ಮೈತ್ರಿಯಾ ಗೌಡ. ವಿವಾದಗಳ ಮೂಲಕ ಸುದ್ದಿಯಾದ ನಟಿ. ಸಿನಿಮಾ ನಟಿಯಾಗುವ ಲಕ್ಷಣಗಳಿದ್ದ ಸಾಮಾನ್ಯ ಸುಂದರಿ. ಬಸವೇಶ್ವರ ನಗರದ ಟ್ರಾಫಿಕ್ ಪೊಲೀಸ್ ಒಬ್ಬರ ಕಪಾಳಕ್ಕೆ ಬಿಗಿಯುವ ಮೂಲಕ ಸುದ್ದಿಯಾದರು. ಅವತ್ತು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಬೇಕಾಬಿಟ್ಟಿ ಕೂಗಾಡಿ.. `ಏನ್ `ಲಾ….” ಅಂತೆಲ್ಲಾ ಕಾನೂನು ಮಾತನಾಡಿದ್ದ ಮೈತ್ರಿಯಾ, ಆ ಕೇಸಲ್ಲಿ ಒಂದೆರಡು ದಿನ ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿದು ಬಂದರು. ಈಗ ಆ ಕೇಸಿಗೆ ಸಂಬಂಧಪಟ್ಟಂತೆ ಸಿವಿಲ್ ನ್ಯಾಯಾಲಯ ಎರಡು ವರ್ಷದ ಜೈಲು ಶಿಕ್ಷೆ ವಿಧಿಸಿದೆ. ಕೂಡಲೇ ಜಾಮೀನೂ ಸಿಕ್ಕಿದೆ. ಅವತ್ತು ಪೊಲೀಸ್ ಟ್ರಾಫಿಕ್ ಪೊಲೀಸ್ ಕಾನಸ್ ಟೇಬಲ್ ಮೇಲೆ ಹಲ್ಲೆ ಮಾಡಿದ ನಂತರ ಮೈತ್ರಿಯಾ ಸುಳಿವಿರಲಿಲ್ಲ. ಆದರೆ ಸದಾನಂದಗೌಡರ ಮಗನ ಎಂಗೇಜ್ಮೆಂಟ್ ನಡೀತಿತ್ತು ನೋಡಿ, ಬೋರ್ರೆಂದು ಬೀಸಿ ಬಂದಿದ್ದರು.
`ನನಗೂ ಸ್ಮೈಲ್ ಗೌಡ್ರ ಮಗನಿಗೂ ಮದ್ವೆ ಆಗಿದೆ, ಈಗ ಬೇರೊಬ್ಬ ಹುಡ್ಗಿ ಜೊತೆ ಎಂಗೇಜ್ ಮೆಂಟ್ ಮಾಡಿಕೊಳ್ಳುತ್ತಿದ್ದಾನೆ. ನನಗೆ ನ್ಯಾಯ ಕೊಡಿಸಿ’ ಅಂತ ಒಂದೇ ಕಣ್ಣಿನಲ್ಲಿ ಅಳುತ್ತಾ ಬಂದರು. `ಅರೇ.. ಇವಳು ಅದೇ ಹಳೇ ಪೊಲೀಸ್ ಕೇಸಲ್ವಾ..?’ ಅಂತ ಸಮಜಾಯಿಷಿಗೆ ಬರುವಷ್ಟರಲ್ಲಿ, ಸದಾನಂದಗೌಡರ ಮರ್ಯಾದೆಯನ್ನು ತೂಕಕ್ಕೆ ಹಾಕಿಬಿಟ್ಟಿದ್ದರು. ಗೌಡರ ಸ್ಮೈಲ್ ಮಾಯವಾಗಿತ್ತು. ಅಷ್ಟಕ್ಕೂ ಮೈತ್ರಿಯಾ ಅವತ್ತು ಹೇಳಿದ್ದಿಷ್ಟು, `ಗೌಡರ ಮಗ ಕಾರ್ತಿಕ್ ಹಾಗೂ ನಾನು ಲವ್ ಮಾಡ್ತಾ ಇದ್ವಿ, ಈಗ್ಗೆ ಎರಡು ತಿಂಗಳ ಹಿಂದೆ ಮಂಗಳೂರಿನಲ್ಲಿ ಸದಾನಂದ ಗೌಡರ ಮನೆಯಲ್ಲೇ ನನಗೆ ಅರಿಶಿನ ದಾರ ಕಟ್ಟಿದ್ದ. ಅದಕ್ಕೆ ಅವರ ಮನೆಯ ದೇವರ ಕೋಣೆಯಲ್ಲಿರುವ ದೇವರೇ ಸಾಕ್ಷಿ’
`ಹೌದಮ್ಮಾ, ಎಲ್ಲಾ ಸರಿ, ಆದ್ರೆ ಈ ದೇವರ ಕೋಣೆಯ ಮದ್ವೆಗಳಿಗೆ ಈಗಿನ ಕಾನೂನಿನಲ್ಲಿ ಪ್ರಾಶಸ್ತ್ಯವಿಲ್ವಲ್ಲಾ..?, ಅದೂ ಹೋಗ್ಲಿ.. ಅವನು ಅರಿಶಿನ ದಾರ ಕಟ್ಟಿದ್ದಕ್ಕೆ ಒಂದೇ ಒಂದು ಫೋಟೋ ಅಥವಾ ಸಾಕ್ಷಿ ಕೊಡಮ್ಮಾ ಅಂದ್ರೇ.. `ಅದೊಮ್ಮೆ ಇದೆ’ ಎಂದರು..! ಇನ್ನೊಮ್ಮೆ `ಇಲ್ಲಾ..’ ಎಂದರು. ಅಂತಿಮವಾಗಿ ನನ್ನದು ನಿಷ್ಕಲ್ಮಶ ಪ್ರೀತಿ ಎಂದು ಲೀಟರ್ ಗಟ್ಟಳೆ ಕಣ್ಣೀರು ಸುರಿಸಿದರು. ಈ ವಿಚಾರವಾಗಿ ಸ್ಮೈಲ್ ಗೌಡರ ಕುಟುಂಬದ ಮೂಲಗಳು, `ಇದು ಯಾರೋ ನಮ್ಮ ವಿರುದ್ಧ ಮಾಡಿರುವ ಪಿತೂರಿ, ಈ ವಿವಾದಕ್ಕೂ ನಮಗೂ ಸಂಬಂಧವಿಲ್ಲ, ತನಿಖೆಯಾಗಲಿ’ ಎಂದರು. ಅತ್ತ ಕುಶಾಲನಗರದ ಚಂದದ ಹುಡ್ಗಿ ಸ್ವಾತಿ ಜೊತೆ ಕಾರ್ತಿಕ್ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದರೇ, ಇತ್ತ ಮೈತ್ರಿಯಾ ಮತ್ತವರ ಕುಟುಂಬದವರು ಆರ್.ಟಿ. ನಗರ ಪೊಲೀಸ್ ಠಾಣೆಯಲ್ಲಿ ಗೌಡರ ಮಗನ ಮೇಲೆ ಇಷ್ಟುದ್ದದ ಕಂಪ್ಲೆಂಟ್ ಕೊಟ್ಟಿದ್ದರು.
`ದಿನಾಂಕ 08.05.2014ರಂದು ಸದಾನಂದ ಗೌಡರ ಪುತ್ರ ಕಾರ್ತಿಕ್ ಗೌಡ ಸಂಜಯ್ ನಗರದಲ್ಲಿರುವ ಕಾಫಿ ಡೇನಲ್ಲಿ ನನಗೆ ಪರಿಚಯವಾಗಿದ್ದ. ಪರಿಚಯ ಪ್ರೇಮಕ್ಕೆ ತಿರುಗಿ, ಅದೊಂದು ದಿನ ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿದ್ದ. ದಿನಾಂಕ 05.06.2014 ರಂದು ಮಂಗಳೂರಿಗೆ ಕರೆದುಕೊಂಡು ಹೋಗಿ ತಾನು ಬೇಡವೆಂದರೂ ನಂಬಿಸಿ ಬಲವಂತವಾಗಿ ಅತ್ಯಾಚಾರ ಮಾಡಿದ. ಆಮೇಲೆ ಬೆಂಗಳೂರಿನ ಗೋದ್ರೇಜ್ ಅಪಾಟರ್ಟ್ ಮೆಂಟ್, ಕಂಟ್ರಿ ಕ್ಲಬ್, ಸಂಜಯ್ ನಗರ ಮತ್ತು ಇತರ ಸ್ಥಳಗಳಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ. ಒಟ್ಟಿನಲ್ಲಿ ಮದುವೆ ಮಾಡಿಕೊಳ್ಳುವುದಾಗಿ ಮೋಸ ಮಾಡಿದ್ದಾನೆ’ ಎಂದು ದೂರುಕೊಟ್ಟರು. ಆದರೆ ಇದೀಗ ಕಾರ್ತಿಕ್ ಗೌಡ, ಸ್ವಾತಿಯನ್ನು ಮದುವೆಯಾಗಿದ್ದಾರೆ. ಎಂಗೇಜ್ಮೆಂಟ್ ದಿನ ಸದ್ದುಮಾಡಿದ್ದ ಮೈತ್ರಿಯಾ, ಮದುವೆ ದಿನ ನಾಪತ್ತೆಯಾದರು. ಏಕೆ..? ತೆರೆಮರೆಯ ಒಪ್ಪಂದಗಳೇನು..? ಪಾವತಿಯಾದ ಮೊತ್ತಗಳೆಷ್ಟು..? ಎಲ್ಲವೂ ರಹಸ್ಯವಾಗಿಯೇ ಉಳಿದಿದೆ.
ಅಷ್ಟಕ್ಕೂ ಬಸವೇಶ್ವರನಗರದಲ್ಲಿ ಸಿಗ್ನಲ್ ಜಂಪ್ ಮಾಡಿ, ಟ್ರಾಫಿಕ್ ಪೊಲೀಸ್ ಕಪಾಳಕ್ಕೆ ಬಾರಿಸಿ ಲಾ… ಮಾತನಾಡಿದ್ದ ಈ ಚೆಲುವೆಗೆ, ದೇವರ ಕೋಣೆಯಲ್ಲಿ ನಡೆದ ಮದ್ವೆಗೆ ಮುಂದೊಂದು ದಿನ ಪ್ರೂಫ್ ಬೇಕಾಗುತ್ತೆ ಅಂತ ಒಂದು ಫೋಟೋ ತೆಗೆಸಿಕೊಳ್ಳುವ ವ್ಯವಧಾನವಿರಲಿಲ್ಲವೇ..? ಇವತ್ತಿಗೆ ವಾರದ ಮೇಲೆ ಎರಡು ದಿನ ಕಳೆಯುವುದರೊಳಗೆ ಪ್ರೇಮಿಗಳು ಹತ್ತಾರು ಫೋಟೋ ತೆಗೆಸಿಕೊಳ್ಳುತ್ತಾರೆ. ಹೀಗಿರುವಾಗ ಮೈತ್ರಿಯಾಳಂಥ ಬುದ್ದಿವಂತೆಗೆ ಈ ಸಣ್ಣ ಆಲೋಚನೆಯೂ ಬಂದಿಲ್ಲವೇ..?. ಯಕಃಶ್ಚಿತ್ ತನ್ನ ಅಕ್ಕ, ಸ್ನೇಹಿತೆಯರು ಯಾರನ್ನಾದರೂ ಸಾಕ್ಷಿಗಿಟ್ಟುಕೊಳ್ಳಬಹುದಿತ್ತಲ್ವಾ..? ಹೋಗ್ಲೀ.. ಅದೊಂದು ಎಮೋಷನಲ್ ಬ್ಲಾಕ್ ಮೇಲ್ ಇರಬಹುದು ಅಂತಿಟ್ಕೊಳ್ಳಿ. ಆದರೆ ನನ್ನ ಮೇಲೆ ಅತ್ಯಾಚಾರ ಮಾಡಿದ ಅಂತ ಹರಿಹಾಯುತ್ತಿದ್ದ ಮೈತ್ರಿಯಾಗೆ ಮದ್ವೆ ಆದ ಮೇಲೆ ಫಿಸಿಕಲ್ ರಿಲೇಷನ್ ಶಿಪ್ ರೇಪ್ ಅಗೋದಿಲ್ಲ ಅಂತ ಗೊತ್ತಿಲ್ಲವಾ..? ಅಷ್ಟಕ್ಕೂ ನಮ್ಮಿಬ್ಬರ ಮಧ್ಯೆ ಫಿಸಿಕಲ್ ರಿಲೇಷನ್ ಶಿಪ್ ಇಲ್ಲ ಅಂದಿದ್ದ ಇದೇ ಮೈತ್ರಿ ಕೆಲವೇ ಘಂಟೆಗಳಲ್ಲಿ ಕಾರ್ತಿಕ್ ರೇಪ್ ಮಾಡಿದ ಅಂತ ಕಣ್ಣೀರು ಹಾಕಿದ್ದು ಯಾಕೆ..? ಅಸಲಿಗೆ ಅವರಲ್ಲಿಯೇ ಕ್ಲಾರಿಟಿ ಇರಲಿಲ್ಲ. ಇದು ಅವತ್ತು ಕಾಡಿದ್ದ ಪ್ರಶ್ನೆಗಳು. ಈ ನಡುವೆ ಮೈತ್ರಿಯಾಳನ್ನು ನಾನು ಮದ್ವೆಯಾಗಿದ್ದೀನಿ ಅಂತ ಋಷಿಮುನಿಗಳು ಬಂದರು. ಬಂದಷ್ಟೆ ವೇಗವಾಗಿ ಹೊರಟುಹೋದರು. ಈಗ ಈ ಎಲ್ಲಾ ಕಥೆಗಳು ಮುಗಿದಿದೆ. ಸಧ್ಯಕ್ಕೆ ಸಿವಿಲ್ ನ್ಯಾಯಾಲಯ ಟ್ರಾಫಿಕ್ ಪೊಲೀಸ್ ಮೇಲೆ ಹಲ್ಲೆ ಮಾಡಿದ್ದಕ್ಕೆ ಮೈತ್ರಿಯಾಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅವರಿಗೆ ಜಾಮೀನು ಸಿಕ್ಕಿದೆ. ಈ ಕಾರಣದಿಂದ ಹಳೆಯದ್ದೆಲ್ಲಾ ನೆನಪಾಯಿತಷ್ಟೇ..!!
- ರಾ ಚಿಂತನ್
POPULAR STORIES :
ಬಹುನಿರೀಕ್ಷಿತ 3 ಪೆಗ್ ಕನ್ನಡ ರ್ಯಾಪ್ ಸಾಂಗ್ ..!
70 ವರ್ಷದ ಕುರುಡು ಅಜ್ಜಿಗೆ ಕಣ್ಣುಬಂತು..!? ವಿಜ್ಞಾನವನ್ನೇ ಬೆಚ್ಚಿಬೀಳಿಸಿದ ಘಟನೆ..!
ಹಾಸನ ಸೂಸೈಡ್ ಕೇಸ್ಗೆ ಟ್ವಿಸ್ಟ್..! ಅವನ ಸಾವಿಗೆ ಕಾರಣವಾಗಿದ್ದು `ಪ್ರೇಯಸಿ’ ರೂಪದ ಅತ್ತಿಗೆ..!
ಮಾದಕ ನಟಿಗೆ ಇವತ್ತು ಬರ್ತ್ ಡೇ ಸಂಭ್ರಮ..! ಅವಳ ಬದುಕಿನಲ್ಲಿ ಗುಡುಗು, ಸಿಡಿಲಿನದ್ದೇ ಆರ್ಭಟ..! Sunny Leone Story
ದೇವರನಾಡಿಗೂ ದೆವ್ವದ ನಾಡಿಗೂ ಎಲ್ಲಿಯ ಸಂಬಂಧ..!? ನರೇಂದ್ರ ಮೋದಿ ಎಡವುತ್ತಿರುವುದೆಲ್ಲಿ..!?