ಸ್ಯಾಂಡಲ್ ವುಡ್ ನಲ್ಲೀಗ ಮದುವೆ ಸಂಭ್ರಮ. ಒಂದಾದ ಮೇಲೊಂದರಂತೆ ತಾರೆಯರು ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ.
ನಿನ್ನೆಯಷ್ಟೇ ನಟ ಸುನೀಲ್ ರಾವ್ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿನ್ನೆಯೇ ರಿಯಾಲಿಟಿ ಶೋವೊಂದರ ವಿನ್ನರ್ ನಯನ ಪುಟ್ಟಸ್ವಾಮಿ ಸಹ ನಿನ್ನೆಯಿಂದ ನವ ಜೀವನ ಆರಂಭಿಸಿದ್ದಾರೆ.
ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ವಿನ್ನರ್ ಆಗಿದ್ದ ನಯನ ಪುಟ್ಟಸ್ವಾಮಿ ಅವರು ಚರಣ್ ತೇಜ್ ಎಂಬುವವರನ್ನು ವರಿಸಿದ್ದಾರೆ.
ಚರಣ್ ಅವರು ಹೈದರಾಬಾದ್ ಮೂಲದವರಾಗಿದ್ದು ಕಳೆದ ಡಿಸೆಂಬರ್ ನಲ್ಲಿ ನಯನ ಮತ್ತು ಇವತ ನಿಶ್ಚಿತಾರ್ಥ ನಡೆದಿತ್ತು.