ಪ್ಯಾನ್ ಕಾರ್ಡ್ ಪಡೆಯಲು ಹೊಸ ನಿಯಮ ಜಾರಿ : ನಿಮಗೆ ಪ್ಯಾನ್ ಕಾರ್ಡ್ ಬೇಕು ಎಂದಾದರೆ ಹೀಗೆ ಮಾಡಿ..!!
ಪ್ಯಾನ್ ಕಾರ್ಡ್.. ಪರ್ಮನೆಂಟ್ ಅಕೌಂಟ್ ನಂಬರ್.. ಸದ್ಯ ಬ್ಯಾಂಕ್ ಖಾತೆ ತೆರೆಯಲು, ಹಣದ ವರ್ಗಾವಣೆ ಮಾಡಲು, ಲೋನ್ ಸೇರಿದಂತೆ ಹಣಕಾಸಿಗೆ ಸಂಬಂಧಪಟ್ಟ ಎಲ್ಲ ವಿಚಾರಗಳಿಗೂ ಪ್ಯಾನ್ ಕಾರ್ಡ್ ಅತೀ ಮುಖ್ಯವಾಗಿದೆ.. ಪಾನ್ ಕಾರ್ಡ್ ಇಲ್ಲದಿದ್ರೆ ಯಾವುದೇ ವಹಿವಾಟು ನಡೆಸಲು ಕಷ್ಟವಾಗುತ್ತೆ.. ಹೀಗಾಗೆ ಪ್ರತಿಯೊಬ್ಬರು ತಮ್ಮ ಒಂದು ಪ್ಯಾನ್ ಕಾರ್ಡ್ ಅನ್ನ ಹೊಂದುವುದು ಉತ್ತಮ ಜೊತೆಗೆ ಅನಿವಾರ್ಯ..
ಸದ್ಯ ಹೊಸ ಪ್ಯಾನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲಿರುವವರಿಗೆ ನೂತನ ನಿಯಮವನ್ನ ಜಾರಿ ಮಾಡಲಾಗಿದೆ.. ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಹೊಸ ನಿಮಾಯವಳಿಯನ್ನ ರೂಪಿಸಿದೆ.. ಇದರ ಅನ್ವಯ ಪ್ಯಾನ್ ಕಾರ್ಡ್ ನ ಅರ್ಜಿಯಲ್ಲಿ ತಂದೆ ಹೆಸರನ್ನ ತಿಳಿಸುವ ಅಗತ್ಯವಿಲ್ಲ.. ಅರ್ಜಿದಾರನಿಗೆ ತಾಯಿ ಸಿಂಗಲ್ ಪೇರೆಂಟ್ ಆಗಿದ್ದಾರೆ ಕೇವಲ ತಾಯಿಯ ಹೆಸರನ್ನ ನಮೂದಿಸಿದರೆ ಸಾಕು.. ಕೇವಲ ತಾಯಿಯಿಂದ ಅರ್ಜಿದಾರ ಪೋಷಿಸಲ್ಟಟ್ಟಿದ್ದರೆ ತನ್ನ ತಾಯಿ ಹೆಸರನ್ನ ನೀಡಬಹುದಾಗುತ್ತದೆ.. ಇನ್ನು 2.5 ಲಕ್ಷಕ್ಕಿಂತ ಮೇಲ್ಟಟ್ಟು ವಹಿವಾಟ ನಡೆಸುವ ಸಂಸ್ಥೆಗಳು ಪ್ಯಾನ್ ಕಾರ್ಡ್ ಪಡೆಕೊಳ್ಳುವುದು ಕಡ್ಡಾಯವಾಗಿದೆ.. ಈ ನಿಯಮ ಡಿಸೆಂಬರ್ 5ರಿಂದ ಜಾರಿಗೆ ಬರಲಿದೆ..