದವ್ರು ಅದಾದ್ಮೇಲೆ ಹರಶಿವ ಅನ್ಲಿಲ್ಪಾಪ್ಪ! ಸುಮ್ಕೇ ಅಲ್ಲೊಂದ್ ಇಲ್ಲೊಂದ್ ಪ್ರೋಗ್ರಾಮ್ ಗಳಿಗೆ ಕರೆದು ಸನ್ಮಾನ ಮಾಡ್ತಾರೇ.. ಅದು ಅವ್ರ ಅವರ ಖುಷಿ.. ಹಾಗಂತ ನಾವು ಅವ್ರನ್ನೆ ಡಿಪೆಂಡ್ ಆಗೋಕ್ ಆಗತ್ತಾ..! ಎನ್ನುವಷ್ಟುರಲ್ಲಿ ನಾನು ಇಳಿಯ ಬೇಕಿದ್ದ terrasiun college, stop ಬಂದಿತ್ತು..
ಅಕ್ಕ ಒಂದು photo ಅಂದೆ ಅವರ ಮುಖದಲ್ಲಿ ನಗುವಿತ್ತು!
ನನ್ನೊಳಗೆ ಹೊಸತೊಂದು ನೋವು ಕಾಣಿಸಿ ಕೊಂಡಿತು (ಕಾರಣ ನಿಮ್ಮ ಪರಿಸ್ಥಿತಿ)..
ಆದರು ಅಕ್ಕ ನಿಮ್ಮಂತಹ ಹೆಣ್ಮಕ್ಕಳು ನಮ್ಮ ಸಮಾಜಕ್ಕೇ ಆದರ್ಶ! ಸ್ಪೂರ್ತಿದಾಯಕ.. ಇದು ಮಾತು ಕಥೆಯೊ.? ಸಂವಾದವೋ.. ನನ್ನಿಂದ ಆಗುವ ಸಹಾಯ ನಾನು ಮಾಡುತ್ತಿದ್ದೇನೆ..!
ದಯವಿಟ್ಟು ಎಲ್ಲಾ ಸಂಘಟನೆಗಳು ಸಹ ಇಂತಹವರನ್ನು ಸರ್ಕಾರದ ಗಮನಕ್ಕೆ ತಂದು ಅವರ ಆರೋಗ್ಯದ ಚಿಕಿತ್ಸೆಗೆ ವ್ಯವಸ್ಥೆ ಮಾಡಿ..
ಸ್ವಾವಲಂಬಿ ಬದುಕಿಗೆ ಪ್ರೋತ್ಸಾಹಿಸಿ..
- ಚೇತನ್ ದಾಸರಹಳ್ಳಿ
POPULAR STORIES :
ಪೊಲೀಸರ ಮೇಲೇಕೆ ಗೂಬೆ ಕೂರಿಸ್ತೀರಾ..? ರಾತ್ರಿ ಒಂಟಿಯಾಗಿ ಅಡ್ಡಾಡೋದನ್ನು ನಿಲ್ಲಿಸಿ..!?
ಅವಳಿಗೆ ಸೆಕ್ಸ್ ಬೇಜಾರಾಗಿದೆಯಂತೆ..! ವಿಚಾರ ಏನು..? ನೀವೇ ಓದಿ..!?
ರಾಜಧಾನಿಯಲ್ಲಿ ನಕಲಿ ಭಿಕ್ಷುಕರು..! ( ಭಾಗ- 1 ) ದಿ ನ್ಯೂ ಇಂಡಿಯನ್ ಟೈಮ್ಸ್ ಇನ್ವೆಸ್ಟಿಗೇಶನ್ ರಿಪೋರ್ಟ್..!