ಸಹೋದರನ ಪತ್ನಿ ಮತ್ತು ಮಗಳ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡೋದಾಗಿಬೆದರಿಕೆಯೊಡ್ಡಿದ ಆರೋಪದಡಿ ಬಂಧನಕ್ಕೆ ಒಳಗಾಗಿದ್ದ ರೌಡಿ ನಾಗರಾಜ್ ಅಲಿಯಾಸ್ ರೌಡಿ ನಾಗ ಬೇಲ್ ಪಡೆದು ಹೊರಬಂದು ವಿಷ ಕುಡಿದು ಹೈಡ್ರಾಮ ಮಾಡಿದ್ದಾನೆ.

ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಈತ, ತನಗೆ ಸಚಿವ ಕೆ.ಜೆ ಜಾರ್ಜ್ ಮತ್ತು ಕೆಪಿಸಿಸಿ ಕಾರ್ಯಾದ್ಯಕ್ಷ ದಿನೇಶ್ ಗುಂಡೂರಾವ್ ಅವರಿಂದ ಮೋಸವಾಗಿದೆ. ಜೊತೆಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಪೊಲೀಸರನ್ನು ಉಪಯೋಗಿಸಿಕೊಂಡು ಮನೆ ಮೇಲೆ ದಾಳಿ ಮಂಡಿಸಿದ್ದಾರೆಂದು ಆರೋಪಿಸಿದ್ದಾನೆ.

ಬೆಂಗಳೂರು ಬಿಟ್ಟು ಹೋಗುವಂತೆ ಒತ್ತಡ ಹಾಕಿದ್ದಾರೆ ಎಂದು ಒಟ್ಟು 81 ಮಂದಿ ಮೇಲೆ ನಾಗ ಆರೋಪಿಸಿ ವಿಷ ಕುಡಿದಿದ್ದಾನೆ. 51 ಪುಟಗಳ ಡೆತ್ ನೋಟ್ ಬರೆದುಕೊಂಡು ಬಂದಿದ್ದ. ಸೆಂಟ್ ಮಾರ್ಥನ್ ಆಸ್ಪತ್ರೆಗೆ ದಾಖಲಿಸಲಾಗಿದೆ.



