ಡಿಸೆಂಬರ್ 6ಕ್ಕೆ ತೆರೆಗೆ ಬರಲಿದೆ ಚರಂತಿ..
ಕೆಲವೇ ಕೆಲವರು ತಮ್ಮ ಸಿನಿಮಾ ಹಾಗಿದೆ ಹೀಗೆ ಅಂತ ಹೇಳದೆ, ನೀವು ಸಿನಿಮಾ ನೋಡಿ ಆಮೇಲೆ ನೀವೆ ಹೇಳಿ ಅಂತಾರೆ.. ಅಂತ ಡೈರೆಕ್ಟರ್ ಗಳ ಸಾಲಿನಲ್ಲಿ ನಿಲ್ಲುವ ನಿರ್ದೇಶಕ ಮಹೇಶ್ ರಾವಲ ಅವರು.. ಸೈಲೆಂಟ್ ಆಗಿ ಒಂದು ಸಿನಿಮಾ ಮಾಡಿ, ಈಗ ರಿಲೀಸ್ ಹಂತಕ್ಕೆ ತಂದು ಬಿಟ್ಟಿದ್ದಾರೆ.. ಇದೇ ಡಿಸಂಬರ್ 6ಕ್ಕೆ ಚರಂತಿ ಚಿತ್ರ ತೆರೆಗೆ ಬರ್ತಿದೆ..
ಸದ್ಯ ಚಿತ್ರದ ಟ್ರೇಲರ್ ಚರಂತಿಯಲ್ಲಿ ಏನೋ ಇದೆ ಅನ್ನೋದನ್ನ ಸಾರಿ ಹೇಳ್ತಿದೆ.. ಪಕ್ಕ ನಾಟಿ ಸ್ಟೈಲ್ ಅಂತಾರಲ್ಲ ಹಾಗಿದೆ ಚರಂತಿ ಚಿತ್ರದ ಟ್ರೇಲರ್.. ನಮ್ಮ ಉತ್ತರಕರ್ನಾಟಕ ಮಂದಿಯ ಭಾಷೆಯ ಅಂದ, ಅಲ್ಲಿನ ನೆಲದ ಚಂದ, ಮುದ್ದಾದ ಒಂದು ಲವ್ ಸ್ಟೋರಿ, ಸಿಕ್ಕಾಪಟ್ಟೆ ಆಕ್ಷನ್, ಕಾಮಿಡಿ ಜೊತೆಗೆ ಸೆಂಟಿಮೆಂಟ್, ಖಡಕ್ ಡೈಲಾಗ್ ಎಲ್ಲವನ್ನು ಸೇರಿಸಿ ಒಂದೊಳ್ಳೆ ಮನರಂಜನಾತ್ಮಕ ಸಿನಿಮಾ ಮಾಡಿದೆ ಚರಂತಿ ಟೀಮ್…
ಬಾಗಲಕೋಟೆ ಜಿಲ್ಲೆ ಬನಹಟ್ಟಿಯ ರಾವಲ್ ಸಿನಿ ಫೋಕಸ್ ಲಾಂಛನದಡಿ ಡಾ.ಪರಶುರಾಮ್ ರಾವಲ್ ಈ ಯುಥ್ ಫುಲ್ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ.. ಇನ್ನು ಡೈರೆಕ್ಷನ್ ಮಾತ್ರವಲ್ಲದೆ ಮಹೇಶ್ ರಾವಲ್ ಅಭಿನಯಿಸಿದ್ದಾರೆ.. ಈಗಾಗ್ಲೇ ಹಲವು ಚಿತ್ರಗಳಲ್ಲಿ ಅಭಿನಯಿಸಿ ಅನುಭವಿರುವ ಮಹೇಶ್ ರಾವಲ್ ತಮ್ಮೊಂದಿಗೆ ಹೊಸದೊಂದು ತಂಡವನ್ನ ಕಟ್ಟಿಕೊಂಡು, ಉದಯೋನ್ಮುಖ ಕಲಾವಿದರಿಗೆ ಚಿತ್ರದಲ್ಲಿ ಸ್ಥಾನ ನೀಡಿ ಅವರಿಂದಲು ಅಭಿನಯವನ್ನ ತೆಗೆಸಿದ್ದಾರೆ…
ಇದೇ ವಾರ ಚರಂತಿ ‘ಜರ್ನಿ ಆಫ್ ಲವ್‘ ತೆರೆಗೆ ಬರ್ತಿದ್ದು, ಹಾಡುಗಳು ಕೂಡ ಸಿನಿ ಪ್ರೇಮಿಗಳನ್ನ ರಂಜಿಸುವಲ್ಲಿ ಯಶಸ್ವಿಯಾಗಿವೆ.. ಸಿನಿಮಾ ರಂಗದಲ್ಲಿ ಮತ್ತಷ್ಟು ಒಳ್ಳೆಯ ಚಿತ್ರಗಳನ್ನ ನೀಡಬೇಕೆಂದು ಹಂಬಲ ಹೊಂದಿರುವ ಈ ಸೋದರರ ಚರಂತಿ ಸಿನಿಮಾಗೆ ನಿಮ್ಮ ಬೆಂಬಲದ ಅವಶ್ಯಕತೆ ಇದೆ.