ರೈಲಿನಲ್ಲಿ ಪ್ರಯಾಣ ಬೆಳೆಸುವವರು ತಿಳಿಯಲೇ ಬೇಕಾದ ಮಾಹಿತಿ..!
ಏನಪ್ಪಾ ಅಂದ್ರೆ ರೈಲ್ವೇ ತನ್ನ ವ್ಯವಸ್ಥೆಯಲ್ಲಿ ಕೆಲವೊಂದು ಮಾರ್ಪಡುಗಳನ್ನು ಮಾಡಿಕೊಂಡಿದೆ..! ಈಗಿನ ರೈಲ್ವೇ ಹೊಸ ನಿಯಮದಂತೆ “ರೈಲು ಹೊರಡುವುದಕ್ಕೂ 30 ನಿಮಿಷ ಮೊದಲೂ ಸಹ ಆನ್ ಲೈನ್ ನಲ್ಲಿ ಟಿಕೇಟ್ ಬುಕ್ ಮಾಡಿ ಸೀಟು ಕಾಯ್ದಿರಸಬಹದು..! ನಿನ್ನೆಯಿಂದಲೇ ಅಂದರೆ ನವೆಂಬರ್ 12ರಿಂದ ಈ ಅವಕಾಶ ಲಭ್ಯವಾಗುತ್ತಿದೆ. ಆದರೆ ಈ ಹೊಸ ನಿಯಮದ ಅನ್ವಯ ಟಿಕೆಟ್ ರದ್ಧತಿ ಶುಲ್ಕವನ್ನು ಎರಡುಪಟ್ಟು ಹೆಚ್ಚಿಸಲಾಗಿದೆ. ರೈಲು ನಿರ್ಗಮಿಸುವುದಕ್ಕಿಂತ ನಾಲ್ಕು ಗಂಟೆ (4ಗಂಟೆ) ಮೊದಲೇ ರೀಫಂಡ್ ಹಣವನ್ನು ಪಡೆದುಕೊಳ್ಳಬೇಕಾಗುತ್ತದೆ. ರೈಲು ನಿರ್ಗಮಿಸಿದ ನಂತರ ಯಾವುದೇ ಕಾರಣಕ್ಕೂ ಆ ಹಣವನ್ನು ವಾಪಸ್ಸು ಕೊಡಲಾಗುವುದಿಲ್ಲವೆಂದು ಹಿರಿಯ ರೈಲ್ವೇ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಮೊದಲೇ ಹೇಳಿರುವಂತೆ ನಿನ್ನೆಯಿಂದಲೇ (ನವೆಂಬರ್ 12) ಈ ಪರಿಷ್ಕೃತ ಹೊಸ ನಿಯಮ ಜಾರಿಗೆ ಬಂದಿದೆ. ಈ ಹೊಸ ನಿಯಮದ ಪ್ರಮುಖ ಅಂಶಗಳು
1. ಈ ಪ್ರಕಾರ ರೈಲು ನಿರ್ಗಮನದ 48 ಗಂಟೆಯೊಳಗೆ 30 ರೂಪಾಯಿಗಳಷ್ಟಿದ್ದ ದ್ವಿತೀಯ ದರ್ಜೆ ಅಥವಾ ಸೆಕೆಂಡ್ ಕ್ಲಾಸ್ ಟಿಕೆಟ್ ರದ್ದತಿ ಶುಲ್ಕ ಎರಡುಪಟ್ಟಿನಷ್ಟು ಹೆಚ್ಚಾಗಿ 60 ರೂಪಾಯಿಗಳಾಗಿವೆ..! ಅಂದರೆ ಸೆಕೆಂಡ್ ಕ್ಲಾಸ್ ಟಿಕೆಟ್ ರದ್ದತಿ ಶುಲ್ಕ 30 ರೂಪಾಯಿಗಳಿಂದ 60 ರೂಪಾಯಿಗಳಿಗೆ ಹೆಚ್ಚಾಗಿದೆ. ಎಸಿ ಟಿಕೆಟ್ ದರ 90 ರೂಪಾಯಿಗಳಿಂದ 180 ರೂಪಾಯಿಗಳಿಗೆ ಏರಿಕೆಯಾಗಿದೆ..!
2. ಸೆಕೆಂಡ್ ಸ್ಲೀಪರ್ ಕ್ಲಾಸಿನ ರದ್ದತಿ ಶುಲ್ಕ 60 ರೂಪಾಯಿಗಳಿಂದ 120 ರೂಪಾಯಿಗಳಿಗೆ ಏರಿಕೆಯಾಗಿದೆ..! ಅದೇರೀತಿ ಸೆಕೆಂಡ್ ಎಸಿ ರದ್ದತಿಯ ಶುಲ್ಕವೂ 100 ರೂಪಾಯಿಯಿಂದ 200 ರೂಪಾಯಿಗಳಿಗೆ ಹೆಚ್ಚಾಗಿದೆ..!
3. ವೇಟಿಂಗ್ ಲಿಸ್ಟ್ ಅಥವಾ ಕಾಯ್ದಿಟ್ಟಿದ್ದ ಮತ್ತು ಆರ್.ಎ.ಸಿ. ಟಿಕೆಟ್ ಗಳ ರೀಫಂಡ್ ಹಣವನ್ನು ರೈಲು ನಿರ್ಗಮಿಸುವ ಅರ್ಧಗಂಟೆ ಮೊದಲು ಪಡೆಯ ತಕ್ಕದ್ದು..! ಇಲ್ಲದೇ ಹೋದರೆ ಹಣ ರೀಫಂಡ್ ಆಗಲ್ಲ..!
4. ರೈಲು ನಿರ್ಗಮನದ 48ಗಂಟೆ ಮತ್ತು 12 ಗಂಟೆಯ ಮೊದಲು ರದ್ದತಿ ಶುಲ್ಕ ಟಿಕೆಟ್ ದರ ಶೇಕಡ 25ರಷ್ಟಿರುತ್ತದೆ..!
5. ರೈಲು ನಿರ್ಗಮನದ 48ಗಂಟೆ ಮತ್ತು 6 ಗಂಟೆಯ ಮೊದಲು ಕೂಡ ರದ್ದತಿ ಶುಲ್ಕ 25% ..! ರೈಲು ನಿರ್ಗಮನದ ಆರುಗಂಟೆಗೆ ಮುಂಚಿತವಾಗಿ, ರೈಲು ನಿರ್ಗಮನವಾಗುವ 2 ಗಂಟೆ ಅವಧಿ ತನಕವೂ ರದ್ದತಿ ಶುಲ್ಕ ಶೇ50..!
ಹೀಗೆ ರೈಲ್ವೇ ಪರಿಷ್ಕೃತ ನಿಯಮದಲ್ಲಿ ಬದಲಾವಣೆ ತರಲಾಗಿದ್ದು ಇದಕ್ಕೆ ಸಂಬಂಧಿಸಿದಂತೆ ರೀಫಂಡ್ ನಿಯಮದ ಬದಲಾದ ಪಟ್ಟಿ ಈ ಕೆಳಗಿದೆ.
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ಕರ್ನಾಟಕ ಸರ್ಕಾರಕ್ಕೆ ಜನಸಾಮಾನ್ಯನ ಪ್ರಶ್ನೆಗಳು..! ಕನಿಷ್ಟ ಕಾಕತಾಳೀಯ ಅಂತಾದ್ರೂ ಹೇಳಿ..! ಸಮಾಧಾನ ಮಾಡ್ಕೋತೀವಿ..!
ಊಟಕ್ಕೆ ಆರ್ಡರ್ ಮಾಡಿದವಳು ಬೆಂಗಳೂರನ್ನೇ ಬಿಟ್ಟು ಹೋಗಿದ್ದೇಕೆ..?
ಇವರು ಬೆಂಗಳೂರಿನ ಉಕ್ಕಿನ ಮನುಷ್ಯ..! ಇಂಥಾ ಕೆಲಸ ಮಾಡೋರು ತುಂಬಾ ಅಪರೂಪ..!
ಈತನೇ ನೋಡಿ ವಿಶ್ವದ ಅತಿ ಶ್ರೀಮಂತ ಕ್ಷೌರಿಕ..! ಈತನ ಬಳಿ ಇವೆ 250ಕ್ಕೂ ಹೆಚ್ಚು ಐಶಾರಾಮಿ ಕಾರುಗಳು..!
ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!
ಲಾಭದಾಯಕ ಕೆಲಸವನ್ನು ಬಿಟ್ಟು ಬಂದವರು..! ಅಷ್ಟಕ್ಕೂ ಇವರೆಲ್ಲಾ ಕೆಲಸ ಬಿಟ್ಟಿದ್ದೇಕೆ ಗೊತ್ತಾ..?!
ಅಲ್ಲಿ ಏನೆಲ್ಲಾ ಬಾಡಿಗೆ ಸಿಗುತ್ತೆ ಗೊತ್ತಾ..? ಜಪಾನಿಗರ ಬಾಡಿಗೆ ಪ್ರೀತಿ..!
ನಮ್ಮ ಶಂಕ್ರಣ್ಣ ಇನ್ನೂ ಇರಬೇಕಾಗಿತ್ತು..! ಹುಟ್ಟು ಹಬ್ಬದ ಶುಭಾಶಯಗಳು ಶಂಕ್ರಣ್ಣ..! ಶಂಕರ್ ನಾಗ್ ಮತ್ತೆ ಹುಟ್ಟಿಬನ್ನಿ…
ಆಕೆಗೂ ತಾನು ಗರ್ಭಿಣಿ ಅಂತ ಗೊತ್ತೇ ಇರ್ಲಿಲ್ಲ..! ಇದ್ದಕ್ಕಿದ್ದಂತೆ ಮಗು ಹುಟ್ಟಿ ಬಿಡುತ್ತೆ..!
ಒಂಬತ್ತು ವರ್ಷದ ಪೋರ ಕಂಪನಿಯೊಂದರ ಸಿಇಒ..! ಈ ಪೋರ ಆ್ಯಪ್ ಡೆವಲಪರ್, ಸೈಬರ್ ಸೆಕ್ಯುರಿಟಿ ಎಕ್ಸ್ ಪರ್ಟ್..!