ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿರೋ ಸ್ಯಾಂಡಲ್ ವುಡ್ ನಿರ್ದೇಶಕ ನಂದ ಕಿಶೋರ್ ಹಾಲಿವುಡ್ ಗೆ ಎಂಟ್ರಿಕೊಟ್ಟಿದ್ದಾರೆ…!
ವಿಕ್ಟರಿ , ಅಧ್ಯಕ್ಷ, ರನ್ನ ,ಮುಕುಂದ ಮುರಾರಿ ಅಂತಹ ಹಿಟ್ ಸಿನಿಮಾಗಳನ್ನು ನೀಡಿದ ನಿರ್ದೇಶ ನಂದ ಕಿಶೋರ್ ಹಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಹೀಗೆ ಹಾಲಿವುಡ್ ಗೆ ಹಾರಿದ ಮೊದಲ ಕನ್ನಡ ನಿರ್ದೇಶಕ ಎಂಬ ಖ್ಯಾತಿ ನಂದ ಕಿಶೋರ್ ಅವರದ್ದು. ನಂದಕಿಶೋರ್ ಅವರ ಈ ಹಾಲಿವುಡ್ ಸಿನಿಮಾ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲೂ ತೆರೆಕಾಣಲಿದೆ.
ಇನ್ನಂದು ವಿಶೇಷವೆಂದರ್ ಈ ಹಾಲಿವುಡ್ ಸಿನಿಮಾದ ನಾಯಕ ಅನೂಪ್ ರೇವಣ್ಣ…! ಕಳೆದ ಒಂದು ವರ್ಷದಿಂದ ಅನೂಪ್ ಈ ಚಿತ್ರಕ್ಕಾಗಿ ನ್ಯೂಯಾರ್ಕ್ ಫಿಲ್ಮ್ಸ್ ನಲ್ಲಿ ತರಬೇತಿ ಪಡೀತಾ ಇದ್ದಾರೆ.
2018ರಲ್ಲಿ ಸಿನಿಮಾ ಕೆಲಸ ಆರಂಭವಾಗಲಿದೆಯಂತೆ. ಫೆಬ್ರವರಿ 8ರಂದು ಅನೂಪ್ ಹುಟ್ಟುಹಬ್ಬದಂದು ಫಸ್ಟ್ ಲುಕ್ ರಿಲೀಸ್ ಆಗಲಿದೆಯಂತೆ.