ಮೈಸೂರು ಸ್ಯಾಂಡಲ್ ಸೋಪ್ಗೆ ತಮನ್ನಾ ಭಾಟಿಯಾ ರಾಯಬಾರಿ..!
ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (KSDL) ತಯಾರಿಸುವ ಪ್ರಸಿದ್ಧ ಮೈಸೂರು ಸ್ಯಾಂಡಲ್ ಸೋಪ್ಗಳು ಮತ್ತು ಇತರ ಉತ್ಪನ್ನಗಳ ಬ್ರಾಂಡ್ ರಾಯಭಾರಿಯಾಗಿ ತಮನ್ನಾ ಅವರನ್ನು ನೇಮಿಸಲಾಗಿದೆ. ಈ ಒಪ್ಪಂದವು ಎರಡು ವರ್ಷಗಳ ಅವಧಿಗೆ ಆಗಿದ್ದು, ಇದಕ್ಕಾಗಿ ಆಕೆಗೆ ವರದಿಯ ಪ್ರಕಾರ, ಬೃಹತ್ ಮೊತ್ತದ ರೂ. 6.2 ಕೋಟಿ ಪಾವತಿಸಲಾಗುತ್ತಿದೆ.
ಹೌದು ಎರಡು ವರ್ಷಗಳ ಮೈಸೂರು ಸ್ಯಾಂಡಲ್ ಸೋಪ್ ತಮನ್ನಾ ಫೋಟೋ ಇರಲಿದೆ. ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿ ಅಧಿಕೃತ ಬ್ರಾಂಡ್ ರಾಯಭಾರಿಯಾಗಿ ತಮನ್ನಾ ಭಾಟಿಯ ಇವರನ್ನು 2 ವರ್ಷ ಮತ್ತು ಎರಡು ದಿನಗಳ ಅವಧಿಗೆ ರೂ.6.20 ಕೋಟಿ ವೆಚ್ಚದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಭಾರತದಲ್ಲಿಯೇ ಅತಿದೊಡ್ಡ ಮೈಸೂರು ಸ್ಯಾಂಡಲ್ ಸೋಪ್ ತಯಾರಿಸುವ ಬೆಂಗಳೂರಿನಲ್ಲಿರುವ ಕೆಎಸ್ಡಿಎಲ್ನ ಸೋಪ್ ಕಾರ್ಖಾನೆಯಾಗಿದೆ. ವರ್ಷಕ್ಕೆ 26,000 ಟನ್ ಸೋಪ್ ಉತ್ಪಾದಿಸುವ ಸ್ಥಾಪಿತ ಸಾಮರ್ಥ್ಯವನ್ನು ಈ ಕಾರ್ಖಾನೆಯನ್ನು ಹೊಂದಿದೆ.
ಮೈಸೂರು ಸ್ಯಾಂಡಲ್ ಸೋಪ್ ತಯಾರಿಸುವ ಬೆಂಗಳೂರಿನಲ್ಲಿರುವ ಕೆಎಸ್ಡಿಎಲ್ನ ಸೋಪ್ ಕಾರ್ಖಾನೆ ಭಾರತದಲ್ಲಿಯೇ ಅತಿದೊಡ್ಡ ಕಾರ್ಖಾನೆಯಾಗಿದೆ. ವರ್ಷಕ್ಕೆ 26,000 ಟನ್ ಸೋಪ್ ಉತ್ಪಾದಿಸುವ ಸ್ಥಾಪಿತ ಸಾಮರ್ಥ್ಯವನ್ನು ಈ ಕಾರ್ಖಾನೆಯನ್ನು ಹೊಂದಿದೆ. ಆದರೇ ಈ ಸುದ್ದಿ ತಿಳಿಯುತ್ತಿದ್ದಂತೆ ವ್ಯಾಪಕ ಟೀಕೆ ಕೇಳಿ ಬರುತ್ತಿದ್ದು, ಕರ್ನಾಟಕದಲ್ಲಿ ಯಾವ ನಟಿಯೂ ಇಲ್ಲವೆ ಎಂದು ಕಿಡಿಕಾರಲಾಗುತ್ತಿದೆ.