ಮೈಸೂರು ವಿಮಾನ ನಿಲ್ದಾಣದ ಉನ್ನತೀಕರಣ ಹಾಗೂ ರನ್ ವೇ ವಿಸ್ತರಣೆಗಾಗಿ 2ನೇ ಹಂತದಲ್ಲಿ 100 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಅಗತ್ಯವಿರುವ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರ್ಕಾರದಿಂದ 319 ಕೋಟಿ 13 ಲಕ್ಷ 90 ಸಾವಿರದ 625 ರೂ. ಮಂಜೂರಾಗಿದೆ. ಇದರ ಭಾಗವಾಗಿ ಈ ಹಿಂದೆಯೇ ಮೊದಲ ಹಂತದಲ್ಲಿ ರೂ.50 ಕೋಟಿಗಳು ಕೆ.ಐ.ಎ.ಡಿ.ಬಿ ಗೆ ಬಿಡುಗಡೆಯಾಗಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗಿದೆ.
ಕಾಮಗಾರಿಯನ್ನು ತ್ವರಿತವಾಗಿ ಪ್ರಾರಂಭಿಸುವ ಹಿನ್ನಲೆಯಲ್ಲಿ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡುವಂತೆ ಸಂಸದ ಪ್ರತಾಪ್ ಸಿಂಹ ರವರ ಕೋರಿಕೆಯ ಮೇರೆಗೆ ಇಂದು 2ನೇ ಹಂತದಲ್ಲಿ 100 ಕೋಟಿಗಳನ್ನು ಕೆ.ಐ.ಎ.ಡಿ.ಬಿ ಗೆ ಬಿಡುಗಡೆ ಮಾಡಿದ್ದು, ಭೂಸ್ವಾಧೀನ ಪಡಿಸಿಕೊಳ್ಳುವ ಕಾರ್ಯವನ್ನು ತುರ್ತಾಗಿ ಕೈಗೊಳ್ಳಲಾಗಿದೆ.